ಭಾರತೀಯರಿಗೆ ಚಿನ್ನ ಕೇವಲ ಆಭರಣವಲ್ಲ, ಅದೊಂದು ಪ್ರಮುಖ ಹೂಡಿಕೆಯಾಗಿದೆ. ಆದರೆ ಸರಿಯಾದ ಮಾಹಿತಿ ಇಲ್ಲದೆ ಚಿನ್ನ ಖರೀದಿಸಿದರೆ ನೀವು ತೀವ್ರ ನಷ್ಟ ಅನುಭವಿಸಬಹುದು. ಆದ್ದರಿಂದ ಹಾಲ್ ಮಾರ್ಕ್, ಕ್ಯಾರೆಟ್ ವ್ಯತ್ಯಾಸ, ಮೇಕಿಂಗ್ ಚಾರ್ಜ್ ಮತ್ತು ಬಿಲ್ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.
ಭಾರತೀಯರಿಗೆ ಚಿನ್ನ ಎಂದರೆ ಕೇವಲ ಆಭರಣ ಅಷ್ಟೇ ಅಲ್ಲ, ಒಂದು ಮುಖ್ಯವಾದ ಹೂಡಿಕೆ ಮಾರ್ಗವಾಗಿದೆ. ಆದರೆ ಚಿನ್ನದ ಆಭರಣ ಖರೀದಿ ಸರಿಯಾದ ಮಾಹಿತಿ ಇಲ್ಲದಿದ್ದರೆ, ನೀವು ತೀವ್ರವಾಗಿ ನಷ್ಟ ಎದುರಿಸುತ್ತೀರಿ. ಪ್ರಮುಖವಾಗಿ ಚಿನ್ನದ ಮೇಲಿನ ಹಾಲ್ ಮಾರ್ಕ್, 6 ಅಂಕಿಗಳ HUID ಕೋಡ್ ಇದೆಯಾ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬೇಕು. ಆದರೆ ಕೆಲವು ಎಚ್ಚರಿಕೆಗಳನ್ನು ಪಾಲಿಸಿದರೆ, ನಿಮ್ಮ ಕಷ್ಟಕ್ಕೆ ತಕ್ಕ ಮೌಲ್ಯ ಸಿಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಚಿನ್ನ ಖರೀದಿಸುವಾಗ ನೀವು ಮೋಸ ಹೋಗದಿರಲು ಈ ಗುಟ್ಟು ತಿಳಿಯಿರಿ!
ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಭಾರೀ ಪ್ರಾಮುಖ್ಯತೆ ಇದೆ. ಹಬ್ಬ, ಮದುವೆ, ಶುಭ ಕಾರ್ಯಕ್ರಮಗಳ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡುತ್ತಾರೆ. ಹಲವರು ಚಿನ್ನವನ್ನು ತುರ್ತು ಸಮಯದಲ್ಲಿ ಬಳಕೆ ಮಾಡುವ ಉದ್ದೇಶದಿಂದಲೇ ಖರೀದಿ ಮಾಡುತ್ತಾರೆ. ಆದರೆ ಜ್ಯುವೆಲರಿ ಶಾಪ್‌ಗೆ ಹೋಗುವ ಮುನ್ನ ಕೆಲವು ಪ್ರಾಥಮಿಕ ವಿಚಾರಗಳನ್ನು ತಿಳಿದುಕೊಳ್ಳಬೇಕು. ಈ ಮಾಹಿತಿ ಗೊತ್ತಿಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಖರೀದಿದಾರರು ಸಾಮಾನ್ಯವಾಗಿ ಮಾಡುವ ತಪ್ಪುಗಳು, ಅವುಗಳನ್ನು ತಿದ್ದಿಕೊಳ್ಳುವ ಮಾರ್ಗಗಳು ಇಲ್ಲಿದೆ ನೋಡಿ.
ಹಾಲ್ ಮಾರ್ಕ್ ಗಮನಿಸಿ
ಬಂಗಾರ ಸ್ವಚ್ಛತೆಯನ್ನು ನಿರ್ಧಾರ ಮಾಡುವ ಬಿಐಎಸ್ ಹಾಲ್ ಮಾರ್ಕ್. ಚಿನ್ನ ಖರೀದಿ ಮಾಡುವ ಸಂದರ್ಭದಲ್ಲಿ ಆಭರಣ ಮೇಲಿನ ಹಾಲ್ ಮಾರ್ಕ್ ಮುದ್ರೆಯೊಂದಿಗೆ 6 ಅಂಕಿಗಳ Hallmark Unique Identification ನಂಬರ್ ಇದೆಯಾ ಅಂತ ಖಚಿತಪಡಿಸಿಕೊಳ್ಳಬೇಕು. ಈ ಕೋಡ್ ಇದ್ದರೆ ಮಾತ್ರ ಅಸಲಿ ಚಿನ್ನ ಎಂದು ಗುರುತಿಸಲಾಗುತ್ತದೆ. ಬಿಐಎಸ್ ಕೇರ್ ಆಪ್ ಮೂಲಕ ಈ ನಂಬರ್‌ನ್ನು ಉಚಿತವಾಗಿ ಪರೀಕ್ಷೆ ಮಾಡಿಕೊಳ್ಳಬಹುದು.
![]()
ಚಿನ್ನ ಕ್ಯಾರೆಟ್ ವ್ಯತ್ಯಾಸ ಗುರುತಿಸಿ
ಚಿನ್ನದ ಆಭರಣ ಸಾಮಾನ್ಯವಾಗಿ 22 ಕ್ಯಾರೆಟ್ ಅಥವಾ 18 ಕ್ಯಾರೆಟ್ ಗೋಲ್ಡ್ ಇರುತ್ತದೆ. 24 ಕ್ಯಾರೆಟ್ ಚಿನ್ನದ ಬಿಸ್ಕೆಟ್, ಕಾಯಿನ್ ರೂಪದಲ್ಲಿ ಲಭ್ಯವಾಗುತ್ತದೆ. ಆದರೆ ಕೆಲವು ಸಂದರ್ಭದಲ್ಲಿ 24 ಕ್ಯಾರೆಟ್ ಬೆಲೆಗೆ ನಿಮಗೆ 22ಕೆ, 18ಕೆ ಆಭರಣಗಳನ್ನು ನೀಡಿ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಖರೀದಿ ಮಾಡಿದ ಆಭರಣ ಯಾವ ಕ್ಯಾರೆಟ್ ಗೋಲ್ಡ್ ಎಂದು ಬಿಲ್‌ನಲ್ಲಿ ಸ್ಪಷ್ಟವಾಗಿ ನೋಡಿಕೊಳ್ಳಬೇಕು.
ಮೇಕಿಂಗ್ ಚಾರ್ಜ್, ಶುಲ್ಕಗಳು
ಆಭರಣದ ತಯಾರಿಗೆ ಜ್ಯುವೆಲರಿ ಶಾಪ್ ಮಾಲೀಕರು ಮೇಕಿಂಗ್ ಚಾರ್ಜ್, ಶುಲ್ಕ ಹೆಸರಿನಲ್ಲಿ ಸ್ವಲ್ಪ ಹೆಚ್ಚುವರಿ ಚಾರ್ಜ್ ವಿಧಿಸುತ್ತಾರೆ. ಇದು ಒಂದೊಂದು ಶಾಪ್‌ನಲ್ಲಿ ಒಂದೊಂದು ರೀತಿ ವಿಧಿಸಲಾಗುತ್ತದೆ. ಖರೀದಿ ಮಾಡುವ ಮುನ್ನ ಶಾಪ್‌ನಲ್ಲಿ ಮೇಕಿಂಗ್ ಚಾರ್ಜ್ ಹೋಲಿಕೆ ಮಾಡಿ ನೋಡಿಕೊಳ್ಳಬೇಕು. ಈ ಚಾರ್ಜಸ್ ಕಡಿಮೆ ಮಾಡಲು ಮಾಲೀಕರೊಂದಿಗೆ ಮಾತನಾಡಬಹುದು.
ವಜ್ರದ ಬೆಲೆ, ಹರಳು ತೂಕ
ಹರಳು ಅಥವಾ ವಜ್ರ ಇರುವ ಚಿನ್ನಾಭರಣ ಖರೀದಿ ಮಾಡುವ ಸಂದರ್ಭದಲ್ಲಿ ಒಟ್ಟಾರೆ ತೂಕದಲ್ಲಿ ಅವುಗಳ ತೂಕವನ್ನು ಮೈನಸ್ ಮಾಡಬೇಕು. ಇದರಿಂದ ನೀವು ಚಿನ್ನಕ್ಕೆ ಮಾತ್ರ ದರ ನಿಗದಿ ಮಾಡಬೇಕು. ಮಾರಾಟ ಮಾಡುವ ಸಂದರ್ಭದಲ್ಲಿ ಅಥವಾ ಖರೀದಿ ಮಾಡುವ ಸಂದರ್ಭದಲ್ಲಿ ಹರಳು ಮತ್ತು ವಜ್ರವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು.
ಬಿಲ್ ತೆಗೆದುಕೊಳ್ಳುವುದು
ಚಿನ್ನ ಖರೀದಿ ಮಾಡಿದ ಬಳಿಕ ಜಿಎಸ್‌ಟಿ, ಚಿನ್ನದ ಬೆಲೆ, ಚಿನ್ನದ ಶುದ್ಧತೆ, ಚಿನ್ನದ ಆ ದಿನದ ದರ, ಮೇಕಿಂಗ್ ಚಾರ್ಜ್ ಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಈ ಬಿಲ್ ಮಿಸ್ ಮಾಡ್ದೆ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಚಿನ್ನವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಅಥವಾ ಎಕ್ಸ್ ಚೇಂಜ್ ಮಾಡುವ ಸಂದರ್ಭದಲ್ಲಿ ಈ ಬಿಲ್ ಮೂಲ ದಾಖಲೆಯಾಗುತ್ತದೆ. ಚಿನ್ನ ಬೆಲೆ ಬದಲಾವಣೆಯಾಗುವ ಕಾರಣ, ಮೇಲೆ ತಿಳಿಸಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ನಿಮ್ಮ ಹಣಕ್ಕೆ ತಕ್ಕ ಚಿನ್ನ ಖರೀದಿ ಮಾಡಬೇಕು.


