
ಶಿಕಾರಿಪುರದ ವಿಜಯ ಕೇಸರಿಗೆ ಬಿಜೆಪಿ ಪ್ರಮೋಶನ್; ಹಿಂದಿದೆ ಈ ರೀಸನ್.!
ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು ನಿರೀಕ್ಷೆಯಂತೆಯೇ ಬಿಎಸ್‌ವೈ ಪುತ್ರ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಜಯೇಂದ್ರ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.
ಬೆಂಗಳೂರು (ಆ. 02): ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು ನಿರೀಕ್ಷೆಯಂತೆಯೇ ಬಿಎಸ್‌ವೈ ಪುತ್ರ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಜಯೇಂದ್ರ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಿಜಯೇಂದ್ರ ಅವರಿಗೆ ತಂದೆಯ ನಾಮಬಲದ ಜೊತೆಗೆ ಅವರ ಖದರ್ ಕೂಡಾ ಬದಲಾಗಿದೆ. ಕೆಆರ್ ಪೇಟೆ ಉಪಚುನಾವಣೆ. ಈ ಚುನಾವಣೆ ವಿಜಯೇಂದ್ರ ಅವರ ಖದರ್ ಬದಲಾಯಿಸಿತು. ಯಾವ ನೆಲ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿತ್ತೋ, ಯಾವ ನೆಲದಲ್ಲಿ ಬಿಜೆಪಿಗೆ ಬ್ಯಾನರ್ ಕಟ್ಟೋಕೂ ಕಾರ್ಯಕರ್ತರಿಲ್ಲ ಎನಿಸಿಕೊಂಡಿತ್ತೋ ಅದೇ ನೆಲದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದು ಇದೇ ವಿಜಯೇಂದ್ರ. ಆ ಐತಿಹಾಸಿಕ ಗೆಲುವಿನ ನಂತರ ಸಿಎಂ ಪುತ್ರ ಹೈ ಕಮಾಂಡ್‌ಗೂ ಹತ್ತಿರವಾಗಿದ್ದಾರೆ.
ಸಿಎಂ ಪುತ್ರ ಎನ್ನುವ ಕಾರಣಕ್ಕೆ ಬಿಜೆಪಿ ಹೈ ಕಮಾಂಡ್ ವಿಜಯೇಂದ್ರ ಅವರಿಗೆ ಉಪಾಧ್ಯಕ್ಷ ಸ್ಥಾನ ಕೊಟ್ಟಿಲ್ಲ. ಅವರಿಗೆ ಅವರದ್ದೇ ಆದ ಮಾನದಂಡಗಳಿವೆ. ಹಾಗಾದರೆ ಆ ಮಾನದಂಡಗಳೇನು? ಇಲ್ಲಿದೆ ಒಂದು ಪರಿಚಯ..!