ಮೂರು ತಿಂಗಳ ನಾಯಿ ಮರಿಯನ್ನು ರಕ್ಷಿಸಲು ಪ್ರವಾಹ ಲೆಕ್ಕಿಸಿದೆ ಧುಮುಕಿದ್ದಾನೆ. ಆದರೆ ನಾಯಿ ಮರಿಯನ್ನು ರಕ್ಷಿಸುವ ಭರದಲ್ಲಿ 7ನೇ ತರಗತಿ ಬಾಲಕ ಕೊಚ್ಚಿ ಹೋಗಿದ್ದಾನೆ. ಬಾಲಕ ರಕ್ಷಿಸಿದ ನಾಯಿ ಮರಿ ಬಿಗಿದಪ್ಪಿ ಪೋಷಕರು ಕಣ್ಣೀರಿಡುತ್ತಿದ್ದಾರೆ.

ಗುವ್ಹಾಟಿ (ಆ.01) ಅಸ್ಸಾಂ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಲ್ಲಿ ಮೃತಪಟ್ಟವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಹಲವು ಜಿಲ್ಲೆಗಳು ಮುಳುಗಡೆಯಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಶಾಲ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು, ಪರಿಹಾರ ಕಾರ್ಯಗಳು ಭರದಿಂದ ಸಾಗಿದೆ. ಇದರ ನಡುವೆ ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿದೆ. ತನ್ನ ಮೂರು ತಿಂಗಳ ಮುದ್ದಿನ ನಾಯಿ ಮರಿಯನ್ನು ಪ್ರವಾಹದಿಂದ ರಕ್ಷಿಸಲು 13 ವರ್ಷದ ಬಾಲಕ ಧುಮುಕಿದ್ದಾನೆ. ಆದರೆ ನಾಯಿ ಮರಿಯನ್ನು ರಕ್ಷಿಸಿದ ಬಾಲಕ ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆ ಶಿವಸಾಗರ ಜಿಲ್ಲೆಯಲ್ಲಿ ನಡೆದಿದೆ.

ಮನೆ ಒಳಗೆ ನುಗ್ಗಿ ನೀರು

ನಜೀರಾ ಟೀ ಎಸ್ಟೇಟ್‌ನಲ್ಲಿ ವಾಸ್ತವ್ಯದಲ್ಲಿದ್ದ ದೀಪಕ್ ಹಾಗೂ ಪರ್ಬಾತಿ ಪನಿಕಾ ಪುತ್ರ 13 ವರ್ಷದ ಹರ್ದೀಪ್ ಪನಿಕಾ ದುರಂತ ಅಂತ್ಯಕಂಡ ಬಾಲಕ. ಶಿವಸಾಗರ ಜಿಲ್ಲೆಯ ಬಹುತೇಕ ಬಾಗ ನೀರಿನಲ್ಲಿ ಮುಳುಗಿದೆ. ಹರ್ದೀಪ್ ಪನಿಕಾ ಮನೆಯೊಳಗೆ ನೀರು ನುಗ್ಗಿತ್ತು. ಒಂದೊಂದೆ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿತ್ತು. ಈ ವೇಳೆ ಪೋಷಕರು ಹಾಗೂ ಪುತ್ರನ ಜೊತೆ ಪ್ರವಾಹ ನೀರಿನಲ್ಲಿ ದಡ ಸೇರುವ ಪ್ರಯತ್ನ ಮಾಡಿದ್ದಾರೆ. ಇದರ ನಡುವೆ ಪ್ರವಾಹ ನೀರಿನಲ್ಲಿ ಮೂರು ತಿಂಗಳ ನಾಯಿ ಮರಿ ಕೊಚ್ಚಿ ಹೋಗುತ್ತಿತ್ತು. ತನ್ನ ಮುದ್ದಿನ ನಾಯಿ ಮರಿಯನ್ನು ರಕ್ಷಿಸಲು ಬಾಲಕ ನೀರಿಗೆ ಧುಮುಕಿದ್ದಾನೆ. ನಾಯಿ ಮರಿಯನ್ನು ಎತ್ತಿ ದಡಕ್ಕೆ ಹಾಕಿದ್ದಾನೆ. ಆದರೆ ರಭಸದಿಂದ ಹರಿಯುತ್ತಿದ್ದ ಪ್ರವಾಹದಲ್ಲಿ ಹರ್ದೀಪ್ ಪನಿಕಾ ಕೊಚ್ಚಿ ಹೋಗಿ ದುರಂತ ಅಂತ್ಯಕಂಡಿದ್ದಾನೆ.

ಮನೆಯೊಳಗೆ ನೀರು ನುಗ್ಗಿತ್ತಿದ್ದಂತೆ ಹರ್ದಿಪ್ ಪನಿಕಾ ಹಾಗೂ ಪತ್ನಿಗೆ ಸುರಕ್ಷಿತ ಮನೆಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಬಳಿಕ ತಂದೆ ನೀರು ತುಂಬಿದ ಮನೆಯೊಳಗೆ ತೆರಳಿ ದಾಖಲೆ ಪತ್ರಗಳನ್ನು ತೆಗೆದು ಹೊರಬಂದಿದ್ದಾರೆ. ಅಷ್ಟರಲ್ಲೇ ತನ್ನ ಮುದ್ದಿನ ನಾಯಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಬಾಲಕ ಗಮಿಸಿ ರಕ್ಷಿಸಲು ಧಾವಿಸಿದ್ದಾನೆ. ನಾಯಿ ಮರಿ ರಕ್ಷಿಸಿದ ಬಾಲಕ ನೀರಿನಲ್ಲಿ ಕೋಚ್ಚಿ ಹೋಗಿದ್ದಾನೆ. ಪೋಷಕರು ಕೂಗಳತೆ ದೂರದಲ್ಲೇ ಈ ಘಟನೆ ನಡೆದಿದೆ.

ಇತ್ತ ಸ್ಥಳೀಯರು ಬಾಲಕನ ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ನೀರಿನ ರಭಸದಲ್ಲಿ ಸಾಧ್ಯವಾಗಿಲ್ಲ. ಹರ್ದೀಪ್ ಪನಿಕಾ ತನ್ನ ನಾಯಿ ಮರಿಯನ್ನು ಮುದ್ದಿನಿಂದ ಸಾಕಿದ್ದ. ಇದಕ್ಕೆ ವರುಣ್ ಎಂದು ಹೆಸರಿಡಲಾಗಿತ್ತು. ತಮ್ಮ ಒಬ್ಬನೆ ಮಗನ ಕಳೆದುಕೊಂಡು ಪೋಷಕರು ಕಣ್ಣೀರಿಟ್ಟಿದ್ದಾರೆ. ಅಸ್ಸಾಂ ಪ್ರವಾಹ ಪರಿಸ್ಥಿತಿ ದಿನದಿಂದ ದಿನಕ್ಕೆ ಭೀಕರವಾಗುತ್ತಿದೆ. ಎನ್‌ಡಿಆರ್‌ಎಫ್ ಸೇರಿದಂತೆ ಹಲವು ರಕ್ಷಣಾ ತಂಡಗಳು ಸ್ಥಳದಲ್ಲಿದೆ.