DK Shivakumar: ಡಿಕೆಶಿಗೆ ಮತ್ತೊಂದು ಸಂಕಷ್ಟ: ಡಿನೋಟಿಫಿಕೇಷನ್ ಪ್ರಕರಣದ ಬೆನ್ನತ್ತಿದ ಸಿಬಿಐ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಅಕ್ರಮ ಆಸ್ತಿ ಗಳಿಕೆ ಕೇಸ್ ಜೊತೆಗೆ, ಮತ್ತೊಂದು ಸಂಕಷ್ಟ ಎದುರಾಗಿದೆ. 

Share this Video
  • FB
  • Linkdin
  • Whatsapp

ಮುಕ್ತಾಯವಾಗಿದ್ದ ಪ್ರಕರಣವನ್ನು ಸಿಬಿಐ ಮತ್ತೆ ಕೆದಕಿದ್ದು, ಡಿಕೆಶಿ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದ ಬೆನ್ನತ್ತಿದ್ದಾರೆ. ಅಧಿಕಾರಿಗಳು ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಕೇಸ್ ಡಿಟೈಲ್ಸ್ ಪಡೆಯುತ್ತಿದ್ದು, ಮೃತಪಟ್ಟಿದ್ದ ವ್ಯಕ್ತಿ ಹೆಸರಿನಲ್ಲಿ ಡಿನೋಟಿಫಿಕೇಷನ್ ಆರೋಪವಿದೆ. ಅಕ್ರಮವಾಗಿದ್ದ ಡಿನೋಟಿಫಿಕೇಷನ್ ಆದ ಭೂಮಿಯನ್ನು ಡಿಕೆಶಿ ಖರೀದಿ ಮಾಡಿದ ಆರೋಪವಿದ್ದು, ಕೇಸ್‌ ಕ್ಲೋಸ್‌ ಆಗುವ ಹೊತ್ತಿನಲ್ಲಿ ಡಿನೋಟಿಫಿಕೇಷನ್ ಕೇಸ್‌ಗೆ ಮರುಜೀವ ಬಂದಿದೆ. ಕಳೆದ ವಾರ ಟಿಜೆ ಅಬ್ರಹಾಂ ಕರೆಸಿ ಮಾಹಿತಿ ಕೇಳಿರುವ ಸಿಬಿಐ, ಗುರುವಾರ ದಾಖಲೆ ಸಮೇತ ಮತ್ತೆ ವಿಚಾರಣೆಗೆ ಬರಲು ಸೂಚನೆ ನೀಡಿದ್ದಾರೆ. 

ಕೇಂದ್ರದ ‘ಹಿಂದಿ ಹೇರಿಕೆ’ಗೆ ರಾಹುಲ್‌ ತೀವ್ರ ವಿರೋಧ

Related Video