ಶಾಸಕ ರಾಮಪ್ಪ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ ಸಿದ್ದು..
ಸಿದ್ದರಾಮಯ್ಯ ಮನೆ ಮುಂದೆ ರಾಮಪ್ಪ ಬೆಂಬಲಿಗರು ಟಿಕೆಟ್ ನೀಡಲು ಒತ್ತಾಯಿಸಲು ಆರಂಭಿಸಿದ್ದಾರೆ. ಜನಸಂದಣಿ ನಡುವೆ ಸಿದ್ದರಾಮಯ್ಯ ಹೊರಡುವಾಗ ತಳ್ಳಾಟ ನೂಕಾಟವಾಗಿದ್ದು, ಸಿಟ್ಟಿನಿಂದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ದಾವಣಗೆರೆಯ ಹರಿಹರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ರಾಮಪ್ಪ ಸ್ಪರ್ಧಿಸಲು ಮುಂದಾಗಿದ್ದಾರೆ. ಇದಕ್ಕಾಗಿ ರಾಮಪ್ಪ ಬೆಂಬಲಿಗರು ಸಿದ್ದರಾಮಯ್ಯ ಸುತ್ತುವರೆದು ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇನ್ನು ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ರಾಮಪ್ಪ ಅವರಿಗೆ ಸ್ಪಷ್ಟನೆ ನೀಡಿದ್ದು, ಕಾಯುವಂತೆ ಸೂಚಿಸಿದ್ದಾರೆ. ಆದರೆ ಸಿದ್ದರಾಮಯ್ಯ ಮನೆ ಮುಂದೆ ರಾಮಪ್ಪ ಬೆಂಬಲಿಗರು ಟಿಕೆಟ್ ನೀಡಲು ಒತ್ತಾಯಿಸಲು ಆರಂಭಿಸಿದ್ದಾರೆ. ಜನಸಂದಣಿ ನಡುವೆ ಸಿದ್ದರಾಮಯ್ಯ ಹೊರಡುವಾಗ ತಳ್ಳಾಟ ನೂಕಾಟವಾಗಿದ್ದು, ಸಿಟ್ಟಿನಿಂದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಾರೆ.