ಕೊರೋನಾ ಭಯದಿಂದ ಜ್ವರದ ಮಾತ್ರೆ ಸೇವನೆ ಹೆಚ್ಚಳ; ತೇಜಸ್ವಿ ಸೂರ್ಯ ಕಳವಳ
ಕೊರೋನಾ ಭೀತಿ ನಡುವೆ ಮತ್ತೊಂದು ಆತಂಕ ಶುರುವಾಗಿದೆ. ಕೊರೊನಾ ಭಯದಿಂದ ಜನ ಜ್ವರದ ಮಾತ್ರೆಯ ಮೊರೆ ಹೋಗುತ್ತಿದ್ದಾರೆ. ಪ್ಯಾರಾಸಿಟಮಲ್, ಡೋಓ ಮಾತ್ರೆ ಸೇವನೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಈ ಆಘಾತಕಾರಿ ಬೆಳವಣಿಗೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಏ. 21): ಕೊರೋನಾ ಭೀತಿ ನಡುವೆ ಮತ್ತೊಂದು ಆತಂಕ ಶುರುವಾಗಿದೆ. ಕೊರೊನಾ ಭಯದಿಂದ ಜನ ಜ್ವರದ ಮಾತ್ರೆಯ ಮೊರೆ ಹೋಗುತ್ತಿದ್ದಾರೆ. ಪ್ಯಾರಾಸಿಟಮಲ್, ಡೋಓ ಮಾತ್ರೆ ಸೇವನೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಈ ಆಘಾತಕಾರಿ ಬೆಳವಣಿಗೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಕೊರೋನಾ ವಾರಿಯರ್ಸ್ ಹಸಿವು ನೀಗಿಸಿದ ವೃದ್ಧ; ಇವರ ಹೃದಯ ಶ್ರೀಮಂತಿಕೆಗೊಂದು ಸಲಾಂ!
ಕೇಂದ್ರ ಅರೋಗ್ಯ ಸಚಿವ ಹರ್ಷವರ್ಧನ್‌ಗೆ ಪತ್ರ ಬರೆದಿದ್ದು ಜ್ವರವನ್ನು ನಿಯಂತ್ರಿಸುವ ಮಾತ್ರೆಗಳ ಮಾರಾಟಕ್ಕೆ ನಿಯಂತ್ರಣ ಹೇರಿ. ವೈದ್ಯರ ಸೂಚನೆ ಇಲ್ಲದೇ ಮಾತ್ರೆ ಕೊಡದಂತೆ ಎಲ್ಲಾ ಮೆಡಿಕಲ್ ಸ್ಟೋರ್‌ಗಳಿಗೆ ಸೂಚನೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.