- Home
- Entertainment
- Cine World
- ವಿಜಯ್ ದೇವರಕೊಂಡ ಬಳಿ ರಶ್ಮಿಕಾ 100 ಬಾರಿ ಕೇಳಿದ್ದೇನು? ಕಾಫಿ ವಿತ್ ಕರಣ್ ಶೋ ಪ್ರೋಮೋದಲ್ಲಿ ಮದುವೆ ಸೀಕ್ರೆಟ್ ಲೀಕ್!
ವಿಜಯ್ ದೇವರಕೊಂಡ ಬಳಿ ರಶ್ಮಿಕಾ 100 ಬಾರಿ ಕೇಳಿದ್ದೇನು? ಕಾಫಿ ವಿತ್ ಕರಣ್ ಶೋ ಪ್ರೋಮೋದಲ್ಲಿ ಮದುವೆ ಸೀಕ್ರೆಟ್ ಲೀಕ್!
Rashmika Mandanna Koffee With Karan 9 ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಜೋಡಿ ಇದೇ ಮೊದಲ ಬಾರಿಗೆ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿಗೆ ಭಾಗವಹಿಸುತ್ತಿದ್ದು ಮದುವೆ ಹಿಂದಿನ ಅಸಲಿ ಕತೆ ರಿವೀಲ್ ಮಾಡಿದ್ದಾರೆ. ಇಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಯಾರು ಗೊತ್ತಾ?

ಕಾಫಿ ವಿತ್ ಕರಣ್ ಶೋನಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ವಿಜಯ್ ದೇವರಕೊಂಡ(Vijay Deverakonda) ಈಗ ಸಂತೋಷದಿಂದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡನ್ನೂ ಚೆನ್ನಾಗಿ ನಿಭಾಯಿಸುತ್ತಿರುವ ಈ ಜೋಡಿ, ಇದೀಗ ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್ 9(Koffee With Karan 9)’ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ಇಬ್ಬರೂ ತಮ್ಮ ಮದುವೆ ಮತ್ತು ಪ್ರೀತಿಯ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕರಣ್ ಅವರ ಕಾರ್ಯಕ್ರಮದಲ್ಲಿ ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.
ಈ ಹಿಂದೆ ವಿಜಯ್ ದೇವರಕೊಂಡ ಅವರು ‘ಕಾಫಿ ವಿತ್ ಕರಣ್ 7’ ಕಾರ್ಯಕ್ರಮದಲ್ಲಿ ನಟಿ ಅನನ್ಯಾ ಪಾಂಡೆ ಜೊತೆ ಕಾಣಿಸಿಕೊಂಡಿದ್ದರು. ಆಗ ಅವರಿಬ್ಬರೂ ‘ಲೈಗರ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ರಶ್ಮಿಕಾ ಮತ್ತು ವಿಜಯ್ ಅವರಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಯಾರು?
ಇದೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕರಣ್ ಜೋಹರ್, 'ರಶ್ಮಿಕಾ ಮತ್ತು ವಿಜಯ್ ಅವರಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಯಾರು' ಎಂದು ಕೇಳುತ್ತಾರೆ. ಇದಕ್ಕೆ ವಿಜಯ್, ರಶ್ಮಿಕಾ ಅವರೇ ಮೊದಲು ‘ಮದುವೆಯಾಗೋಣ’ ಎಂದು ಹೇಳಿದ್ದರು ಎಂಬರ್ಥದಲ್ಲಿ ಉತ್ತರಿಸುತ್ತಾರೆ. ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸುವ ಅವರು, 'ನೀನು 100 ಬಾರಿ ಕೇಳಿದಿ. ಅದಕ್ಕೆ ನಾನು ಒಕೆ ಮದುವೆಯಾಗೋಣ ಅಂದೆ' ಎಂದು ಹೇಳುತ್ತಾರೆ. ತಕ್ಷಣ ಕರಣ್, 'ನೀವು ನಿಜವಾಗಿಯೂ 100 ಬಾರಿ ಕೇಳಿದ್ದೀರಾ? ರಶ್ಮಿಕಾ?' ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ರಶ್ಮಿಕಾ, 'ನಾನು ಅವರ ಬಳಿ ಒಂದು ವರ್ಷ ಪೂರ್ತಿ ಕೇಳಿದ್ದೆ' ಎಂದು ನಗುತ್ತಾ ಉತ್ತರಿಸುತ್ತಾರೆ.
ಅಲ್ಲು ಅರ್ಜುನ್, ರಣಬೀರ್ ಇಬ್ಬರಲ್ಲಿ ರಶ್ಮಿಕಾಗೆ ಯಾರು ಇಷ್ಟ?
ಕಾರ್ಯಕ್ರಮದಲ್ಲಿ ರಶ್ಮಿಕಾ ತಮ್ಮ ನೆಚ್ಚಿನ ಸಹನಟನ ಬಗ್ಗೆಯೂ ಮಾತನಾಡಿದ್ದಾರೆ. ರಣಬೀರ್ ಕಪೂರ್ ಮತ್ತು ಅಲ್ಲು ಅರ್ಜುನ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ಕೇಳಿದಾಗ, ಅವರು ಅಲ್ಲು ಅರ್ಜುನ್ ಅವರ ಹೆಸರನ್ನು ಹೇಳುತ್ತಾರೆ. ಬಳಿಕ ಕರಣ್, 'ರಶ್ಮಿಕಾ ಅವರನ್ನು ಬಿಟ್ಟರೆ, ತೆರೆಯ ಮೇಲೆ ನಿಮಗೆ ಯಾರು ಉತ್ತಮ ಜೋಡಿ ಎನಿಸುತ್ತಾರೆ?' ಎಂದು ವಿಜಯ್ ಅವರನ್ನು ಕೇಳುತ್ತಾರೆ. ಆಗ ವಿಜಯ್ ಉತ್ತರಿಸುವ ಮೊದಲೇ ರಶ್ಮಿಕಾ, 'ಯಾರೂ ಇಲ್ಲ' ಎಂದು ತಕ್ಷಣ ಉತ್ತರಿಸುತ್ತಾರೆ. ಆಗ ವಿಜಯ್, 'ಮದುವೆಯಲ್ಲಿ ಮೊದಲ ನಿಯಮವೆಂದರೆ ಹೆಂಡತಿ ಹೇಳಿದ್ದಕ್ಕೆ ಒಪ್ಪಿಕೊಳ್ಳುವುದು' ಎಂದು ತಮಾಷೆ ಮಾಡುತ್ತಾರೆ. ಇದನ್ನು ಕೇಳಿ ರಶ್ಮಿಕಾ ಜೋರಾಗಿ ನಗುತ್ತಾರೆ.
ರಶ್ಮಿಕಾ-ವಿಜಯ್ ಮದುವೆ ಹಿನ್ನೆಲೆ
ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಫೆಬ್ರವರಿ 26, 2026ರಂದು ಉದಯಪುರದಲ್ಲಿ ನಡೆದಿತ್ತು. ಮದುವೆಯ ಫೋಟೋಗಳು, ಅವರ ಮದುವೆಯ ಉಡುಗೆ ಸೋಷಿಯಲ್ ಮೀಡಿಯಾದ ಹೆಚ್ಚು ವೈರಲ್ ಆಗಿತ್ತು. ಇವರ ಮದುವೆ ಬಗ್ಗೆ ಅಭಿಮಾನಿಗಳಲ್ಲಿಯೂ ಸಾಕಷ್ಟು ಕುತೂಹಲ ಮೂಡಿತ್ತು.
‘ಗೀತ ಗೋವಿಂದಂ’ ಚಿತ್ರದ ಮೂಲಕ ಗಟ್ಟಿಯಾಯ್ತು ಪ್ರೀತಿ!
ಈ ಜೋಡಿಯ ಪರಿಚಯ ‘ಗೀತ ಗೋವಿಂದಂ’ ಚಿತ್ರದ ಮೂಲಕ ಮತ್ತಷ್ಟು ಗಟ್ಟಿಯಾಯಿತು. 2017ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ನಂತರವೂ ಹಲವು ವರ್ಷಗಳ ಕಾಲ ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ, ರಶ್ಮಿಕಾ ಮತ್ತು ವಿಜಯ್ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಕೊನೆಗೆ ಇಬ್ಬರು ಮದುವೆಯಾಗಲು ನಿರ್ಧರಿಸಿ ನಿಶ್ಚಿತಾರ್ಥವಾದಾಗಲೇ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
