ಪಾದರಾಯನಪುರ ಆಯ್ತು..ಈಗ ರಾಯಪುರದಲ್ಲಿ ಕಿರಿಕ್‌: ಕೋವಿಡ್‌ ಟೆಸ್ಟ್‌ಗೆ ಸ್ಥಳೀಯರಿಂದ ವಿರೋಧ

ಕೊರೋನಾ ಪರೀಕ್ಷೆ ಮಾಡಿಸದಂತೆ ಸ್ಥಳೀಯರ ವಿರೋಧ| ಬೆಂಗಳೂರಿನ ರಾಯಪುರದಲ್ಲಿ ನಡೆದ ಘಟನೆ| ಕಾರ್ಪೊರೇಟರ್‌ ಸಹೋದರನಿಗೆ ಮುತ್ತಿಗೆ ಹಾಕಿ ಸ್ಥಳೀಯರಿಂದ ಪ್ರತಿಭಟನೆ|  ರಾಯಪುರದಲ್ಲಿ ಪೌಕಾರ್ಮಿಕರೇ ವಾಸಿಸುತ್ತಿದ್ದಾರೆ| 

First Published May 17, 2020, 12:44 PM IST | Last Updated May 17, 2020, 12:44 PM IST

ಬೆಂಗಳೂರು(ಮೇ.17):  ಕೊರೋನಾ ಪರೀಕ್ಷೆ ಮಾಡಬೇಡಿ ಎಂದು ಸ್ಥಳೀಯರು ಗಲಾಟೆ ಮಾಡಿದ ಘಟನೆ ರಾಯಪುರದಲ್ಲಿ ನಡೆದಿದೆ. ನಮ್ಮ ಏರಿಯಾದಲ್ಲಿ ಕೊರೋನಾ ಟೆಸ್ಟ್‌ ಮಾಡಿಸಬೇಡಿ ಎಂದು ಕಾರ್ಪೊರೇಟರ್‌ ಸಹೋದರನಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. 

ಚಿತ್ರದುರ್ಗ: ತಬ್ಲಿಘಿಗಳ ಜೊತೆ ನಂಟು, ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಸಾವು

ಹೀಗಾಗಿ ಪ್ರತಿಭಟನಾಕಾರರನ್ನ ಕಾರ್ಪೊರೇಟರ್‌ ಸಹೋದರ ಕೇಶವ್‌ ಅವರು ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಪೌಕಾರ್ಮಿಕರೇ ವಾಸಿಸುತ್ತಿದ್ದಾರೆ. ಹೀಗಾಗಿ ನಮ್ಮ ಪ್ರದೇಶದಲ್ಲಿ ಒಂದೇ ಒಂದು ಕೊರೋನಾ ಕೇಸ್‌ ಪತ್ತೆಯಾಗಿಲ್ಲ, ಹೀಗಾಗಿ ಕೋವಿಡ್‌ ಟೆಸ್ಟ್‌ ಮಾಡಿಸಬೇಡಿ ಎಂದು ಕಿರಿಕ್‌ ತಗೆದಿದ್ದಾರೆ.