ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಬಿಜೆಪಿ ಕಸರತ್ತು: ಕಾಂಗ್ರೆಸ್‌ ಯಾತ್ರೆಗೆ ಸೆಡ್ಡು ಹೊಡೆಯಲು 'ರಥಯಾತ್ರೆ'

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ.

Share this Video
  • FB
  • Linkdin
  • Whatsapp

ಕಾಂಗ್ರೆಸ್‌ ಯಾತ್ರೆಗೆ ಸೆಡ್ಡು ಹೊಡೆಯಲು ಬಿಜೆಪಿ ರಥಯಾತ್ರೆ ನಡೆಸುತ್ತಿದ್ದು, ಮೇಲಿಂದ ಮೇಲೆ ಯಾತ್ರೆ ಕೈಗೊಳ್ಳುತ್ತಿದೆ. ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಕೇಂದ್ರ ಹಾಗೂ ರಾಜ್ಯ ನಾಯಕರಿಂದ ಮತಬೇಟೆಗೆ ಸಜ್ಜಾಗಿದ್ದಾರೆ. ರಾಜ್ಯದ ನಾಲ್ಕು ದಿಕ್ಕಿನಿಂದ ಯಾತ್ರೆಗೆ ಬಿಜೆಪಿ ತಯಾರಿ ನಡೆಸಿದೆ. ಕಾರ್ಯಕಾರಿಣಿ ಸಭೆಯ ಬಳಿಕ ಯಾತ್ರೆ ದಿನಾಂಕ ಘೋಷಣೆಯಾಗಲಿದ್ದು, ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾರಿಂದ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಬೆಳಗಾವಿ ಮಹಾದಾಯಿ ಭಾಗದಲ್ಲಿ ಯಾತ್ರೆ, ಕಾವೇರಿ ಭಾಗದಲ್ಲಿ ರಥಯಾತ್ರೆ ಹಾಗೂ ಬೀದರ್‌'ನಿಂದ ಕೊಪ್ಪಳ ಭಾಗದಲ್ಲಿ ಯಾತ್ರೆ ಕೈಗೊಳ್ಳಲು ನಿರ್ಧರಿಸಲಾಗಿದೆ.

Related Video