News Hour: ‘ಇವರನ್ನು ಲೂಟಿ ಹೊಡೆಯೋಕೆ ಬಿಟ್ಟು, ನಾನು ವಿದೇಶದಲ್ಲಿ ಇರಬೇಕಾ?’, ಕುಮಾರಸ್ವಾಮಿ ಕೆಂಡ!

ಕಾಂಬೋಡಿಯಾ ಪ್ರವಾಸದಿಂದ ವಾಪಾಸ್‌ ಬರುತ್ತಿದ್ದಂತೆ ಎಚ್‌ಡಿ ಕುಮಾರಸ್ವಾಮಿ ಮತ್ತೆ ಸಿಡಿದೆದಿದ್ದಾರೆ. ಪದೇ ಪದೇ ವಿದೇಶ ಪ್ರವಾಸ ಮಾಡುವ ಎಚ್‌ಡಿಕೆ ವಿದೇಶದಲ್ಲೇ ಇರಲಿ ಎಂದಿದ್ದ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಆ.14): ಯುರೋಪ್‌ ಪ್ರವಾಸದಿಂದ ಬರುತ್ತಿದ್ದಂತೆ ಕಾಂಗ್ರೆಸ್‌ ಸರ್ಕಾರದ ಮೇಲೆ ಕಮೀಷನ್‌ ಬಾಂಬ್‌ ಎಸೆದಿದ್ದ ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಈಗ ಕಾಂಬೋಡಿಯಾ ಪ್ರವಾಸದಿಂದ ವಾಪಾಸಾದಾಗಲೂ ಸರ್ಕಾರದ ವಿರುದ್ಧ ಸಿಡಿದೆದಿದ್ದಾರೆ. ಹೆಚ್ಡಿಕೆ ವಿದೇಶದಲ್ಲಿ ಇರಲಿ ಎಂದಿದ್ದ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ಇವರನ್ನು ಲೂಟಿ ಹೊಡೆಯೋಕೆ ಬಿಟ್ಟು, ನಾನು ವಿದೇಶದಲ್ಲಿ ಇರಬೇಕಾ?’ ಎಂದು ಪ್ರಶ್ನೆ ಮಾಡಿದ್ದಾರೆ.

ವಿಮಾನ ನಿಲ್ದಾಣದಲ್ಲಿಯೇ ಕಾಂಗ್ರೆಸ್ ಸಚಿವರ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. ‘ಇವರ ಪಾಪದ ದುಡ್ಡಲ್ಲಿ ನಾನು ವಿದೇಶಕ್ಕೆ ಹೋಗಬೇಕಾ?, ಕಾಂಬೋಡಿಯಾಗೆ ಸ್ನೇಹಿತರ ಆಹ್ವಾನ ಇತ್ತು, ನಾನು ಹೋಗಿದ್ದೆ, ಕಳೆದ 12 ವರ್ಷದಿಂದ ಪಕ್ಷದ ಸಂಘಟನೆಗೆ ಸಮಯ ಇಟ್ಟಿದ್ದೆ. ದೇಶ ಸುತ್ತು, ಕೋಶ ಓದು ಅಂತಾ ಹಿರಿಯರ ಗಾದೆ ಮಾತಿದೆ. ಯಾವ ದೇಶದಲ್ಲಿ ಏನಿದೆ ಅಂತಾ ತಿಳಿದುಕೊಳ್ಳಬೇಕಲ್ಲ ಹೋಗಿದ್ದೆ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫ್ಯಾಮಿಲಿ ಜೊತೆ ನಿಖಿಲ್ ಕುಮಾರಸ್ವಾಮಿ ವಿದೇಶ ಪ್ರವಾಸ; ಅತ್ತೆ-ಸೊಸೆ ಸಖತ್ ಸ್ಟೈಲಿಶ್ ಎಂದ ನೆಟ್ಟಿಗರು

ರಾಜ್ಯಪಾಲರಿಗೆ ದೂರು ನಕಲಿ ಪತ್ರ ಎಂದು ಆರೋಪಿಸಿದ್ದ ಚೆಲುವರಾಯಸ್ವಾಮಿಗೂ ಕುಮಾರಸ್ವಾಮಿ ಕೌಂಟರ್‌ ನೀಡಿದ್ದಾರೆ. ದೂರಿನ ಪತ್ರ ನಕಲಿ ಆಗಿದ್ರೆ ಗವರ್ನರ್ ಬಳಿ ಹೋಗಿದ್ಯಾಕೆ. ಹೌದಪ್ಪ.. ಆ ಪತ್ರಕ್ಕೆ ನಾನೇ ಸಹಿ ಹಾಕಿದ್ದು. ಎಲ್ಲಾ ಕಡೆ ನನ್ನ ಹೆಸರು ಯಾಕ್ ತಳುಕು ಹಾಕ್ತೀರಿ ಎಂದು ಕಿಡಿಕಾರಿದ್ದಾರೆ.

Related Video