ಮನೆಯಲ್ಲ, ಅರಮನೆ: ಜೈಲುಪಾಲಾಗಿರುವ ಆರ್‌ಡಿ ಪಾಟೀಲ್‌ನ ರಾಯಲ್‌ ಲೈಫ್‌ಸ್ಟೈಲ್‌!

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಮಾಡಿರುವ ಆರೋಪ ಹೊತ್ತು ಜೈಲುಸೇರಿರುವ ಆರ್‌ಡಿ ಪಾಟೀಲ್‌ನ ಲೈಫ್‌ಸ್ಟೈಲ್‌ ಬಗ್ಗೆ ಮತ್ತಷ್ಟು ಮಾಹಿತಿಗಳು ಹೊರಬಿದ್ದಿವೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 11): ಪಿಎಸ್ಐ ಅಕ್ರಮ ನೇಮಕಾತಿ ಅಕ್ರಮದ (PSI Recruitment Scam) ಕಿಂಗ್ ಪಿನ್ ರುದ್ರಗೌಡನ (Rudra Gowda) ಜೀವನ ಹೇಗಿದೆ ಗೊತ್ತಾ? ಅಕ್ರಮದ ಮಾಸ್ಟರ್ ಮೈಂಡ್ ರುದ್ರಗೌಡನ ರಾಯಲ್ ಲೈಫ್ ನ ಸ್ಟೋರಿ ಇದು. ಭ್ರಷ್ಟಾಚಾರದಲ್ಲಿ ಮುಳುಗಿದ್ದಂಥ ರುದ್ರಗೌಡನ ಜೀವನ ಶೈಲಿ ನೋಡಿದರೆ ನಿಮಗೆ ಅಚ್ಚರಿಯಾಗುವುದು ಖಂಡಿತ.

 ಆರ್ ಡಿ ಪಾಟೀಲ್ (RD Patil) ಮನೆಯನ್ನು (Home ) ನೋಡಿದ್ರೆ ನೀವು ನಿಜಕ್ಕೂ ಅಚ್ಚರಿಪಡ್ತೀರ. ಅಂಥ ಭವ್ಯ ಬಂಗಲೆಯನ್ನು ಆರ್ ಡಿ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ. ಇದು ಆರ್ ಡಿ ಪಾಟೀಲ್ ಮನೆಯಲ್ಲ ಅರಮನೆ ಎಂದ್ರೂ ತಪ್ಪಲ್ಲ. ಕಲಬುರಗಿಯ ಅಕ್ಕಮಹಾದೇವಿ ಕಾಲೋನಿಯಲ್ಲಿ ಈತ ಮನೆ ನಿರ್ಮಾಣ ಮಾಡುತ್ತಿದ್ದಾನೆ.

PSI Recruitment Scam: ಅಕ್ರಮಕ್ಕೆ ಕಾರಣವಾಗಿದ್ದ ಆ ಪುಟ್ಟ ವಸ್ತು ಯಾವುದು ಗೊತ್ತಾ?

ಮಲೇಷ್ಯಾ ಟೀಕ್ ವುಡ್, ಇಟಾಲಿಯನ್ ಮಾರ್ಬಲ್ ಸೇರಿದಂತೆ ದೇಶ ವಿದೇಶಗಳ ದುಬಾರಿ ವಸ್ತುಗಳನ್ನು ಬಳಸಿಕೊಂಡು ಆರ್ ಡಿ ಪಾಟೀಲ್ ತನ್ನ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಆರ್ ಡಿ ಪಾಟೀಲ್ ಜೈಲಿನಲ್ಲಿದ್ದರೂ ಮನೆಯ ಕಾಮಗಾರಿ ನಿಂತಿಲ್ಲ. ಇಂಜಿನಿಯರ್ ಮೂಲಕ ಆರ್ ಡಿ ಪಾಟೀಲ್ ಮನೆ ನಿರ್ಮಾಣ ಕೆಲಸ ನಡೆಯುತ್ತಿದೆ.

Related Video