25 ವರ್ಷಗಳ ನಂತರ ರಾಜಕೀಯ ತಿರುವು ಕೊಟ್ಟ ಡಿ.ಕೆ. ಶಿವಕುಮಾರ್ ಹೇಳಿಕೆ!

ಕರ್ನಾಟಕದ ರಾಜಕೀಯದಲ್ಲಿ ಮತ್ತೆ ಸಿಎಂ ಕುರ್ಚಿ ಚರ್ಚೆ ಮುನ್ನೆಲೆಗೆ ಬಂದಿದೆ. ಡಿಕೆ ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಗಳು ಸಿಎಂ ಬದಲಾವಣೆಯ ಗುಲ್ಲನ್ನೆಬ್ಬಿಸಿವೆ. ಅಂದು ಮಂತ್ರಿಗಿರಿ ಪಡೆದ ರೀತಿಯಲ್ಲಿಯೇ ಈಗ ಸಿಎಂ ಪಟ್ಟ ಲಭ್ಯವಾಗುವುದೇ?

Share this Video
  • FB
  • Linkdin
  • Whatsapp

ರಾಜ್ಯ ರಾಜಕಾರಣದಲ್ಲಿ ಯಾವಾಗ ಏನಾಗುತ್ತೋ, ಯಾಕಾಗುತ್ತೋ, ಹೇಗಾಗುತ್ತೋ, ಯಾರೂ ಹೇಳೋಕ್ಕಾಗಲ್ಲ.. ಅಂಥದ್ದೊಂದು ಘಟನೆ, 25 ವರ್ಷಗಳ ಹಿಂದೆ ನಡೆದಿತ್ತು.. ಈಗ ಮತ್ತೆ ಅಂಥದ್ದೇ ಘಟನೆ ರಿಪೀಟ್ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಸಿಎಂ ಕುರ್ಚಿಯ ವಿಚಾರವಾಗಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಗಾಳಿಯಲ್ಲಿ ಗುಂಡು ಹೊಡೆಯೋ ಕೆಲಸವನ್ನ ನಿರಂತರವಾಗಿ ಮಾಡ್ತಲೇ ಇದ್ದಾರೆ. ಹಾಗಿದ್ರೆ,ಮತ್ತೆ ಮತ್ತೆ ಕುರ್ಚಿ ಚರ್ಚೆಯನ್ನ ಡಿಕೆ ಮುನ್ನೆಲೆಗೆ ತಂದು ಬಿಡ್ತಾ ಇರೋದು ಹೇಗೆ ಅನ್ನೋದನ್ನ ತೋರಿಸ್ತೀವಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎಂ ಬದಲಾವಣೆ..ಕೈ ಸರ್ಕಾರದ ಒಳಗೆ ಆಗಾಗ ಕೋಲಾಹಲಕ್ಕೆ ಕಾರಣವಾಗೋ ವಿಚಾರವಿದು. ಇಷ್ಟ ದಿನ ಕಾಂಗ್ರೆಸ್ನ ಬೇರೆ ಬೇರೆ ನಾಯಕರು ಈ ವಿಚಾರವನ್ನ ಮುನ್ನೆಲ್ಲೆಗೆ ತಂದು ಬಿಡ್ತಿದ್ರು. ಆದ್ರೇ ಇತ್ತೀಚಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಈ ಕೆಲಸ ಮಾಡ್ತಾ ಇರೋ ಹಾಗಿದೆ. ಯಾಕೆಂದ್ರೆ ಡೈರೆಕ್ಟ್ ಆಗಿ ಅಲ್ಲದೇ ಇದ್ರೂ ಇಂಡೈರೆಕ್ಟ್ ಆಗಿ ಸಿಎಂ ಚೇರ್ನ ಸುತ್ತಾ ಗಿರಕಿ ಹೊಡೆಯುತ್ತಿವೆ ಡಿ.ಕೆ.ಶಿವಕುಮಾರ್ ಕೊಡ್ತಿರೋ ಹೇಳಿಕೆಗಳು. ಅಂದು ತಮಗೆ ಬೇಕಾಗಿದ್ದನ್ನ ಬಾಗಿಲು ಒದ್ದು ಕಿತ್ತುಕೊಂಡಿದ್ದರು.

ಇದನ್ನೂ ಓದಿ: ಅಪ್ಪು ಬಗ್ಗೆ ಅಂದು ರಮ್ಯಾ ಆಡಿದ್ದ ಮಾತು ಇಂದು ವೈರಲ್ ಆಗ್ತಿದೆ, ನೆಟ್ಟಿಗರ ಮಾಯೆ!

ಅಂದು ಮಂತ್ರಿಗಿರಿಯನ್ನ ಬಾಗಿಲು ಒದ್ದು ಇಸ್ಕೊಂಡಿದ್ರಂತೆ ಡಿ.ಕೆ.ಶಿವಕುಮಾರ್. ಆದ್ರೀಗ ಅವರಿಗೆ ಮುಖ್ಯಮಂತ್ರಿ ಆಗೊ ಆಸೆಯಿದೆ. ಆದ್ರೆ, ಅದನ್ನ ಹಾಗೆ ಕಿತ್ತುಕೊಳ್ಳೋಕೆ ಸಾಧ್ಯಾನಾ..? ಒಂದು ವೇಳೆ ಡಿಕೆಶಿ ಅಂತಹ ಕೆಲಸಕ್ಕೆ ಕೈ ಹಾಕಿದ್ದರು, ಅದ್ದರಿಂದ ಅವರಿಗೇನೆ ಪೆಟ್ಟು. ಅದು ಕನಕಪುರ ಬಂಡೆಗೆ ಸ್ಪಷ್ಟವಾಗಿ ಗೊತ್ತಿದೆ.

Related Video