ಚುನಾವಣೆ ಗೆದ್ದ ಖುಷಿಯಲ್ಲಿರೋ ಡಿಕೆಶಿ ಅಮ್ಮನ ದಿನಕ್ಕೆ ಶುಭ ಕೋರಿದ್ದು ಹೀಗೆ
ಅಮ್ಮ, ಮಾತೆ, ಜನನಿ, ಅವ್ವ, ಮಾ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ತಾಯಿ ಎಲ್ಲರ ಪಾಲಿಗೂ ಸರ್ವಸ್ವ. ಜೀವನದಲ್ಲಿ ಅದೆಷ್ಟೇ ಸಾಧನೆ ಮಾಡಿದರೂ ಅಮ್ಮನ ತ್ಯಾಗದ ಮುಂದೆ ಎಲ್ಲವೂ ಧೂಳಿಗೆ ಸಮ. ಚುನಾವಣೆ ಗೆದ್ದ ಖುಷಿಯಲ್ಲಿರೋ ಡಿಕೆಶಿ ಸಹ ಅಮ್ಮನ ದಿನಕ್ಕೆ ಶುಭ ಕೋರಿದ್ದಾರೆ.
ಅಮ್ಮಎಂಬ ಒಂದು ಪದವೇ ಅಮೃತ. ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿ ಎಂದರೆ ಅದು ಅಮ್ಮ ಮಾತ್ರ. ಅಮ್ಮ ಜೊತೆಗಿದ್ದರೆ ನೂರಾನೆಯ ಬಲ ಇದ್ದಂತೆ. ಅಮ್ಮ ಮಕ್ಕಳ ನಗುವಲ್ಲಿ ನಗುವಾಗುತ್ತಾಳೆ. ಅಳುವಾಗ ಅಳುತ್ತಾಳೆ. ಮಕ್ಕಳಿಗಾಗಿಯೇ ತನ್ನ ಸಂಪೂರ್ಣ ಜೀವನವನ್ನು ಮುಡಿಪಾಗಿಡುತ್ತಾಳೆ. ಹೀಗಾಗಿಯೇ ಚಿಕ್ಕವರಿಂದ ಹಿಡಿದು ವೃದ್ಧರು ಸಹ ತಮ್ಮ ಅಮ್ಮಂದಿರನ್ನು ಗೌರವಿಸುತ್ತಾರೆ. ಆಕೆಯ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ. ಯಶಸ್ವೀ ಉದ್ಯಮಿಗಳು, ಸೆಲೆಬ್ರಿಟಿಗಳು ಸಹ ತಮ್ಮ ಅಮ್ಮಂದಿರ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ. ಸಾಧಕರು ತಮ್ಮ ತಾಯಿ ನೀಡಿದ ಪ್ರೋತ್ಸಾಹದ ಬಗ್ಗೆ ತಿಳಿಸುತ್ತಾರೆ.
ಚುನಾವಣೆ ಗೆದ್ದ ಖುಷಿಯಲ್ಲಿರೋ ಡಿಕೆಶಿ ಸಹ ಅಮ್ಮನ ದಿನಕ್ಕೆ (Mothers day) ಶುಭ ಕೋರಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರೋ ಡಿ.ಕೆ ಶಿವಕುಮಾರ್, 'ಅಮ್ಮ ಎನ್ನುವ ಪದವನ್ನು ವರ್ಣಿಸಲು ಸಾಧ್ಯವಿಲ್ಲ, ಕಾರಣ ಅದು ಕೇವಲ ಪದವಲ್ಲ, ಅದೊಂದು ಪರಿಪೂರ್ಣ ಅನುಭೂತಿ. ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿಯಾಗಿರುವ ಅಮ್ಮ , ಮಕ್ಕಳಿಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದು, ಎಲ್ಲಾ ಪ್ರೀತಿಯ ಮಾತೃ ಹೃದಯಗಳಿಗೆ ವಿಶ್ವ ತಾಯಂದಿರ ದಿನದ ಮನಃಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ' ಎಂದು ತಿಳಿಸಿದ್ದಾರೆ.
Mothers Day: ಉದ್ಯೋಗ ಮಾಡುವ ತಾಯಂದಿರಿಗೆ ಸಂಶೋಧನೆ ನೀಡಿದ ಖುಷಿ ಸುದ್ದಿ
ತಾಯಂದಿರ ದಿನವು ಪ್ರತಿಯೊಬ್ಬ ತಾಯಿಯನ್ನು ಗೌರವಿಸುವ ದಿನ. ಇದನ್ನು ಪ್ರಪಂಚದಾದ್ಯಂತ ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ, ಆದರೆ ಹೆಚ್ಚಿನ ದೇಶಗಳು ಇದನ್ನು ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸುತ್ತವೆ. 20 ನೇ ಶತಮಾನದಲ್ಲಿ ಅಮೇರಿಕದಲ್ಲಿ ತಾಯಂದಿರ ದಿನವನ್ನು ಪ್ರಾರಂಭಿಸಲಾಯಿತು. ಪ್ರತಿ ಮಗು ಮತ್ತು ತಾಯಿಗೆ ಈ ದಿನ ತುಂಬಾ ವಿಶೇಷ. ಈ ಬಾರಿ ತಾಯಂದಿರ ದಿನವನ್ನು ಭಾನುವಾರ, ಮೇ 14, 2023 ರಂದು ಆಚರಿಸಲಾಗುತ್ತದೆ.
ತಾಯಿಗೆ ಧನ್ಯವಾದ ಹೇಳಲು ಇಡೀ ಜೀವನ ಚಿಕ್ಕದಾಗಿದ್ದರೂ, ಈ ವಿಶೇಷ ದಿನದಂದು, ತಾಯಿಯ ಪಾಲನೆ ಮತ್ತು ಸಮರ್ಪಣೆಗಾಗಿ ಧನ್ಯವಾದಗಳನ್ನು (thanks to mother) ಹೇಳಬಹುದು. ಈ ತಾಯಂದಿರ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ನಾವು ತಾಯಂದಿರ ದಿನದ ಇತಿಹಾಸ (History) ಹೇಳುತ್ತೇವೆ.
Mothers Day : ಅಮ್ಮನಿಗೆ ಹೀಗ್ ಮಾಡಿದರೆ ಸ್ಪೆಷಲ್ ಫೀಲ್ ಆಗುತ್ತೆ
ತಾಯಂದಿರ ದಿನದ ಇತಿಹಾಸ
1908 ರಲ್ಲಿ ಅನ್ನಾ ಜಾರ್ವಿಸ್ ತನ್ನ ತಾಯಿ ಆನ್ ರೀವ್ಸ್ ಜಾರ್ವಿಸ್ ಅವರ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಿದಾಗ ತಾಯಂದಿರ ದಿನವನ್ನು ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ನಲ್ಲಿ (United States) ಆಚರಿಸಲಾಯಿತು. ಆರೋಗ್ಯ ಮತ್ತು ನೈರ್ಮಲ್ಯ ಪರಿಸ್ಥಿತಿಗಳನ್ನು ಸುಧಾರಿಸಲು ಅವರು 19 ನೇ ಶತಮಾನದಲ್ಲಿ ಮದರ್ಸ್ ಡೇ ವರ್ಕ್ ಕ್ಲಬ್ ಗಳನ್ನು (Mothers Day work club) ಆಯೋಜಿಸಿದರು. ಅನ್ನಾ ಜಾರ್ವಿಸ್ ತನ್ನ ತಾಯಿ ಮತ್ತು ಎಲ್ಲಾ ತಾಯಂದಿರನ್ನು ಗೌರವಿಸಲು ಬಯಸಿದ್ದರು ಮತ್ತು ತಾಯಂದಿರ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಆಚರಿಸಲು ಅಭಿಯಾನವನ್ನು ಪ್ರಾರಂಭಿಸಿದರು. ಇವರ ಅಭಿಯಾನದ ಫಲವೇ ಈ ತಾಯಂದಿರ ದಿನಾಚರಣೆ.
1914ರಲ್ಲಿ ರಾಷ್ಟ್ರೀಯ ಮನ್ನಣೆ
1914 ರಲ್ಲಿ, ಯುಎಸ್ ಅಧ್ಯಕ್ಷ ವುಡ್ರೊ ವಿಲ್ಸನ್ ತಾಯಂದಿರನ್ನು ಗೌರವಿಸಲು ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಆಚರಿಸುವ ಪತ್ರಿಕೆಗೆ ಸಹಿ ಹಾಕಿದರು. ಅದರ ನಂತರ ಈ ದಿನವು ಸ್ವಲ್ಪ ಸಮಯದ ನಂತರ ಪ್ರಪಂಚದಾದ್ಯಂತ ಜನಪ್ರಿಯವಾಯಿತು ಮತ್ತು ಇದನ್ನು ಇತರ ದೇಶಗಳಲ್ಲಿಯೂ ಆಚರಿಸಲು ಪ್ರಾರಂಭಿಸಿತು.
ತಾಯಂದಿರ ದಿನದ ಜನಪ್ರಿಯತೆ
ಇಂದು ವಿಶ್ವದಾದ್ಯಂತ 50 ಕ್ಕೂ ಹೆಚ್ಚು ದೇಶಗಳಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ, ಮತ್ತು ಇದು ತಾಯಂದಿರು ಮತ್ತು ಅವರಿಗೆ ಪ್ರೀತಿ, ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ. ಈ ದಿನದಂದು ಜನರು ಹೆಚ್ಚಾಗಿ ತಮ್ಮ ಅಮ್ಮಂದಿರಿಗೆ ಉಡುಗೊರೆಗಳು, ಕಾರ್ಡ್ ಗಳು ಮತ್ತು ಹೂವುಗಳನ್ನು ನೀಡುತ್ತಾರೆ.