ಸದ್ಯ ಬಿ ಟೌನ್ ನಲ್ಲಿ ಹೊಸ ಜೋಡಿಗಳ ಹೆಸರು ಭಾರಿ ಸದ್ದು ಮಾಡುತ್ತಿದೆ. ಅವರು ಬೇರೆ ಯಾರೂ ಅಲ್ಲ ಶೆಹ್ನಾಜ್ ಗಿಲ್ ಮತ್ತು ರಾಘವ್ ಜುಯಾಲ್. ಹೌದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷಯ ವೈರಲ್ ಆಗುತ್ತಿದೆ. ಇದು ನಿಜಾನ? 

ಮತ್ತೆ ಪ್ರೀತಿಯಲ್ಲಿ ಬಿದ್ರಾ ಶೆಹ್ನಾಜ್ ಗಿಲ್

ಶೆಹ್ನಾಜ್ ಗಿಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ನಂತರ ಯಾವಾಗಲೂ ಸುದ್ದಿಯಲ್ಲಿರುವ ಹೆಸರು ಶೆಹ್ನಾಜ್ ಗಿಲ್. ಶೆಹ್ನಾಜ್ ಮತ್ತು ಸಿದ್ಧಾರ್ಥ್ ಶುಕ್ಲಾ ಜೋಡಿಯನ್ನು ಜನ ಇಷ್ಟಪಟ್ಟಿದ್ದರು. ಆದರೆ ಬಳಿಕ ಏನಾಯ್ತು ಅನ್ನೋದು ನಿಮಗೆ ಗೊತ್ತೇ ಇದೆ. ಇದೀಗ ಶೆಹ್ನಾಜ್ ಜೀವನದಲ್ಲಿ ಇದೀಗ ಮತ್ತೆ ಪ್ರೀತಿ ಆಗಿದೆ ಎನ್ನಲಾಗುತ್ತಿದೆ. ಡ್ಯಾನ್ಸರ್ ಹಾಗೂ ನಟ ರಾಘವ್ ಜುಯಾಲ್ ಜೊತೆ ಇವರ ಹೆಸರು ಕೇಳಿ ಬರುತ್ತಿದೆ. ಇತ್ತೀಚೆಗೆ, ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು, ಶೆಹ್ನಾಜ್ ರಾಘವ್ ಅವರ ಕೈಯನ್ನು ಬಿಗಿಯಾಗಿ ಹಿಡಿದಿದ್ದರು. ಈ ವೈರಲ್ ಆಗುತ್ತಿದ್ದಂತೆ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೆಹ್ನಾಜ್ ಗಿಲ್ ಅವರ ಹಿಂದಿನ ಜೀವನ

ಶೆಹ್ನಾಜ್ ಗಿಲ್ ಸಿದ್ಧಾರ್ಥ್ ಶುಕ್ಲಾ ಪ್ರೀತಿ ಮನೆಮಾತಾಗಿದ್ದು. ಅವರ ಜೋಡಿ ಬಿಗ್ ಬಾಸ್‌ನಲ್ಲಿ ಎಲ್ಲರ ಹೃದಯಗಳನ್ನು ಗೆದ್ದಿತು. ಸಿದ್ಧಾರ್ಥ್ ಅಕಾಲಿಕ ಮರಣದ ಬಳಿಕ ಶೆಹ್ನಾಜ್ ಜೀವನ ಸಂಪೂರ್ಣವಾಗಿ ಬದಲಾಯಿತು. ಈ ನೋವನ್ನು ನಿವಾರಿಸಲು, ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಶೆಹ್ನಾಜ್, ಹಲವಾರು ಸಿನಿಮಾಗಳು ಮತ್ತು ಕಾರ್ಯಕ್ರಮಗಳಲ್ಲಿ ಕೆಲಸ ಮಾಡುವ ಮೂಲಕ ಜನಪ್ರಿಯತೆ ಪಡೆದರು. ಈ ಸಮಯದಲ್ಲಿ ಶೆಹ್ನಾಜ್ ಹಳೆಯ ಸಂಬಂಧ, ಹಳೆಯ ನೆನಪುಗಳಿಂದ ನಟಿ ಮೂವ್ ಆನ್ ಆಗಿದ್ದಾರೆ ಎಂದು ಈ ಹಿಂದೆ ನಟಿ ಹೇಳಿದ್ದರು. ಈಗ, ನಟಿಯ ಜೀವನದಲ್ಲಿ ಮತ್ತೆ ಪ್ರೀತಿಯಾಗಿದೆ. ಅವರು ಈ ಹಿಂದೆ ರಾಘವ್ ಜುಯಾಲ್ ಜೊತೆ ಸ್ನೇಹಿತರಾಗಿದ್ದರು. ಇಬ್ಬರು ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಸದ್ಯ ವರದಿಯಾಗಿರುವಂತೆ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ.

ವಿಡಿಯೋ ವೈರಲ್ 

ಶೆಹನಾಜ್ ಮತ್ತು ರಾಘವ್ ಅವರ ಹೊಸ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ, ರಾಘವ್ ಮತ್ತು ಶೆಹನಾಜ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರೊಂದಿಗೆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಹಲವು ಸೆಲೆಬ್ರಿಟಿಗಳು ಇದ್ದರೂ ಸಹ ಜನರ ಗಮನ ಸೆಳೆದದ್ದು ರಾಘವ್ ಮತ್ತು ಶೆಹನಾಜ್. ಶೆಹನಾಜ್ ರಾಘವ್ ಅವರ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿರುವುದನ್ನು ನೋಡಿ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡಿಲ್ಲ. ಶೆಹ್ನಾಜ್ ಮತ್ತು ರಾಘವ್ ಪರಿಚಿತರಾಗಿದ್ದು ಸಲ್ಮಾನ್ ಖಾನ್ ಅವರ "ಕಿಸಿ ಕಾ ಭಾಯ್ ಕಿಸಿ ಕಿ ಜಾನ್" (2023) ಚಿತ್ರದ ಮೂಲಕ. ನಂತರ ಇಬ್ಬರು ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.