ವಿರೋಧಿ ಬಣ ವಾಷಿಂಗ್ಟನ್ ಗೂ ಹೋಗಲಿ, ಯತ್ನಾಳ್ ಬಾಣಕ್ಕೆ ಕೇಸರಿ ಪಡೆಯಲ್ಲಿ ತಳಮಳ

ವಿರೋಧಿ ಬಣ ದೆಹಲಿಗಲ್ಲ.. ಅಲ್ಲ ವಾಷಿಂಗ್ಟನ್ ಗೂ ಹೋಗಲಿ, ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಬಸನಗೌಡ್ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಇದೀಗ ಬಿಜೆಪಿ ಒಳಗಿನ ಬಂಡಾಯ ಮತ್ತೊಂದು ಹಂತಕ್ಕೆ ತಲುಪಿದೆ.
 

Chethan Kumar  | Published: Jan 20, 2025, 11:54 PM IST

ರಾಜ್ಯ ಬಿಜೆಪಿ ಒಳಗಿನ ಬಂಡಾಯ ಮತ್ತೊಂದು ಸ್ವರೂಪ ಪಡೆದಿದೆ. ಯತ್ನಾಳ್ ಬಣ ಹಾಗೂ ಬಿವೈ ವಿಜಯೇಂದ್ರ ಬಣ ನಡುವಿನ ವಾಕ್ಸಮರ ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಇದೀಗ ಯತ್ನಾಳ್ ಬಿಟ್ಟಿರುವ ಬಾಣಕ್ಕೆ ಕೇಸರಿ ಪಾಳಯದಲ್ಲಿ ತಳಮಳ ಶುರುವಾಗಿದೆ.  ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಯತ್ನಾಳ್, ಬಸನಗೌಡ ಯತ್ನಾಳ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ವಿಜಯೇಂದ್ರ ಚೇಲಾಗಳು ನನ್ನನ್ನ ಏನೂ ಮಾಡಲಾಗೋದಿಲ್ಲ.  ನನ್ನನ್ನು ಬಿಜೆಪಿ ಮರಳಿ ಕರೆದಿದ್ದು ಕೇಂದ್ರ ಸಚಿವ ಅಮಿತ್ ಶಾ ಎಂದಿದ್ದಾರೆ. ವಿರೋಧಿ ಬಣ ದೆಹಲಿಗಲ್ಲ.. ಅಲ್ಲ ವಾಷಿಂಗ್ಟನ್ ಗೂ ಹೋಗಲಿ ಎಂದು ಯತ್ನಾಳ್ ಹೇಳಿದ್ದಾರೆ.