ಡಿಕೆ ಶಿವಕುಮಾರ್ - ಸಿದ್ದರಾಮಯ್ಯ ನಡುವೆ ಮತ್ತೆ ಶುರುವಾಯ್ತು ಮುಸುಕಿನ ಗುದ್ದಾಟ!

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಮುಸಿಕಿನ ಗುದ್ದಾಟ ನಿಲ್ಲುವಂತೆ ಕಾಣುತ್ತಿಲ್ಲ. ಮೇಲ್ನೋಟಕ್ಕೆ ಇಬ್ಬರು ನಾಯಕರು ಚೆನ್ನಾಗಿ ಇದ್ದರೂ ಸಹ ಒಳಗೆ ಮುಸುಕಿನ ಗುದ್ದಾಟ ಇದ್ದೇ ಇದೆ.ಇದೀಗ ಎಐಸಿಸಿ ಕಾರ್ಯಕ್ರಮಕ್ಕೆ ಗೈರಾಗಿದ್ದು, ಸಿದ್ದು-ಡಿಕೆಶಿ ನಡುವೆ ಮತ್ತೆ ಬಣ ರಾಜಕೀಯ ಶುರುವಾಯ್ತಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. 

Share this Video
  • FB
  • Linkdin
  • Whatsapp

ಬೆಂಗಳೂರು, (ಅ.11): ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar)ನಡುವಿನ ಮುಸಿಕಿನ ಗುದ್ದಾಟ ನಿಲ್ಲುವಂತೆ ಕಾಣುತ್ತಿಲ್ಲ. ಮೇಲ್ನೋಟಕ್ಕೆ ಇಬ್ಬರು ನಾಯಕರು ಚೆನ್ನಾಗಿ ಇದ್ದರೂ ಸಹ ಒಳಗೆ ಮುಸುಕಿನ ಗುದ್ದಾಟ ಇದ್ದೇ ಇದೆ. ಇದೀಗ ಎಐಸಿಸಿ (AICC) ಕಾರ್ಯಕ್ರಮಕ್ಕೆ ಗೈರಾಗಿದ್ದು, ಸಿದ್ದು-ಡಿಕೆಶಿ ನಡುವೆ ಮತ್ತೆ ಬಣ ರಾಜಕೀಯ (Groupism) ಶುರುವಾಯ್ತಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂಜಾಬ್‌, ಉತ್ತರ ಪ್ರದೇಶ, ಗುಜರಾತ್‌, ಉತ್ತರಾಖಂಡ ಚುನಾವಣೆಯಲ್ಲಿ ಸಿದ್ದರಾಮಯ್ಯ ಪಾತ್ರವೇನು?

ಸಿದ್ದರಾಮಯ್ಯನವರನ್ನು ಡಿಕೆ ಬಣ ರಾಷ್ಟ್ರ ರಾಜಕೀಯಕ್ಕೆ ಕಳುಹಿಸಲು ಹುನ್ನಾರ ನಡೆಸಿದ ಎಂದು ಸಿದ್ದರಮಯ್ಯನವರ ಬಣ ಆಕ್ರೋಶಗೊಂಡಿದೆ ಎನ್ನಲಾಗಿದೆ. ಇದರಿಂದ ಡಿಕೆಶಿ ವಿರುದ್ಧ ಸಿದ್ದು ಬಣ ನಡುವೆ ಆತಂಕರಿ ಕಚ್ಚಾಟ ಶುರುವಾಗಿದೆ ಎಂದು ತಿಳಿದುಬಂದಿದೆ. ಈ ಬಣ ರಾಜಕೀಯದಿಂದಾಗಿ ಎಐಸಿಸಿಯ ಪ್ರತಿಭಟನೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಗೈರಾಗಿದ್ದು, ಈ ಮೂಲಕ ಎಐಸಿಸಿ ಕಾರ್ಯಕ್ರಮವನ್ನು ನಿರ್ಲಕ್ಷಿಸಿದ್ದಾರೆ. 

Related Video