ಜೈಲಿನಲ್ಲಿ ನಟ ದರ್ಶನ್ ಮತ್ತು ನಟಿ ಪವಿತ್ರಾಗೌಡ ನಡುವೆ ಬ್ರೇಕಪ್ ಆಯ್ತಾ? ಹೆಂಡ್ತಿ ಮಾತಿಗೆ ಕಟ್ಟುಬಿದ್ದನಾ ಕಾಟೇರಾ?

ನಟಿ ಪವಿತ್ರಾಗೌಡಗೆ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ಕೊಲೆ ಮಾಡಿದ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್‌ ಈಗ ಪವಿತ್ರಾಗೌಡಳಿಂದ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ..

Share this Video
  • FB
  • Linkdin
  • Whatsapp

ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿಗೆ ಬಂದು ತಿಂಗಳಾಯ್ತು. ಗೆಳತಿಯ ಕಡೆ ತಿರುಗಿ ನೋಡ್ತಾ ಇಲ್ಲ ಡೆವಿಲ್ ಹೀರೋ ದರ್ಶನ್. ಹೆಂಡತಿ ಮಾತಿಗೆ ಕಾಟೇರ ಕಟ್ಟುಬಿದ್ದನಾ ಅನ್ನೋ ಪ್ರಶ್ನೆ ಮೂಡಿದೆ.. ಡೆವಿಲ್ ಪಡೆ ಇಬ್ಭಾಗವಾಯ್ತಾ ಅನ್ನೋ ಅನುಮಾನ ಹುಟ್ಟಿದೆ..? ಅಸಲಿಗೆ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಲ್ಲಿ ದರ್ಶನ್‌ಗೆ ಪವಿತ್ರಾಗೌಡ ಜೊತೆ ಮಾತಾಡೋಕೆ ಅವಕಾಶವಿದ್ದರೂ ಯಾಕೆ ಮನಸ್ಸು ಮಾಡಿಲ್ಲ? ಮರ್ಡರ್ ಮಿಸ್ಟರಿಯಾಗಿ ಕನ್ವರ್ಟ್ ಆದ ಆ ಲವ್ ಸ್ಟೋರಿಲಿ ಬ್ರೇಕಪ್ ಅನ್ನೋ ಟ್ವಿಸ್ಟ್ ಬಂದಿದೆಯಾ ಎನ್ನುವ ಅನುಮಾನ ಮೂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರೇಣುಕಾಸ್ವಾಮಿಯ ಕೊಲೆ ಆರೋಪದಲ್ಲಿ ದರ್ಶನ್ ಜೈಲುಪಾಲಾಗಿದಾನೆ. ಅವನ ಜೊತೆಗೆ, ಇಡೀ ಡಿಗ್ಯಾಂಗೇ ಕಂಬಿ ಎಣಿಸ್ತಾ ಇದೆ. ಇದರ ಮಧ್ಯೆ, ಎರಡು ಸುದ್ದಿಗಳು ಸದ್ದು ಮಾಡ್ತಿದ್ದಾವೆ.. ಒಂದು ದರ್ಶನ್ ಪವಿತ್ರಾ ಗೌಡ ಬ್ರೇಕ್ ಅಪ್ ಕತೆಯಾದ್ರೆ, ಇನ್ನೊಂದು ಸಂಧಾನದ ಕತೆ. ಅಷ್ಟಕ್ಕೂ ಹೆಂಗಿದ್ದ ದರ್ಶನ್ ಹೆಂಗಾಗೋದಾ. ಅವನ ಮತ್ತು ಪವಿತ್ರಾ ಗೌಡ ನಡುವಿನ ಕಂದಕ ನಿರ್ಮಾಣವಾಗಿದ್ದು ಯಾಕೆ? ಹೇಗೆ? ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ದರ್ಶನ್ ಜೈಲಿಗೆ ಹೋದಾಗ ಆತನ ಪರ ಯಾರು ನಿಲ್ತಾರೆ ಅನ್ನೋ ಪ್ರಶ್ನೆ ಬೃಹದಾಕಾರವಾಗಿ ಕಾಡ್ತಾ ಇತ್ತು. ಆತನ ಅಭಿಮಾನಿಗಳು ನೆಚ್ಚಿನ ನಟನಿಗೋಸ್ಕರ ಗದ್ದಲ ಮಾಡ್ತಾ ಇದ್ರೆ, ಸದ್ದೇ ಇಲ್ಲದ ಅವನ ಪರ ನಿಂತಿದ್ದು ಒಬ್ಬರೇ, ಪತ್ನಿ ವಿಜಯಲಕ್ಷ್ಮಿ.

Related Video