ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೀಗ ಕರಿಯರ್ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಹಲವು ಗೊಂದಲಗಳಿಗೆ ತೆರೆ ಏಳೆದಿದ್ದಾರೆ. ಏನದು ಅರ್ಜುನ್ ನಿರ್ಧಾರ?
ಮುಂಬೈ (ಆ.21) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆ ಬಹುಕಾಲದ ಗೆಳತಿ ಸಾನಿಯಾ ಚಂದೋಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿ ಮದುವೆ ಮಹೋತ್ಸವದಲ್ಲಿ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ಮದುವೆ ಬಳಿಕ ಐಪಿಎಲ್ ಟೂರ್ನಿ ಆಡಿದ ಅರ್ಜುನ್ ತೆಂಡೂಲ್ಕರ್ ಇದೀಗ ಕರಿಯರ್ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಗೊಂದಲ ಸೇರಿದಂತೆ ಹಲವು ಊಹಾಪೋಹಗಳಿಗೆ ತೆರೆ ಏಳೆದಿದ್ದಾರೆ.
ಅರ್ಜುನ್ ತೆಂಡೂಲ್ಕರ್ ತೆಗೆದುಕೊಂಡ ನಿರ್ಧಾರವೇನು?
ಐಪಿಎಲ್ ಟೂರ್ನಿ ಬಳಿಕ ವಿಶ್ರಾಂತಿಗೆ ಜಾರಿದ್ದ ಅರ್ಜುನ್ ತೆಂಡೂಲ್ಕರ್ ಪತ್ನಿ ಸಾನಿಯಾ ಚಂದೋಕ್ ಜೊತೆ ಪ್ರವಾಸದಲ್ಲಿದ್ದರು. ದೇಶಿ ಮಟ್ಟದಲ್ಲಿ ಗೋವಾ ರಾಜ್ಯದ ಪರ ಕ್ರಿಕೆಟ್ ಆಡುವ ಅರ್ಜುನ್ ತೆಂಡೂಲ್ಕರ್ ಕರಿಯರ್ ಕುರಿತು ಅನುಮಾನಗಳು ವ್ಯಕ್ತವಾಗಿತ್ತು. ಇತ್ತೀಚೆಗೆ ಗೋವಾ ತಂಡದ ಓಮನ್ ಪ್ರವಾಸಕ್ಕೂ ಅರ್ಜುನ್ ತೆಂಡೂಲ್ಕರ್ ಗೈರಾಗಿದ್ದರು. ಇದಕ್ಕೂ ಮೊದಲು ಕೆಲ ಟೂರ್ನಿಗಳಿಗೂ ಗೈರಾಗಿದ್ದರು. ಹೀಗಾಗಿ ಅರ್ಜುನ್ ತೆಂಡೂಲ್ಕರ್ ಗೋವಾ ತಂಡ ತೊರೆಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಈ ಕುರಿತು ಸ್ಪಷ್ಟನೆ ಹೊರಬಿದ್ದಿದೆ. ಅರ್ಜುನ್ ತೆಂಡೂಲ್ಕರ್ ಗೋವಾ ತಂಡದಲ್ಲೇ ಮುಂದುವರಿಯುತ್ತಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಮುಂಬರುವ ದೇಶಿ ಟೂರ್ನಿಯಲ್ಲಿ ಗೋವಾ ತಂಡದ ಮುಂದುವರಿಯುವುದಾಗಿ ಅರ್ಜುನ್ ತೆಂಡೂಲ್ಕರ್ ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ ಈಗಾಗಲೇ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಕ್ ಸ್ಕಿಲ್ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಗೋವಾ ರಣಜಿ ತಂಡದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಅರ್ಜುನ್ ತೆಂಡೂಲ್ಕರ್ ಈ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನ ನೀಡಲು ಮುಂದಾಗಿದ್ದಾರೆ.
2022-23ರಲ್ಲಿ ಮುಂಬೈ ತೊರೆದು ಗೋವಾ ಸೇರಿದ್ದ ಅರ್ಜುನ್
ಮುಂಬೈ ತಂಡದ ಪರ ಆಡುತ್ತಿದ್ದ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶದ ಕೊರತೆ ಎದುರಾಗಿತ್ತು. ಕೆಲ ವರ್ಷಗಳ ಕಾಲ ಮುಂಬೈ ತಂಡದಲ್ಲಿ ಅವಕಾಶಕ್ಕಾಗಿ ಕಾದ ಅರ್ಜುನ್ ತೆಂಡೂಲ್ಕರ್ ಅನಿವಾರ್ಯವಾಗಿ ಮುಂಬೈ ತಂಡವನ್ನು ತೊರೆದಿದ್ದರು. ಮುಂಬೈ ತೊರೆದ ಅರ್ಜುನ್ ತೆಂಡೂಲ್ಕರ್ ಗೋವಾ ತಂಡ ಸೇರಿಕೊಂಡಿದ್ದರು. ಗೋವಾ ತಂಡ ಸೇರಿಕೊಂಡ ಬೆನ್ನಲ್ಲೇ ಶತಕ ಸಿಡಿಸಿ ಅಬ್ಬರಿಸಿದ್ದರು. ಗೋವಾ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅರ್ಜುನ್ ತೆಂಡೂಲ್ಕರ್ 50 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್ ಉತ್ತಮ ಪ್ರದರ್ಶನದ ಮೂಲಕ ಗಮನಸೆಳೆದಿದ್ದರು. ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ದಿಟ್ಟ ಪ್ರದರ್ಶನದ ಮೂಲಕ ಆಯ್ಕೆ ಸಮಿತಿ ಗಮನಸೆಳೆಯಲು ಮುಂದಾಗಿದ್ದಾರೆ.


