Asianet Suvarna News Asianet Suvarna News

ಸಿದ್ದು ವಿರುದ್ಧ ಮುಗಿಬಿದ್ದ ಬಿಜೆಪಿ ಲೀಡರ್ಸ್, ಜೆಡಿಎಸ್ ಗೇಮ್ ಪ್ಲಾನ್!

* ನಮ್ಮ ಶಕ್ತಿ ತೋರಿಸುತ್ತೇವೆ' ಸಿದ್ದರಾಮಯ್ಯಗೆ  ಎಚ್‌ಡಿಕೆ ಚಾಲೆಂಜ್
* ಕಾಂಗ್ರೆಸ್ ಗುಲಾಮಮಿರಿ ಪಾರ್ಟಿ..ನಮ್ಮದು ದೇಶಭಕ್ತಿ ಪಾರ್ಟಿ'
* ಆರ್‌ಎಸ್‌ಎಸ್ ಮತ್ತು ತಾಲೀಬಾನ್ ಒಂದೇ.. ಸಿದ್ದು ಹೇಳಿಕೆಗೆ ಬಿಜೆಪಿ ಠಕ್ಕರ್
* ಬೆಂಗಳೂರಿನಲ್ಲಿ ಧರೆಗುರುಳಿದ ಕಟ್ಟಡ

ಬೆಂಗಳೂರು(ಸೆ. 27)  ರಾಮನಗರದ ಕೇತಗಾನಹಳ್ಳಿಯಲ್ಲಿ 4 ದಿನಗಳ ಜೆಡಿಎಸ್ ಕಾರ್ಯಾಗಾರ ಹಮ್ಮಿಕೊಂಡಿದ್ದು ಎಚ್‌ಡಿ ಕುಮಾರಸ್ವಾಮಿ (HD Kumaraswamy) ಮೊದಲ ದಿನದ ಕಾರ್ಯಗಾರವನ್ನು ಉದ್ಘಾಟಿಸಿದರು. ಈ ವೇಳೆ ಸಿದ್ದರಾಮಯ್ಯ(Siddaramaiah ) ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ಭಾರತ್ ಬಂದ್ ಗೆ ಸಿಟಿ ರವಿ ಕೊಟ್ಟ ಪ್ರತಿಕ್ರಿಯೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮತ್ತು ತಾಲೀಬಾನಿಗಳು ಒಂದೇ.. ಬಿಜೆಪಿ ಮತ್ತು ಆರ್ ಎಸ್‌ ಎಸ್ ಹಿಟ್ಲರ್ ವಂಶದವರು ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಬಿಜೆಪಿ(BJP) ನಾಯಕರು ಠಕ್ಕರ್ ಕೊಟ್ಟಿದ್ದಾರೆ. ಕಾಂಗ್ರೆಸ್ ತಾಲೀಬಾನ್(Taliban) ಪ್ರತಿರೂಪ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.  ಕೊರೋನಾ ಸ್ಥಿತಿ ಕಂಟ್ರೋಲ್ ನಲ್ಲಿ ಇದೆ. ರಾಜ್ಯದಲ್ಲಿ ಇಳಿಮುಖವಾಗಿದೆ. ಬೆಂಗಳೂರಿನಲ್ಲಿ ಶಿಥಿಲ ಕಟ್ಟಡವೊಂದು ಧರೆಗೆ ಉರುಳಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ.