TGSRTC Viral Photo: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಬಂದ ಮೇಲೆ ಬಸ್‌ಗಳಲ್ಲಿ ಸೀಟು ಸಿಗದೆ ಪುರುಷರು ಪರದಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಇಂತಹ ಸಮಯದಲ್ಲಿ TGSRTC ಬಸ್ಸೊಂದರಲ್ಲಿ 'ಪುರುಷರನ್ನು ಗೌರವಿಸುವುದು ನಮ್ಮ ಸಂಪ್ರದಾಯ' ಎಂಬ ವಿಚಿತ್ರ ಬೋರ್ಡ್ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Free Bus Travel for Women Telangana: ತೆಲುಗು ರಾಜ್ಯಗಳು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈಗ 'ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ'ದ ಹವಾ ಜೋರಾಗಿದೆ. ಈ ಯೋಜನೆ ಜಾರಿಗೆ ಬಂದಾಗಿನಿಂದ ಮಹಿಳೆಯರು ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಸೀಟಿಗಾಗಿ ಕಿತ್ತಾಟ, ಕಂಡಕ್ಟರ್ ಜೊತೆ ವಾಗ್ವಾದದಂತಹ ಅನೇಕ ಘಟನೆಗಳು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ, ಈಗ ತೆಲಂಗಾಣದ ಟಿಜಿಎಸ್‌ಆರ್‌ಟಿಸಿ ಬಸ್ಸೊಂದರಲ್ಲಿ ಕಂಡ ಒಂದು ವಿಚಿತ್ರ ಬೋರ್ಡ್ ಎಲ್ಲರ ಗಮನ ಸೆಳೆಯುತ್ತಿದ್ದು, ನೆಟ್ಟಿಗರು ಇದನ್ನು ನೋಡಿ ಮುಸಿಮುಸಿ ನಗುತ್ತಿದ್ದಾರೆ.

ಇದನ್ನೂ ಓದಿ: ಆಡಿ ಕಾರಿನಲ್ಲಿ ಬಂದು ಚಪ್ಪಲಿ ಹೊಲಿಯುವ ವ್ಯಕ್ತಿ.. ಈತನ ಸಂಪಾದನೆ ಎಷ್ಟೆಂದು ಗೊತ್ತಾದ್ರೆ ಶಾಕ್ ಆಗ್ತೀರಾ!

ವೈರಲ್ ಆದ ಆ ಬೋರ್ಡ್‌ನಲ್ಲಿ ಏನಿದೆ?

ಸಾಮಾನ್ಯವಾಗಿ ಕರ್ನಾಟಕ ಮತ್ತು ತೆಲಂಗಾಣದ ಸರ್ಕಾರಿ ಬಸ್‌ಗಳಲ್ಲಿ ಮುಂದಿನ ಕೆಲವು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿರುತ್ತದೆ. ಅಲ್ಲಿ "ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಪ್ರದಾಯ" " ಈ ಆಸನಗಳು ಸ್ತ್ರೀಯರಿಗೆ" ಎಂಬ ಫಲಕಗಳು ರಾರಾಜಿಸುತ್ತಿರುತ್ತವೆ. ಆದರೆ, ಸೂರ್ಯಪೇಟೆ ಮಾರ್ಗದಲ್ಲಿ ಚಲಿಸುವ TGSRTC ಬಸ್ಸೊಂದರಲ್ಲಿ ರಹಸ್ಯವಾಗಿ ಈ ಬೋರ್ಡ್‌ನ ಅಕ್ಷರಗಳನ್ನು ಬದಲಾಯಿಸಲಾಗಿದೆ! ಅಲ್ಲಿ ಈಗ "ಪುರುಷರನ್ನು ಗೌರವಿಸುವುದು ನಮ್ಮ ಸಂಪ್ರದಾಯ. ಅವರಿಗೆ ಮೀಸಲಿಟ್ಟ ಸೀಟುಗಳಲ್ಲಿ ಅವರನ್ನೇ ಕುಳಿತುಕೊಳ್ಳಲು ಬಿಡಿ" ಎಂದು ಬರೆದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಭಾರೀ ಮಳೆ ಮಧ್ಯೆ ಪೊದೆ ಹಿಂದೆ ಏನೋ ವಿಚಿತ್ರ ಕಾಣಿಸಿತೆಂದು ಕ್ಯಾಮೆರಾ ಜೂಮ್ ಮಾಡಿದಾಗ ಕಂಡಿದ್ದೇನು ನೋಡಿ...

ಪುರುಷರ ಸಂಭ್ರಮ

ಈ ಫೋಟೋ ವೈರಲ್ ಆಗುತ್ತಿದ್ದಂತೆ ಪುರುಷ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ. "ಇಷ್ಟು ದಿನಗಳ ನಂತರ ಕೊನೆಗೂ ನಮಗೆ ತಕ್ಕ ಗೌರವ ಸಿಕ್ಕಿದೆ", "ಇನ್ಮುಂದೆ ಬಸ್‌ಗಳಲ್ಲಿ ನಮಗೂ ಸೀಟು ಸಿಗುವ ಭರವಸೆ ಮೂಡಿದೆ", "ಅಟ್ಲೀಸ್ಟ್ ಈ ಬೋರ್ಡ್ ನೋಡಿದ ಮೇಲಾದರೂ ನಮಗೆ ಸೀಟು ಬಿಟ್ಟುಕೊಡ್ತಾರಾ?" ಎಂದು ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಜೆಯ ದಿನ ಕಚೇರಿಗೆ ಬಾ ಎಂದ ಮ್ಯಾನೇಜರ್‌.. ಪಂಚ್ ಡೈಲಾಗ್ ಹೊಡೆದ ಮಹಿಳಾ ಉದ್ಯೋಗಿಯ ವಿಡಿಯೋ ವೈರಲ್

ಉಚಿತ ಪ್ರಯಾಣ ಮತ್ತು ಪುರುಷರ ಪರದಾಟ

ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಜಾರಿಯಾದ ಮೇಲೆ ಬಸ್‌ಗಳಲ್ಲಿ ಪುರುಷರ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿದೆ ಎಂಬುದು ಹಲವರ ವಾದ. ಮಹಿಳೆಯರು ಎಲ್ಲ ಸೀಟುಗಳಲ್ಲಿಯೂ ಕುಳಿತುಕೊಳ್ಳುತ್ತಿರುವುದರಿಂದ, ಪುರುಷರು ತಮ್ಮ ಸ್ಟೇಜ್ ಬರುವವರೆಗೆ ನಿಂತುಕೊಂಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ಸೀಟುಗಳ ಬಗ್ಗೆ ಈಗಾಗಲೇ ಅನೇಕ ಮೀಮ್ಸ್‌ಗಳು ಮತ್ತು ಟ್ರೋಲ್‌ಗಳು ಹರಿದಾಡುತ್ತಿವೆ.

ಇದನ್ನೂ ಓದಿ: 1.9 ಕೋಟಿ ರೂ. ಪ್ಯಾಕೇಜ್ ಕೆಲಸ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆದ ಟೆಕ್ಕಿ; ಈಗೇನಾಯ್ತು ಅಂತ ನೋಡಿ..

ಈ ವೈರಲ್ ಫೋಟೋ ಬಗ್ಗೆ ತೆಲಂಗಾಣ ಟಿಜಿಎಸ್‌ಆರ್‌ಟಿಸಿ ಇಲಾಖೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಇದು ಯಾರೋ ಕಿಡಿಗೇಡಿಗಳು ಮಾಡಿದ ಕೆಲಸವೋ ಅಥವಾ ಬಸ್ ಸಿಬ್ಬಂದಿಯೇ ಹಾಕಿದ್ದೋ ಎಂಬುದು ತಿಳಿದಿಲ್ಲದಿದ್ದರೂ, ಸದ್ಯಕ್ಕಂತೂ ಈ "ಪುರುಷರ ಗೌರವ"ದ ಬೋರ್ಡ್ ಇಡೀ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಹೆಚ್ಚು ಸ್ಯಾಲರಿಯಿಂದಲ್ಲ.. ಬೆಂಗಳೂರಿನಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ ಹಣ ಉಳಿಸಿದ ವ್ಯಕ್ತಿ, ವೈರಲ್ ಆಯ್ತು ಸಲಹೆ