ಎದುರಿಗೆ ಶಾಂತಿ ಮಂತ್ರ, ಗಡಿಯಲ್ಲಿ ಯುದ್ಧ ಸಿದ್ಧತೆ: ಬಯಲಾಯ್ತು ಚೀನಾ ಕುತಂತ್ರ ಬುದ್ಧಿ!

ಭಾರತದ ಜೊತೆಗೆ ಗಡಿ ವಿವಾದದ ಕುರಿತು ಮಾತುಕತೆ ನಡೆಸುತ್ತಿರುವ ವೇಳೆಯಲ್ಲಿಯೇ ತನ್ನ ಈಶಾನ್ಯ ಭಾಗದ ಅತೀ ಎತ್ತರದ ಪ್ರದೇಶದಲ್ಲಿ ಸಾವಿರಾರು ಪ್ಯಾರಾಚೂಟ್ ಗಳಲ್ಲಿ ಯೋಧರನ್ನು ಇಳಿಸುವ ಮೂಲಕ ಚೀನಾ ಮತ್ತೊಮ್ಮೆ ಧಾರ್ಷ್ಟ್ಯ ಮೆರೆದಿದೆ.  ಪ್ಯಾರಾಚೂಟ್‌ಗಳ ಜೊತೆಗೆ ಸಾಕಷ್ಟು ಸಶಸ್ತ್ರವಾಹನಗಳು ಇಲ್ಲಿಗೆ ಆಗಮಿಸಿವೆ. 

Share this Video
  • FB
  • Linkdin
  • Whatsapp

ನವದೆಹಲಿ (ಜೂ. 09): ಭಾರತದ ಜೊತೆಗೆ ಗಡಿ ವಿವಾದದ ಕುರಿತು ಮಾತುಕತೆ ನಡೆಸುತ್ತಿರುವ ವೇಳೆಯಲ್ಲಿಯೇ ತನ್ನ ಈಶಾನ್ಯ ಭಾಗದ ಅತೀ ಎತ್ತರದ ಪ್ರದೇಶದಲ್ಲಿ ಸಾವಿರಾರು ಪ್ಯಾರಾಚೂಟ್ ಗಳಲ್ಲಿ ಯೋಧರನ್ನು ಇಳಿಸುವ ಮೂಲಕ ಚೀನಾ ಮತ್ತೊಮ್ಮೆ ಧಾರ್ಷ್ಟ್ಯ ಮೆರೆದಿದೆ. ಪ್ಯಾರಾಚೂಟ್‌ಗಳ ಜೊತೆಗೆ ಸಾಕಷ್ಟು ಸಶಸ್ತ್ರವಾಹನಗಳು ಇಲ್ಲಿಗೆ ಆಗಮಿಸಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತುರ್ತು ಸಂದರ್ಭದಲ್ಲಿ ಎಂತಹ ಕಠಿಣ ಪ್ರದೇಶಕ್ಕಾದರೂ ತನ್ನ ಯೋಧರನ್ನು, ಯುದ್ಧದ ಸಾಮಗ್ರಿಗಳನ್ನು ನಿಯೋಜಿಸುವ ಶಕ್ತಿ ತನಗಿದೆ ಎಂಬುದನ್ನು ತೋರಿಸಲು ಚೀನಾ ಈ ಕಸರತ್ತು ನಡೆಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ನಮ್ಮ ಉತ್ಪನ್ನ ಬಹಿಷ್ಕಾರ ಭಾರತೀಯರಿಗೆ ಅಸಾಧ್ಯ: ಚೀನಾ ಕುಹಕ!

ಗಡಿ ವಿವಾದದ ಕುರಿತು ಉಭಯ ದೇಶಗಳ ನಡುವೆ ಮಾತುಕತೆ ನಡೆದ ಹಿನ್ನಲೆಯಲ್ಲಿ ಎರಡೂ ದೇಶಗಳ ಸೇನೆಗಳು ಗಡಿಯಿಂದ ಹಿಂದೆ ಸರಿದಿವೆ ಎನ್ನಲಾಗಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ಮತ್ತೆ ಎರಡೂ ದೇಶಗಳ ನಡುವೆ ದ್ವೇಷಮಯ ಪರಿಸ್ಥಿತಿ ಹುಟ್ಟು ಹಾಕುವ ಸಾಧ್ಯತೆ ಇದೆ. 

Related Video