ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡ್ಬೇಡಿ..!

ಇಲ್ಲಿನ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲು ಬಸ್‌ನಲ್ಲಿ 25 ಮಂದಿಯನ್ನು ಅಧಿಕಾರಿಗಳು ಕರೆ ತಂದಿದ್ದರು. ಈ ವೇಳೆ ಬಸ್ ತಡೆದು ಕ್ವಾರಂಟೈನ್ ಮಾಡಲು ವಿರೋಧಿಸಿದರು. ಇದರ ಜತೆಗೆ ತಹಶೀಲುದಾರರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.

Share this Video
  • FB
  • Linkdin
  • Whatsapp

ಬೆಂಗಳೂರು(ಜು.18): ವಿದೇಶಗಳಿಂದ ಬಂದವರನ್ನು ಇಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ದೇವನಹಳ್ಳಿಯ ಶಾಂತಿನಗರ ನಿವಾಸಿಗಳು ಆಗ್ರಹಿಸಿದ್ದಾರೆ. ಪ್ರತಿಭಟನೆ ಬೆನ್ನಲ್ಲೆ ಕ್ವಾರಂಟೈನ್ ಮಾಡಲು ಕರೆತಂದವರನ್ನು ಅಧಿಕಾರಿಗಳು ವಾಪಾಸ್ ಕರೆದುಕೊಂಡು ಹೋಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲು ಬಸ್‌ನಲ್ಲಿ 25 ಮಂದಿಯನ್ನು ಅಧಿಕಾರಿಗಳು ಕರೆ ತಂದಿದ್ದರು. ಈ ವೇಳೆ ಬಸ್ ತಡೆದು ಕ್ವಾರಂಟೈನ್ ಮಾಡಲು ವಿರೋಧಿಸಿದರು. ಇದರ ಜತೆಗೆ ತಹಶೀಲುದಾರರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.

ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಶೇ 50% ಬೆಡ್‌ಗಳು ಮೀಸಲು

ವಿದೇಶದಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನು ಏರ್‌ಲಿಫ್ಟ್ ಮೂಲಕ ಕರೆತರಲಾಗುತ್ತಿದೆ. ಇಂದು ಕೂಡಾ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವಂತಹ ಶಾಂತಿ ನಗರದಲ್ಲಿ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಸ್ಥಳೀಯರು ಅವಕಾಶ ಮಾಡಿಕೊಡಲಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video