
Omicron Threat: ಸರ್ಕಾರದ ನಿರ್ಧಾರಗಳಿಗೆ ನಮ್ಮ ಸಹಕಾರ ಇರುತ್ತದೆ: ಸಿದ್ದರಾಮಯ್ಯ
ಒಮಿಕ್ರಾನ್ (Omicron) ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಸರ್ಕಾರಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಚಿಕ್ಕಮಗಳೂರಿನಲ್ಲಿ (Chikkamagalur) ಹೇಳಿದ್ದಾರೆ.
ಬೆಂಗಳೂರು (ಡಿ. 03): ಒಮಿಕ್ರಾನ್ (Omicron) ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಸರ್ಕಾರಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಚಿಕ್ಕಮಗಳೂರಿನಲ್ಲಿ (Chikkamagalur) ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Omicron Threat:ಬೆಂಗ್ಳೂರಿಗೂ ಬಂತು ಒಮಿಕ್ರಾನ್, ಹೊಸವರ್ಷ, ಕ್ರಿಸ್‌ಮಸ್ ಸೆಲಬ್ರೇಶನ್‌ಗೆ ಬ್ರೇಕ್
ಒಮಿಕ್ರಾನ್ ತಡೆಗೆ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಿ. ಎಲ್ಲರಿಗೂ 2 ಡೋಸ್ ವ್ಯಾಕ್ಸಿನೇಷನ್ ತ್ವರಿತಗೊಳಿಸಬೇಕು. ವೈರಸ್ ಹರಡದಂತೆ ಸರ್ಕಾರ ನೋಡಿಕೊಳ್ಳಬೇಕು. ವಿದೇಶ ವಿಮಾನಗಳನ್ನು ರದ್ದುಗೊಳಿಸಬೇಕು. ರಾಜಕೀಯ ಸಮಾವೇಶಗಳಿಗೆ ಬೇಕಾದರೂ ನಿರ್ಬಂಧ ಹೇರಿ, ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಸಹಕಾರ ಇರುತ್ತದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.