ಉತ್ತರಾಖಂಡದಲ್ಲಿ ಮಳೆಯ ನಡುವೆ ಸವೆದ ಚಪ್ಪಲಿ ಹಾಕಿಕೊಂಡು ಬಂದ ಝೆಪ್ಟೋ ಡೆಲಿವರಿ ಬಾಯ್‌ಗೆ ಅಮನ್ ಶರ್ಮಾ ಎಂಬುವವರು ತಮ್ಮ ಹೊಸ ಅಡಿಡಾಸ್ ಶೂಗಳನ್ನು ನೀಡಿದ್ದಾರೆ. ಈ ಮಾನವೀಯ ಕಾರ್ಯದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಜನರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಅಮಾನವೀಯ ಕೃತ್ಯಗಳಿಂದ ಮನುಷ್ಯರು ದಿನವೂ ಸಾಯುತ್ತಿರುವುದನ್ನು ನೋಡುತ್ತೇವೆ. ಮಾನವೀಯತೆ ಇಲ್ಲದ ಜಗತ್ತು ಎಂದು ಶಪಿಸುತ್ತೆವೆ. ಆದರೆ ಇವರ ನಡುವೆಯೂ ಮಾನವೀಯ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ ಎಂದು ಆಗಾಗ ತಮ್ಮ ಮಾನವೀಯ ಗುಣಗಳ ಮೂಲಕ ಬೆಳಕಿಗೆ ಬರುತ್ತಲೇ ಇರುತ್ತಾರೆ. ಅಂತಹದ್ದೊಂದು ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಉತ್ತರಾಖಂಡದಲ್ಲಿ ವ್ಯಕ್ತಿಯೊಬ್ಬರು ಬಡವನಾಡ ಡೆಲಿವರಿ ಬಾಯ್‌ಗೆ ಅಡಿಡಾಸ್ ಶೂ ಕೊಡಿಸಿದ್ದಾರೆ. ಅವರ ಮಾನವೀಯ ಸಹಾಯಕ್ಕೆ ಇಂಟರ್‌ನೆಟ್‌ನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಏನಿದೆ?
ಅಮನ್ ಶರ್ಮಾ ಎಂಬುವವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ 'ನನಗಿಂತ ಅವನಿಗೆ ಹೆಚ್ಚು ಅಗತ್ಯವಿತ್ತು. ಹೀಗಾಗಿ ನನ್ನ ಹೊಸ ಶೂಗಳನ್ನು ಡೆಲಿವರಿ ಬಾಯ್‌ಗೆ ಕೊಟ್ಟೆ' ಎಂದು ಬರೆದುಕೊಂಡಿದ್ದಾರೆ. ಇನ್ನು ವಿಡಿಯೋ ಕ್ಲಿಕ್ ಮಾಡಿ ನೋಡಿದಾಗ, ವ್ಯಕ್ತಿಯೊಬ್ಬರು ಬಾಲ್ಕನಿಯಲ್ಲಿ ನಿಂತು ಕೆಳಗೆ ಇದ್ದ ಡೆಲಿವರಿ ಬಾಯ್‌ನ ಕರೆಯುತ್ತಾರೆ. ಕೊನೆಗೆ ಬಾಲ್ಕನಿಯಿಂದ ಇಳಿದು ಬಂದು 'ನನ್ನ ಒಂದು ಜೊತೆ ಶೂ ಇವೆ ತೆಗೆದುಕೊಳ್ತಿಯಾ' ಅಂತಾ ಕೇಳ್ತಾರೆ. ಆಗ ಬೈಕ್‌ನಲ್ಲಿ ಬಂದಿದ್ದ ಡೆಲಿವರಿಬಾಯ್ ಬೈಕ್ ನಿಲ್ಲಿಸಿ ಶೂಗಳನ್ನು ತೆಗೆದುಕೊಳ್ತಾರೆ.. ನಂತರ ಶೂಗಳನ್ನು ನೋಡಿಕೊಂಡು ಅಲ್ಲಿಂದ ತೆರಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಈ ಕುರಿತು ಅಮನ್ ಶರ್ಮಾ ಬಳಿಕ ಮಾಹಿತಿ ಹಂಚಿಕೊಂಡಿದ್ದಾರೆ. ಆ ವ್ಯಕ್ತಿ Zepto ಡೆಲಿವರಿ ಪಾರ್ಟ್ನರ್ ಆಗಿದ್ದು, ಮಳೆಯಲ್ಲೂ ರೈನ್‌ಕೋಟ್ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಅವನ ಬಳಿ ರೈನ್‌ಕೋಟ್ ಸಹ ಇರಲಿಲ್ಲ. ಹಾಗಾಗಿ ಅವನು ಸಂಪೂರ್ಣ ಒದ್ದೆಯಾಗಿದ್ದ. ಮೊದಲ ಬಾರಿಗೆ ವ್ಯಕ್ತಿಯೊಬ್ಬ ಸೈಕಲ್‌ನಲ್ಲಿ ಸರಿಯಾದ ಸಮಯಕ್ಕೆ ಆರ್ಡರ್ ತಂದಿದ್ದನ್ನು ನೋಡಿದೆ. ಆದರೆ ಅವನ ಕಾಲಲ್ಲಿಸೆವೆು ಹೋದ ಚಪ್ಪಲಿವೆ. ಹೀಗಾಗಿ ನಾನು ನನ್ನ ಶೂಗಳನ್ನು ಅವನಿಗೆ ನೀಡಿದೆ. ನನಗಿಂತ ಅವನಿಗೆ ಶೂಗಳ ಅಗತ್ಯವಿದೆ ಎಂದು ಅಮನ್ ಶರ್ಮಾ ತಿಳಿಸಿದ್ದಾರೆ.
ಅಮನ್ ಶರ್ಮಾ ಅವರ ಹೇಳಿಕಗೆ ಮೆಚ್ಚುಗೆ ವ್ಯಕ್ತವಾಗಿದೆ.
ಹೆತ್ತವರಿಗೆ ಅನ್ನಹಾಕಲುತುತ್ತು ಎಣಿಸುವ ಮಕ್ಕಳಿದ್ದಾರೆ. ಹಸಿದವರನ್ನು ಕಂಡು ಕಾಣದಂತೆ ಹೋಗುವ ಶ್ರೀಮಂತರು ನಮ್ಮ ನಡುವೆ ತುಂಬಿಹೋಗಿದ್ದಾರೆ. ಆದರೆ ಒಬ್ಬ ಬಡಪಾಯಿ ಡೆಲಿವರಿ ಬಾಯ್ ಕಷ್ಟ ಅರ್ಥ ಮಾಡಿಕೊಂಡು ತನ್ನ ಉತ್ತಮ ಗುಣಮಟ್ಟದ ಶೂಗಳ್ನ ದಾನ ಇಂಥ ಅಮನ್ ಶರ್ಮಾರಂತ ವ್ಯಕ್ತಿಗಳು ವಿರಳ.
ಒಬ್ಬರು ಒಳ್ಳೆಯದನ್ನ ಆರಂಭಿಸಿದರೆ ಅದನ್ನು ನೂರು ಜನರು ಆರಂಭಿಸ್ತಾರೆ. ನಾಳೆ ಇವನಿಂದ ಪ್ರೇರಣೆ ಪಡೆದು ಇನ್ಯಾರೋ ಇನ್ಯಾರಿಗೋ ಸಹಾಯ ಮಾಡಬಹುದು. ಹೀಗಾಗಿ ಇದು ರೀಲ್ಸ್, ಇನ್ಸ್‌ಟಾಗ್ರಾಮ್ ಪ್ರಚಾರಕ್ಕೆ ಎಂದಾದರೂ ಸರಿ. ಪ್ರಚಾರದ ನೆಪದಲ್ಲಿ ಬಡವರಿಗೆ ಅನ್ನ ಹಾಕುವ, ಕಷ್ಟಕ್ಕೆ ಮರಗುವ ಒಂದು ಒಳ್ಳೆ ಗುಣ ಸಮಾಜಕ್ಕೆ ಕೊಟ್ಟಂತಾಗುತ್ತಲ್ಲವೇ?


