ನವದೆಹಲಿ (ಆ.1): ಜಾಗತಿಕ ಅಸ್ಥಿರತೆ ಹಾಗೂ ಅವಲಂಬನೆಯಿಂದಾಗಿ ದೇಶದಲ್ಲಿ ತೈಲಾನಿಲ ತತ್ವಾರ ತಲೆದೋರದಂತೆ ತಪ್ಪಿಸುವ ಉದ್ದೇಶದಿಂದ, ಸಮುದ್ರದಾಳದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪಗಳ ಅನ್ವೇಷಣೆಗೆ ಕೇಂದ್ರ ಸರ್ಕಾರ 'ಸಮುದ್ರ ಮಂಥನ' ಎಂಬ ಯೋಜನೆ ಘೋಷಿಸಿದೆ. ಇದಕ್ಕಾಗಿ 84,084 ಕೋಟಿ ರು. ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಭಾರತವು ಸದ್ಯ ಅಗತ್ಯವಿರುವ ಕಚ್ಚಾತೈಲದ ಶೇ.88ರಷ್ಟನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿದೆ. ನೈಸರ್ಗಿಕ ಅನಿಲದ ವಿಷಯದಲ್ಲಿ ಈ ಪ್ರಮಾಣ ಶೇ.50ರಷ್ಟಿದೆ. ಹೀಗಿರುವಾಗ ಕಚ್ಚಾತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. 60 ಕೋಟಿ ಮೆಟ್ರಿಕ್ ಟನ್ ತೈಲ ಉತ್ಪಾದಿಸುವ ಸಾಮರ್ಥ್ಯದ ಹೊಸ ನಿಕ್ಷೇಪಗಳು ಪತ್ತೆಯಾಗುವ ನಿರೀಕ್ಷೆಯಿದೆ. ಇದು ಹೂಡಿಕೆಯನ್ನು ಆಕರ್ಷಿಸುವುದರ ಜತೆಗೆ ಉದ್ಯೋಗವನ್ನೂ ಸೃಷ್ಟಿಸುತ್ತದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..

11:00 PM (IST) Aug 01
10:45 PM (IST) Aug 01
Jason Sanjay Viral Interview: ತಮ್ಮ 'ಸಿಗ್ಮಾ' ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಜೇಸನ್ ಸಂಜಯ್, ತಮ್ಮ ತಂದೆ ದಳಪತಿ ವಿಜಯ್ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನ ಈಗ ಸಖತ್ ವೈರಲ್ ಆಗುತ್ತಿದೆ.
10:38 PM (IST) Aug 01
10:32 PM (IST) Aug 01
09:57 PM (IST) Aug 01
09:54 PM (IST) Aug 01
09:44 PM (IST) Aug 01
09:28 PM (IST) Aug 01
09:11 PM (IST) Aug 01
08:54 PM (IST) Aug 01
ಕನ್ನಡದ ಸ್ಟಾರ್ ನಟ ಯಶ್ ಅವರು ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಂತಹ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ನೀಡಿದ ಮಾಧ್ಯಮ ಸಂದರ್ಶನಗಳಲ್ಲಿ ರಾಮಾಯಣ ಮತ್ತು ರಾವಣನ ಬಗ್ಗೆ ಹೇಳೀರೋ ಮಾತೇನು ಗೊತ್ತಾ?
08:03 PM (IST) Aug 01
07:54 PM (IST) Aug 01
ಜಾನ್ವಿ ಕಪೂರ್ ಮತ್ತು ಇಶಾನ್ ಖಟ್ಟರ್ ಮತ್ತೆ ಒಂದಾಗಿದ್ದಾರೆ! ಇವರಿಬ್ಬರೂ ವಧು-ವರರಾಗಿ ಕಾಣಿಸಿಕೊಂಡಿರುವ ಒಂದು ಜಾಹೀರಾತಿನ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
07:48 PM (IST) Aug 01
2024ರ 'ಮಿಸ್ ಅಮೇರಿಕನ್ ಫೋರ್ಕ್' ಕಿರೀಟಧಾರಿ ಹಾಗೂ ಪತ್ರಕರ್ತೆ ಬ್ರೈನ್ ಕಾರ್ನೆಸೆಕ್ಕಾ (21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಸ್ಪರ್ಧೆಗಳ ಜೊತೆಗೆ 'ಎನ್ವಲಪ್ಸ್ ಆಫ್ ಹೋಪ್' ನಂತಹ ಸಾಮಾಜಿಕ ಉಪಕ್ರಮಗಳ ಮೂಲಕ ಗುರುತಿಸಿಕೊಂಡಿದ್ದ ಅವರ ನಿಧನವು ಆಘಾತವನ್ನುಂಟುಮಾಡಿದೆ.
07:35 PM (IST) Aug 01
07:08 PM (IST) Aug 01
06:55 PM (IST) Aug 01
ಮದುವೆಯಾದ ನಂತರವೂ ಆಲಿಯಾ ಭಟ್ ತಮ್ಮ ಫೋನ್‌ನಲ್ಲಿ ರಣಬೀರ್ ಕಪೂರ್ ಅವರ ಹೆಸರನ್ನು ಹೇಗೆ ಸೇವ್ ಮಾಡಿದ್ದರು ಗೊತ್ತಾ? ಈ ಮುದ್ದಾದ ಸೀಕ್ರೆಟ್ ಅನ್ನು ಅವರೇ ಒಮ್ಮೆ ರಿವೀಲ್ ಮಾಡಿದ್ದರು.
06:54 PM (IST) Aug 01
ಮನೋವಿಜ್ಞಾನದ ಪ್ರಕಾರ ವಂಚನೆಗೆ ಕೇವಲ ಸಂಬಂಧದಲ್ಲಿನ ಅತೃಪ್ತಿ ಮಾತ್ರ ಕಾರಣವಲ್ಲ. ಹಲವು ಬಾರಿ ಉತ್ತಮ ಮತ್ತು ತೃಪ್ತಿದಾಯಕ ಸಂಬಂಧದಲ್ಲಿ ಇರುವವರು ಕೂಡ ಸಂಗಾತಿಗೆ ವಂಚಿಸಬಹುದು. ಇದಕ್ಕೆ ಅನೇಕ ಮಾನಸಿಕ ಮತ್ತು ಸಾಮಾಜಿಕ ಕಾರಣಗಳಿವೆ.
06:28 PM (IST) Aug 01
05:05 PM (IST) Aug 01
04:56 PM (IST) Aug 01
04:24 PM (IST) Aug 01
04:22 PM (IST) Aug 01
ಪೆಹಲ್ಗಾಂನಲ್ಲಿ ಧರ್ಮ ಕೇಳಿ ಪ್ರವಾಸಿಗರ ಮೇಲಿನ ಉಗ್ರ ದಾಳಿ ಆಪರೇಶನ್ ಸಿಂದೂರ್ ಮೂಲಕ ಪ್ರತೀಕಾರ ತೀರಿಸಿಕೊಳ್ಳುವಂತಾಯಿತು. ಇದೀಗ ಕಾಶ್ಮೀರದ ಕುಲ್ಗಾಂನಲ್ಲಿ ಅದೇ ರೀತಿ ಧರ್ಮ ಕೇಳಿ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ.
03:53 PM (IST) Aug 01
ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿವೋ (Vivo) ಸಂಸ್ಥೆಯು ತನ್ನ ಟಿ-ಸರಣಿಯ (T-series) ಅಡಿಯಲ್ಲಿ ಹೊಸದಾಗಿ Vivo T5e ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಅದರ ವಿಶೇಷತೆ ಇಲ್ಲಿದೆ..
03:44 PM (IST) Aug 01
03:16 PM (IST) Aug 01
ಆಗಸ್ಟ್ 4ರಂದು ಅರವಿಂದ್ ಕೇಜ್ರಿವಾಲ್ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ನಿರ್ಬಂಧಿತ ಪ್ರಧಾನಿ ನಿವಾಸಕ್ಕೆ ಮಾರ್ಚ್ ಮಾಡುವುದಾಗಿ ಘೋಷಿಸಿದ್ದಾರೆ. ಕಾಕ್ರೋಚ್ ಹೋರಾಟ ತಣ್ಣಗಾದ ಬೆನ್ನಲ್ಲೇ 3 ಬೇಡಿಕೆ ಮುಂದಿಟ್ಟು ಕೇಜ್ರಿವಾಲ್ ಹೋರಾಟಕ್ಕೆ ಸಜ್ಜಾಗಿದ್ದಾರೆ.
03:13 PM (IST) Aug 01
ಸಾಮಾನ್ಯವಾಗಿ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಒಂದೇ ಹೃದಯ, ಒಂದೇ ಮೆದುಳು ಇರುತ್ತದೆ. ಹೃದಯ ಬಡಿತವಿದ್ದರೆ ಮಾತ್ರ ಜೀವವಿದೆ ಎಂದು ನಂಬುತ್ತೇವೆ. ಆದರೆ ಒಂದು ಜೀವಿಗೆ ಬರೋಬ್ಬರಿ 9 ಮೆದುಳುಗಳು ಮತ್ತು 3 ಹೃದಯಗಳಿವೆ. ಹಾಗಾದರೆ ಆ ಜೀವಿ ಯಾವುದು?
03:00 PM (IST) Aug 01
02:45 PM (IST) Aug 01
02:40 PM (IST) Aug 01
'ದಿ ಹಂಡ್ರೆಡ್' ಲೀಗ್ ಪಂದ್ಯದ ನಂತರ ಭಾರತದ ಜೆಮಿಮಾ ರೋಡ್ರಿಗಸ್ ಮತ್ತು ಪಾಕಿಸ್ತಾನದ ಫಾತಿಮಾ ಸನಾ ಪರಸ್ಪರ ಆಲಂಗಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆದಿದೆ.
01:44 PM (IST) Aug 01
'ಶ್ರೀನಿವಾಸ ಮಂಗಾಪುರಂ' ಚಿತ್ರಕ್ಕೆ ಮಹೇಶ್ ಬಾಬು ಅವರ ಭೌತಿಕ ಬೆಂಬಲ ಸಿಗದೇ ಇರುವುದು ಚಿತ್ರದ ಬಾಕ್ಸ್ ಆಫೀಸ್ ಮೇಲೆ ಮಾತ್ರವಲ್ಲದೆ, ಮಹೇಶ್ ಬಾಬು ಅವರ 'ಜೆಂಟಲ್‌ಮ್ಯಾನ್' ವರ್ಚಸ್ಸಿನ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಘಟ್ಟಮನೇನಿ ಕುಟುಂಬದಈ ‘ಸೈಲೆಂಟ್ ವಾರ್’ ಸದ್ಯ ಸಖತ್ ಸೌಂಡ್ ಮಾಡುತ್ತಿದೆ!
01:40 PM (IST) Aug 01
ಮೂರು ತಿಂಗಳ ನಾಯಿ ಮರಿಯನ್ನು ರಕ್ಷಿಸಲು ಪ್ರವಾಹ ಲೆಕ್ಕಿಸಿದೆ ಧುಮುಕಿದ್ದಾನೆ. ಆದರೆ ನಾಯಿ ಮರಿಯನ್ನು ರಕ್ಷಿಸುವ ಭರದಲ್ಲಿ 7ನೇ ತರಗತಿ ಬಾಲಕ ಕೊಚ್ಚಿ ಹೋಗಿದ್ದಾನೆ. ಬಾಲಕ ರಕ್ಷಿಸಿದ ನಾಯಿ ಮರಿ ಬಿಗಿದಪ್ಪಿ ಪೋಷಕರು ಕಣ್ಣೀರಿಡುತ್ತಿದ್ದಾರೆ.
01:05 PM (IST) Aug 01
2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ, ಶ್ರೀಲಂಕಾದ ಜಾವೆಲಿನ್ ಪಟು ರುಮೇಶ್ ತರಂಗಾ ಪಥಿರಾಗೆ 89.75 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು ಭಾರತದ ನೀರಜ್ ಚೋಪ್ರಾ ಅವರನ್ನು ಹಿಂದಿಕ್ಕಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಥ್ಲೆಟಿಕ್ಸ್‌ಗೆ ಬರುವ ಮುನ್ನ ಪಥಿರಗೆ ಓರ್ವ ವೇಗದ ಬೌಲರ್ ಆಗಿದ್ದ ಕ್ರಿಕೆಟಿಗ ಎನ್ನುವುದು ವಿಶೇಷ.
12:38 PM (IST) Aug 01
ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ನಟನೆಯ ರಾಮಾಯಣ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಅವರದೇ ಮತ್ತೊಂದು ಸಿನಿಮಾ ಟಾಕ್ಸಿಕ್ ಟ್ರೇಲರ್ ಅಧಿಕೃತ ಬಿಡುಗಡೆ ಬಗ್ಗೆ ಸುದ್ದಿ ಹೊರಬಿದ್ದಿದೆ. ಸ್ವತಃ ಯಶ್ ಹಾಗೂ ಚಿತ್ರತಂಡ 'ಟಾಕ್ಸಿಕ್' ಚಿತ್ರದ ಟ್ರೇಲರ್ ಬಿಡುಗಡೆಯನ್ನು ಕನ್ಫರ್ಮ್ ಮಾಡಿದೆ.
12:30 PM (IST) Aug 01
ದೇಶದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿಯಾದ ಮುಂಗಾರು ಮಾರುತಗಳು ಪ್ರಸಕ್ತ ಹಂಗಾಮಿನಲ್ಲಿ ತಮ್ಮ ಅರ್ಧಪ್ರಯಾಣ ಮುಗಿಸಿದ್ದು, ಈ ಅವಧಿಯಲ್ಲಿ ಅಲ್ಲಲ್ಲಿ ಉತ್ತಮ ಮಳೆ ಆಗಿದ್ದರೆ, ಅಲ್ಲಲ್ಲಿ ಬರವೂ ಕಂಡುಬಂದಿದೆ.
12:18 PM (IST) Aug 01
ಪ್ರವಿತ್ರ ಹಾಗೂ ಪ್ರಸಿದ್ಧ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಭಾರತೀಯ ರೈಲ್ವೇ ವಿಶೇಷ ಗಂಗಾ ಗಯಾ ಸಂಗಮ್ ಯಾತ್ರೆ ಆರಂಭಿಸಿದೆ. ಇದಕ್ಕಾಗಿ ಭಾರತ ಗೌರವ್ ಸ್ಪೆಷಲ್ ರೈಲು ನಿಯೋಜನೆ ಮಾಡಲಾಗಿದೆ. ಟಿಕೆಟ್ ಬೆಲೆ, ದಿನಾಂಕ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
11:57 AM (IST) Aug 01
09:53 AM (IST) Aug 01
08:54 AM (IST) Aug 01
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿದೆ. ಇದರೊಂದಿಗೆ, ಬಾಕ್ಸಿಂಗ್‌ನಲ್ಲಿ ಐವರು ಭಾರತೀಯ ಬಾಕ್ಸರ್‌ಗಳು ಫೈನಲ್ ಪ್ರವೇಶಿಸುವ ಮೂಲಕ ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ.
08:40 AM (IST) Aug 01
ವಂದೇ ಮಾತರಂಗೆ ಅವಮಾನಿಸುವುದು ಶಿಕ್ಷಾರ್ಹ ಅಪರಾಧ ಈ ಬಗ್ಗೆ ಗುರುವಾರ ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರವಾಗಿ ಟೀಕಿಸಿದೆ. ಈ ಮಸೂದೆ ಧಾರ್ಮಿಕ ಮತ್ತು ಸಾಂವಿಧಾನಿಕ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕರೆದಿದೆ.
08:30 AM (IST) Aug 01