
ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
ಬೆಂಗಳೂರು ಸೌಂದರ್ಯ ನಗರದಲ್ಲಿರುವ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭವ್ಯ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯಿತು.
ಬೆಂಗಳೂರು ಸೌಂದರ್ಯ ನಗರದಲ್ಲಿರುವ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭವ್ಯ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ವಾರ್ಷಿಕೋತ್ಸವ ಅದ್ಧೂರಿಯಾಗಿ ನೆರವೇರಿತು. ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ದೂರ ಪ್ರಯಾಣ ಸಾಧ್ಯವಾಗದ ಭಕ್ತರಿಗೆ ಇದೇ ದೈವಿಕ ಅನುಭವವನ್ನು ನೀಡುತ್ತಿರುವ ಈ ದೇವಾಲಯ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಕರಾವಳಿ ಶೈಲಿಯ ಸುತ್ತು ಪೌಳಿಯೊಂದಿಗೆ ನಿರ್ಮಿತ ಈ ದೇವಸ್ಥಾನವನ್ನು ಸೌಂದರ್ಯ ಮಂಜಪ್ಪ ಅವರ ಕನಸಿನಂತೆ ಪ್ರತಿಷ್ಠಾಪಿಸಲಾಗಿದೆ. ಕಾರ್ಯಕ್ರಮದಲ್ಲಿ ಉಡುಪಿ ಪರ್ಯಾಯ ಪೇಜಾವರ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಭಕ್ತಿಭಾವ ಹೆಚ್ಚಿಸಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ