MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Engineer's Day Special
Karnataka Weather Update
Today's Horoscope in Kannada
Mandya Road Accident
Ind vs Afg T20 Series
Mohsin Naqvi Trophy Controversy
Talaguppa-Bengaluru Express
Belagavi DC Mohammad Roshan
Bengaluru Metro Stations
Karnataka Power Crisis
Belagavi Cantonment Board
  • Home
  • Karnataka Districts
  • Belagavi: ಗಣೇಶ ಮೂರ್ತಿ ಹೊತ್ತು ನಡೆದ ಜಿಲ್ಲಾಧಿಕಾರಿ; ಮೊಹಮ್ಮದ್ ರೋಷನ್‌ರಿಂದ ಸೌಹಾರ್ದ ಸಂದೇಶ

Belagavi: ಗಣೇಶ ಮೂರ್ತಿ ಹೊತ್ತು ನಡೆದ ಜಿಲ್ಲಾಧಿಕಾರಿ; ಮೊಹಮ್ಮದ್ ರೋಷನ್‌ರಿಂದ ಸೌಹಾರ್ದ ಸಂದೇಶ

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಅವರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಪರಿಸರ ಸ್ನೇಹಿ ಗಣೇಶನ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಅವರು ಭಾವೈಕ್ಯತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿದರು.

1 Min read
Author : Sumanth SN
Published : Sep 15 2026, 12:23 PM IST
Share this Photo Gallery
  • FB
  • TW
  • Linkdin
  • Whatsapp
16
ಬೆಳಗಾವಿ ಡಿಸಿ ಕಚೇರಿಯಲ್ಲಿ ವಿಘ್ನ ನಿವಾರಕನ ದರ್ಶನ!
Image Credit : Asianet News

ಬೆಳಗಾವಿ ಡಿಸಿ ಕಚೇರಿಯಲ್ಲಿ ವಿಘ್ನ ನಿವಾರಕನ ದರ್ಶನ!

ಬೆಳಗಾವಿ: ನಾಡಿನಾದ್ಯಂತ ಗೌರಿ-ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಬೆಳಗಾವಿಯಲ್ಲೂ ಅದ್ದೂರಿಯಾಗಿ ಹಬ್ಬದ ಆಚರಣೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಂದೇಶ ಸಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸೌಹಾರ್ದ ಸಂದೇಶ ಸಾರಿದ ಜಿಲ್ಲಾಧಿಕಾರಿ
Image Credit : Asianet News

ಸೌಹಾರ್ದ ಸಂದೇಶ ಸಾರಿದ ಜಿಲ್ಲಾಧಿಕಾರಿ

ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಅದ್ದೂರಿಯಾಗಿ ಪೂಜೆ ಸಲ್ಲಿಸಿದರು. ಆ ಮೂಲಕ ಜನರಿಗೆ ಸೌಹಾರ್ದ ಸಂದೇಶ ಸಾರಿದರು.

Related Articles

Related image1
Belagavi: ಹಬ್ಬದ ಸಂಭ್ರಮವನ್ನೇ ಕಸಿದ ಫ್ರಿಡ್ಜ್ ಸ್ಫೋಟ; ಒಂದೇ ಕುಟುಂಬದ ನಾಲ್ವರು ಸಾವು, ಇಬ್ಬರ ಸ್ಥಿತಿ ಗಂಭೀರ
Related image2
IND vs AFG: ಪ್ಲೇಯಿಂಗ್ XIನಿಂದ ಸೂರ್ಯವಂಶಿ ಡ್ರಾಪ್, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಶ್ರೀಕಾಂತ್ ವಿರುದ್ಧ ಪತ್ನಿ ಕೆಂಡಾಮಂಡಲ
36
ಪರಿಸರ ಸ್ನೇಹಿ ಗಣೇಶನಿಗೆ ಭಕ್ತಿ ನಮನ ಸಲ್ಲಿಕೆ
Image Credit : Asianet News

ಪರಿಸರ ಸ್ನೇಹಿ ಗಣೇಶನಿಗೆ ಭಕ್ತಿ ನಮನ ಸಲ್ಲಿಕೆ

ಬೆಳಗಾವಿ ಚೆನ್ನಮ್ಮ ವೃತ್ತದ ಗಣೇಶ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗಳು, ಬಳಿಕ ಗಣೇಶ ಮೂರ್ತಿ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಅದರಲ್ಲಿಯೂ ಪರಿಸರ ಸ್ನೇಹಿ ಗಣೇಶನಿಗೆ ಭಕ್ತಿ ನಮನ ಸಲ್ಲಿಕೆ ಮಾಡಿದರು.

46
ಆರತಿ ಬೆಳಗಿ ವಿಶೇಷ ಪೂಜೆ
Image Credit : Asianet News

ಆರತಿ ಬೆಳಗಿ ವಿಶೇಷ ಪೂಜೆ

ಜಿಲ್ಲಾಡಳಿತ ಸಿಬ್ಬಂದಿಯೂ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆರತಿ ಬೆಳಗಿ ವಿಘ್ನ ವಿನಾಶಕನನ್ನು ಬರಮಾಡಿಕೊಂಡ ಜಿಲ್ಲಾಧಿಕಾರಿ, ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಗಣೇಶನನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

56
ವಿನ್ಯಾಸಗಳಲ್ಲಿ ಕಂಗೊಳಿಸುತ್ತಿರುವ ಗಣೇಶ ಮೂರ್ತಿಗಳು
Image Credit : Asianet News

ವಿನ್ಯಾಸಗಳಲ್ಲಿ ಕಂಗೊಳಿಸುತ್ತಿರುವ ಗಣೇಶ ಮೂರ್ತಿಗಳು

ಬೆಳಗಾವಿಯ ಹಲವು ಕಡೆ ಗಣೇಶ ಹಬ್ಬದ ಸಂಭ್ರಮಾಚರಣೆ ಜೋರಾಗಿತ್ತು. ವಿಶೇಷ ಪೂಜೆ ಮಾಡೋ ಮೂಲಕ ಭಕ್ತರು ಗಣೇಶ ಬರಮಾಡಿಕೊಂಡರು. ನಗರ ಹಲವು ಗಲ್ಲಿ ಗಲ್ಲಿಯಲ್ಲಿ ವಿವಿಧ ಆಕಾರ, ವಿನ್ಯಾಸಗಳಲ್ಲಿ ಕಂಗೊಳಿಸುತ್ತಿರುವ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ನೆರವೇರಿಸಿದ್ದರು.

66
ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ
Image Credit : Asianet News

ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ

ಮನೆ, ಬಡಾವಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಗಣೇಶ ಮೂರ್ತಿಗಳ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಗಣೇಶೋತ್ಸವಕ್ಕಾಗಿ ವಿವಿಧ ಸಂಘಟನೆಗಳಿಂದ ವಿದ್ಯುತ್ ದೀಪಾಲಂಕಾರ, ಅಲಂಕಾರಗಳಿಂದ ಗಣೇಶ ಪೆಂಡಾಲ್ ಗಳು ಕಂಗೊಳಿಸುತ್ತಿದ್ದವು. ಭಕ್ತಿಯಿಂದ ವಿಘ್ನ ನಿವಾರಕ ಗಣೇಶನ ಆರಾಧನೆ ನಡೆಯಿತು.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಬೆಳಗಾವಿ
ಗಣೇಶ ಚತುರ್ಥಿ
 

Latest Videos
Recommended Stories
Recommended image1
ಉದ್ಘಾಟನೆಗೂ ಮುನ್ನವೇ ಮಂಗಳೂರು ಕೋಟೇಕಾರ್ ಇಂದಿರಾ ಕ್ಯಾಂಟೀನ್ ಜಾಗ ಖಾಲಿ ಮಾಡುವ ಭೀತಿ!
Recommended image2
ಮೈಸೂರು ದಸರಾ: 2ನೇ ಹಂತದ ಆನೆಗಳ ಆಗಮನ, ತೂಕದಲ್ಲಿ ಶ್ರೀಕಂಠನನ್ನೇ ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಸುಗ್ರೀವ!
Recommended image3
ಬೆಂಗಳೂರಲ್ಲಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಆಗೋಕೆ ಇಂಥವರೇ ಕಾರಣ! ಬೈಕ್ ಅಡ್ಡಗಟ್ಟಿ ಪುಂಡಾಟ
Related Stories
Recommended image1
Belagavi: ಹಬ್ಬದ ಸಂಭ್ರಮವನ್ನೇ ಕಸಿದ ಫ್ರಿಡ್ಜ್ ಸ್ಫೋಟ; ಒಂದೇ ಕುಟುಂಬದ ನಾಲ್ವರು ಸಾವು, ಇಬ್ಬರ ಸ್ಥಿತಿ ಗಂಭೀರ
Recommended image2
IND vs AFG: ಪ್ಲೇಯಿಂಗ್ XIನಿಂದ ಸೂರ್ಯವಂಶಿ ಡ್ರಾಪ್, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಶ್ರೀಕಾಂತ್ ವಿರುದ್ಧ ಪತ್ನಿ ಕೆಂಡಾಮಂಡಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved