ಜೈಪುರದ ಬೀದಿ ಬದಿ ಕುಲ್ಫಿ ಮಾರುವ ವ್ಯಕ್ತಿಯೊಬ್ಬರು ತಮ್ಮ ಶ್ವಾನ ಪ್ರೀತಿಯಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಇವರು ಗ್ರಾಹಕರ ಕೋರಿಕೆಯ ಮೇರೆಗೆ ನಾಯಿಗಳಿಗಾಗಿ ಸಕ್ಕರೆ ರಹಿತ ಕುಲ್ಫಿ ತಯಾರಿಸಿಕೊಡುತ್ತಾರೆ. ನೆಟ್ಟಿಗರು ಇವರನ್ನು 'ಕ್ಯೂಟಿ ಅಂಕಲ್' ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ.
ಜೈಪುರದ ಕುಲ್ಫಿ ಮಾರುವಾತನೊಬ್ಬ ತನ್ನ ಮಾನವೀಯ ಗುಣಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ. ಜೈಪುರದ ಬೀದಿಗಳಲ್ಲಿ ಕುಲ್ಫಿ ಮಾರಾಟ ಮಾಡ್ತಾನೆ. ಅದರಲ್ಲೇನು ವಿಶೇಷ ಇದೆ ಅಂತೀರಾ? ವಿಷಯ ಅದಲ್ಲ. ಈ ಅಂಕಲ್ ಯಾರೇ ಬಂದರೂ ವಿಶೇಷವಾಗಿ ಕಾಳಜಿವಹಿಸಿ ಸಿಹಿ ತಿಂಡಿ, ಕೂಫಿ ತಯಾರಿಸಿಕೊಡ್ತಾರೆ. ನಾಯಿಗಳಿಗಾಗಿ ಸಕ್ರೆ ಇಲ್ಲದ ಕುಲ್ಫಿ ತಯಾರಿಸಿ ಕೊಡ್ತಾನೆ. ಹೀಗಾಗಿ ಈ ಅಂಕಲ್ ಅಂದ್ರೆ ನಾಯಿಗಳಿಗೂ ಎಲ್ಲಿಲ್ಲದ ಪ್ರೀತಿ!
Instagram ಯೂಸರ್ಸ್ ಒಬ್ಬರು ಈ ಹೃದಯಸ್ಪರ್ಶಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಅದೀಗ ಎಲ್ಲೆಡೆ ವೈರಲ್ ಆಗಿ ಕುಲ್ಫಿ ಮಾರುವಾತನನ್ನ ನೆಟಿಜನ್ 'ಕ್ಯೂಟಿ ಅಂಕಲ್' ಎಂದೇ ಕರೆಯಲಾರಂಭಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವಿಕ್ರಮ್ ಮಿತ್ತಲ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವಿಕ್ರಮ್ ಅವರು ಮಾರಾಟಗಾರನ ಬಳಿ ನಾಯಿಗಳಿಗಾಗಿ ಸಪರೇಟ್ ಆಗಿ ಶುಗರ್ ಇಲ್ಲದ ಕೂಲ್ಫಿ ಐಸ್‌ಕ್ರೀಂ ತಯಾರಿಸಿಕೊಡ್ತೀರಾ? ಎಂದು ಕೇಳ್ತಾರೆ. ಆಗ ಅಂಕಲ್ ಅದಕ್ಕೇನಂತೀರಿ, ತಯಾರಿಸೋಣ ಅಂತಾ ಸಕ್ಕರೆ ಇಲ್ಲದ ಐಸ್‌ಕ್ರೀಂ ತಯಾರಿಸಿಕೊಡ್ತಾರೆ. ಅಂಕಲ್ ಹೇಳುವ ಹೇಳುವ ಹಾಗೆ, ಆತನ ಬಳಿ ಹಲವಾರು ರೀತಿಯ ಕೂಲ್ಫಿ ಖರೀದಿಸಲು ಜನ ಬರ್ತಾರೆ. ಕೆಲವರು ಮುದ್ದಿನ ನಾಯಿಗಳನ್ನ ಕರೆತರ್ತಾರೆ. ಅದಕ್ಕೆ ಬೇಕಾದ ಕೂಲ್ಫಿ ಕೇಳ್ತಾರೆ. ನಾಯಿಗಳಿಗೆ ಇಷ್ಟವಾಗುವಂತಹ ಕೂಲ್ಫಿಗಳನ್ನೇ ತಯಾರಿಸಿಕೊಡ್ತೇನೆ ಎನ್ನುತ್ತಾರೆ.
ತಮ್ಮ ನಾಯಿಗೂ ಕೂಲ್ಫಿ ಖರೀದಿಸಿದ ವಿಕ್ರಮ್
ಈ ವೇಳೆ ತಮ್ಮ ಮುದ್ದಿನ ನಾಯಿ 'ತಾರಾ' ಕುಲ್ಫಿ ಖರೀದಿಸ್ತಾರೆ. ಬಳಿಕ ಅದನ್ನ ಕುಲ್ಫ ಗಾಡಿ ಮತ್ತು ಮಾರಾಟ ಮಾಡುವಾತನನ್ನ ವಿಡಿಯೋದಲ್ಲಿ ತೋರಿಸಿ, 'ನೋಡಿ, ಗ್ರಾಹಕರ ಬಗ್ಗೆ ಅದೆಷ್ಟು ಕಾಳಜಿ ತೋರಿಸಿ ತಯಾರಿಸ್ತಾರೆ. ಕುಲ್ಫಿ ಮನುಷ್ಯರಿಗಷ್ಟೇ ಅಲ್ಲ ನಾಯಿಗಳಿಗೂ ಬೇಕಾದ ಕುಲ್ಫಿ ತಯಾರಿಸುವ ಮೂಲಕ ಈ ಅಂಕಲ್ ಸಾಮಾನ್ಯ ಗ್ರಾಹಕರನ್ನು ಮೀರಿ ಯೋಚಿಸುತ್ತಿದ್ದಾರೆ ಎಂದು ವಿಕ್ರಮ್ ಮೆಚ್ಚಿಕೊಳ್ತಾರೆ.
ಕುಲ್ಫಿ ಮಾರುವ ಕ್ಯೂಟಿ ಅಂಕಲ್ ಎಂದ ನೆಟಿಜನ್
ವಿಕ್ರಮ್ ಹಂಚಿಕೊಂಡಿರುವ ವಿಡಿಯೋಗೆ ನೆಟಿಜನ್ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಬಹುತೇಕರು ಕುಲ್ಫಿ ಮಾರುವ ಅಂಕಲ್‌ನ ಕಾಳಜಿಗೆ ಮೆಚ್ಚಿದ್ದಾರೆ.'ಜೈಪುರದಲ್ಲಿ ತಾವು ಕಂಡ ಅತ್ಯಂತ ಅನಿರೀಕ್ಷಿತ ಹೃದಯಸ್ಪರ್ಶಿ ಕೆಲಸಗಳಲ್ಲಿ ಇದೂ ಒಂದು ಎಂದಿದ್ದಾರೆ. ಕೆಲವರು ಮಾರಾಟಗಾರನಿಗೆ ಗಾಡ್ ಬ್ಲೆಸ್ ಯು ಹೇಳಿದರೆ, ಇನ್ನು ಕೆಲವರು 'ನಿಮ್ಮ ಜೇಬು ಎಂದಿಗೂ ಖಾಲಿಯಾಗದಿರಲಿ' ಎಂದು ಹಾರೈಸಿದ್ದಾರೆ. ಒಬ್ಬರು ಪ್ರೀತಿಯಿಂದ ಅವರನ್ನು 'ಕ್ಯೂಟಿ ಅಂಕಲ್' ಎಂದು ಕರೆದಿದ್ದಾರೆ.
ವಿಡಿಯೋಗೆ ಪ್ರತಿಕ್ರಿಯಿಸಿದ ಹಲವರು ಮಾರಾಟಗಾರನಿಗೆ ಆಶೀರ್ವಾದ ಕೋರಿದ್ದಾರೆ. “ನಿಮ್ಮ ಜೇಬು ಎಂದಿಗೂ ಖಾಲಿಯಾಗದಿರಲಿ” ಎಂದು ಒಬ್ಬರು ಹಾರೈಸಿದ್ದಾರೆ. ಮತ್ತೊಬ್ಬರು ಪ್ರೀತಿಯಿಂದ ಅವರನ್ನು ‘ಕ್ಯೂಟಿ ಅಂಕಲ್’ ಎಂದು ಕರೆದು ಶುಭ ಹಾರೈಸಿದ್ದಾರೆ.


