ಸೆಮಿ ಫೈನಲ್‌ ಹಂತ ತಲುಪಿದ ಹಾಸನ ಟಿಕೆಟ್‌ ದಂಗಲ್, ನಾಳೆ 2ನೇ ಪಟ್ಟಿ ಬಿಡುಗಡೆ

ಹಾಸನದ ಜೆಡಿಎಸ್‌ ಟಿಕೆಟ್‌ ಹಂಚಿಕೆ ಪೈಪೋಟಿ ಸೆಮಿಫೈನಲ್‌ ಹಂತ ತಲುಪಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ನಾಳೆ ಟಿಕೆಟ್‌ ಘೋಷಣೆ ಮಾಡಲಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಏ.02): ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ತವರು ಕ್ಷೇತ್ರವಾದ ಹಾನಸ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ ಫೈಟ್‌ ಭಾರಿ ರೋಚಕ ತಿರುವು ಪಡೆದುಕೊಂಡಿದೆ. ದೇವೇಗೌಡರ ಹಿರಿಯ ಪುತ್ರ ರೇವಣ್ಣನ ಪತ್ನಿ ಭವಾನಿ ರೇವಣ್ಣ ಅವರು ನಾನೇ ಹಾಸನದ ಅಭ್ಯರ್ಥಿ ಎಂದು ಬಿಜೆಪಿ ಅಭ್ಯರ್ಥಿಗೆ ಸೆಡ್ಡು ಹೊಡೆದು ಪ್ರಚಾರ ಆರಂಭಿಸಿದ್ದಾರೆ. ಆದರೆ, ದೇವೇಗೌಡರ ಕಿರಿಯ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ಕೊಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಈಗ ಮನೆಯ ಒಳಗಿನ ಬೇಗುದಿ ರಾಜ್ಯಾದ್ಯಂತ ಪಸರಿಸಿದ್ದು, ಟಿಕೆಟ್‌ ಹಂಚಿಕೆಯ ವಿಚಾರವನ್ನು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ತೀರ್ಮಾನಕ್ಕೆ ಬಿಟ್ಟಿದ್ದಾರೆ. ಇನ್ನು ಜೆಡಿಎಸ್‌ ಟಿಕೆಟ್‌ ಹಂಚಿಕೆ ಪೈಪೋಟಿ ಸೆಮಿಫೈನಲ್‌ ಹಂತ ತಲುಪಿದ್ದು, ನಾಳೆ ಟಿಕೆಟ್‌ ಘೋಷಣೆ ಆಗುವ ಸಾಧ್ಯತೆಯಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video