ಇಂದು Vaikunta Ekadashi: ಸ್ವರ್ಗದ ಬಾಗಿಲು ತೆರೆಯುವ ದಿನ

ವೈಕುಂಠ ಏಕಾದಶಿ ಪ್ರಯುಕ್ತ ಇಂದು ನಗರದ ಎಲ್ಲ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಯು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆಯಿತು. 

Share this Video
  • FB
  • Linkdin
  • Whatsapp

ಚಾಂದ್ರಮಾನ, ಪುಶ್ಯ ಮಾಸ, ಶುಕ್ಲಪಕ್ಷವಾದ ಇಂದು ವೈಕುಂಠ ಏಕಾದಶಿ(Vaikunta Ekadashi). ಸ್ವರ್ಗದ ಬಾಗಿಲು ತೆರೆಯುವ ದಿನ. ವಿಷ್ಣು ದೇವಾಲಯಗಳಲ್ಲಿ ಭಕ್ತರು ಮುಂಜಾನೆಯಿಂದಲೇ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಇಂದು ವಿಷ್ಣುವಿನ ಸ್ಮರಣೆಯಿಂದ ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆ ಇರುವ ಹಿನ್ನೆಲೆಯಲ್ಲಿ ಭಕ್ತರು ಮನೆಯಲ್ಲಿಯೇ ಬೆಳಗ್ಗೆಯಿಂದ ವಿಷ್ಣು ಸಹಸ್ರನಾಮ ಪಠಣ ಹಾಗೂ ಶ್ರವಣ, ಪಾರಾಯಣ ಕಾರ್ಯಗಳಲ್ಲಿ ತೊಡಗಿದ್ದಾರೆ. ಕೋವಿಡ್(covid) ಹಿನ್ನೆಲೆಯಲ್ಲಿ ದೇವಸ್ಥಾನ ಭೇಟಿಗೆ ಸಂಖ್ಯಾ ಮಿತಿ ಸೇರಿದಂತೆ ಹಲವು ನಿಯಮಗಳಿದ್ದರೂ ಭಕ್ತರ ಸಂಭ್ರಮ, ಭಕ್ತಿ ಮಾತ್ರ ಇದರಿಂದ ಕಡಿಮೆಯಾಗಿಲ್ಲ. ಹೀಗಾಗಿ, ಸುವರ್ಣ ನ್ಯೂಸ್ ವತಿಯಿಂದ ಭಕ್ತರಿಗೆ ಪ್ರಮುಖ ವಿಷ್ಣು ದೇವಾಲಯಗಳ ದೇವರ ಮೂರ್ತಿಗಳ ದರ್ಶನ ಮಾಡಿಸಲಾಗುತ್ತಿದೆ. 

Related Video