Jason Sanjay Viral Interview: ತಮ್ಮ 'ಸಿಗ್ಮಾ' ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಜೇಸನ್ ಸಂಜಯ್, ತಮ್ಮ ತಂದೆ ದಳಪತಿ ವಿಜಯ್ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನ ಈಗ ಸಖತ್ ವೈರಲ್ ಆಗುತ್ತಿದೆ.
ತಮಿಳುನಾಡಿನ ರಾಜಕೀಯಕ್ಕೆ ಧುಮುಕಿರುವ ನಟ ದಳಪತಿ ವಿಜಯ್, ಇತ್ತೀಚೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಕೊನೆಯ ಚಿತ್ರ 'ಜನ ನಾಯಗನ್' ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ, ಅವರು ಕಾವೇರಿ ವಿಚಾರವಾಗಿ ಕರ್ನಾಟಕ ಪ್ರವಾಸ ಕೈಗೊಳ್ಳಲು ಯೋಜಿಸಿದ್ದಾರೆ.
ವಿಜಯ್ ಪುತ್ರ ಜೇಸನ್ ಸಂಜಯ್ 'ಸಿಗ್ಮಾ' ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಸಂದೀಪ್ ಕಿಶನ್ ನಾಯಕರಾಗಿರುವ ಈ ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಜೇಸನ್ ಸದ್ಯ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಖ್ಯಾತ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಮೊದಲ ಸಂದರ್ಶನದಲ್ಲಿ, ಹಾಲಿವುಡ್‌ಗೆ ಹೋದರೆ ಯಾರನ್ನು ಕರೆದೊಯ್ಯುತ್ತೀರಿ ಎಂಬ ಪ್ರಶ್ನೆಗೆ, 'ನನ್ನ ಮನಸ್ಸಿಗೆ ಬರುವ ಮೊದಲ ವ್ಯಕ್ತಿ ನನ್ನ ಅಪ್ಪ. ಇಬ್ಬರೂ ಕೋಟ್-ಸೂಟ್‌ನಲ್ಲಿ ಒಳ್ಳೆ ಕಾಂಬಿನೇಷನ್' ಎಂದು ಜೇಸನ್ ಉತ್ತರಿಸಿದ್ದಾರೆ. ಜೊತೆಗೆ, ಅಪ್ಪನೊಂದಿಗೆ ಸಿಎಸ್‌ಕೆ ಮ್ಯಾಚ್ ನೋಡಿದ ಬಾಲ್ಯದ ನೆನಪನ್ನೂ ಹಂಚಿಕೊಂಡರು.
ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರನ್ನು ಭೇಟಿಯಾದ ಅನುಭವವನ್ನೂ ಜೇಸನ್ ಹಂಚಿಕೊಂಡರು. 'ನಾನೂ ಯುವನ್ ಅವರ ದೊಡ್ಡ ಅಭಿಮಾನಿ' ಎಂದ ಜೇಸನ್, 'ಸಿಗ್ಮಾ' ಚಿತ್ರದಲ್ಲಿ ಯುವನ್ ಒಂದು ಹಾಡನ್ನು ಹಾಡಿದ್ದಾರೆ ಎಂಬ ಇಂಟರೆಸ್ಟಿಂಗ್ ವಿಚಾರವನ್ನು ಬಹಿರಂಗಪಡಿಸಿದರು.
ಫ್ಯಾನ್ಸ್ ಫುಲ್ ಖುಷ್
ಇತ್ತೀಚೆಗೆ ವಿಜಯ್ ಕುಟುಂಬದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ವದಂತಿಗಳು ಹರಿದಾಡುತ್ತಿದ್ದವು. ಆದರೆ, ಜೇಸನ್ ಅವರ ಈ ಸಂದರ್ಶನವು ಎಲ್ಲಾ ಗಾಸಿಪ್‌ಗಳಿಗೆ ತೆರೆ ಎಳೆದಿದೆ. ತಂದೆಯ ಬಗ್ಗೆ ಅವರು ಪ್ರೀತಿಯಿಂದ ಮಾತನಾಡಿದ್ದು, ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಈ ಸಂದರ್ಶನ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


