ಪೌರತ್ವ ಕಾಯ್ದೆ ಬೆಂಬಲಿಸಿ ಅಂಗಡಿ ಬಂದ್ ಮಾಡಲಿರುವ ಪರಮೇಶ್!

ನಾಳೆ ಹುಬ್ಬಳ್ಳಿಯಲ್ಲಿ ಪೌರತ್ವ ಕಾಯ್ದೆ ಬಗ್ಗೆ ಸಮಾವೇಶ| ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ| ಪೌರತ್ವ ಕಾಯ್ದೆ ಬೆಂಬಲಿಸಿ ಅಂಗಡಿ ಬಂದ್ ಮಾಡಲಿರುವ ಪರಮೇಶ್| ಕುರುಬರಹಳ್ಳಿ ದಿನಸಿ ಅಂಗಡಿ ವ್ಯಾಪಾರಿ ಪರಮೇಶ್ ಅವರಿಂದ ವಿನೂತನ ಬೆಂಬಲ|

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಜ.16): ನಾಳೆ(ಜ.17) ಹುಬ್ಬಳ್ಳಿಯಲ್ಲಿ ಪೌರತ್ವ ಕಾಯ್ದೆ ಬಗ್ಗೆ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕುರುಬರಹಳ್ಳಿ ದಿನಸಿ ಅಂಗಡಿ ವ್ಯಾಪಾರಿ ಪರಮೇಶ್ ವಿನೂತನವಾಗಿ ಕಾಯ್ದೆಗೆ ಬೆಂಬಲ ಸೂಚಿಸಿದ್ದು, ಪೌರತ್ವ ಕಾಯ್ದೆ ಬೆಂಬಲಿಸಿ ನಾಳೆ ತಮ್ಮ ಅಂಗಡಿಯನ್ನು ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಎಲ್ಲಾ ವ್ಯಾಪಾರಿಗಳು ಇದೇ ರೀತಿ ಮಾಡಿ ಪೌರತ್ವ ಕಾಯ್ದೆ ಬೆಂಬಲಿಸುವಂತೆ ಪರಮೇಶ್ ಮನವಿ ಮಾಡಿದ್ದಾರೆ. ನಾಳೆ ಮದ್ಯಾಹ್ನ ಅಂಗಡಿ ಬಂದ್ ಇರುತ್ತದೆ ಎಂದು ಪರಮೇಶ್ ಭಿತ್ತಿಪತ್ರ ಅಂಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video