
ಬೆಂಕಿ ಹಚ್ಚಿದವರ ಬೆನ್ನಿಗೆ ನಿಂತರಾ ಡಿಸಿಎಂ ಡಿಕೆಶಿ? ಪ್ರಭಾವಿ ಸಚಿವರ ಆಪ್ತರ ರಕ್ಷಣೆಗೆ ಮುಂದಾಯ್ತಾ ಸರ್ಕಾರ..?
ಬೆಂಗಳೂರು, ಹುಬ್ಬಳ್ಳಿಯಲ್ಲಿ ಅಮಾಯಕರ ಮೇಲೆ ಕೇಸ್ ಹಾಕಿದ್ದಾರೆ. ಗಲಭೆ ಮಾತ್ರವಲ್ಲ ಹೋರಾಟ ಮಾಡಿದವರ ಮೇಲೂ ಕೇಸ್ ಹಾಕಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಬೆಂಕಿ ಹಚ್ಚಿದವರ ಬೆನ್ನಿಗೆ ಡಿಕೆಶಿ ನಿಂತರಾ ಎಂಬ ಅನುಮಾನ ಕಾಡುತ್ತಿದೆ. ಬಿಜೆಪಿ ಅವಧಿಯಲ್ಲಿ ಅಮಾಯಕರ ಮೇಲೆ ಕೇಸ್ ಹಾಕಿದ್ದಾರೆ. ಬೆಂಗಳೂರು, ಹುಬ್ಬಳ್ಳಿಯಲ್ಲೂ ಅಮಾಯಕರ ಮೇಲೆ ಕೇಸ್ ಹಾಕಿದ್ದಾರೆ. ಗಲಭೆ ಮಾತ್ರವಲ್ಲ ಹೋರಾಟ ಮಾಡಿದವರ ಮೇಲೂ ಕೇಸ್ ಹಾಕಿದ್ದಾರೆ ಎಂದು ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮೂವರ ರಕ್ಷಣೆಗೆ ಕಾಂಗ್ರೆಸ್ ಪ್ಲ್ಯಾನ್ ಮಾಡ್ತಿದೆ ಎಂಬ ಅನುಮಾನ ಕಾಡ್ತಿದೆ. ಆದರೆ, ಡಿಜೆ ಹಳ್ಳಿ ಕೇಸ್ ವಾಪಸ್ ಪಡೆಯಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ