ಗಂಡ ಕೆಲಸಕ್ಕೆ ಹೋದಾಗ ಪ್ರಿಯಕರ ಎಂಟ್ರಿ ಕೊಟ್ಟ! ಯಾರೂ ಬೇಡ ಅಂತ ಓಡಿ ಹೋದವಳು ವಾಪಸ್​​ ಬಂದಿದ್ದೇಗೆ?

ವರ್ಷಗಳ ಕಾಲ ಕದ್ದುಮುಚ್ಚಿ ಸೇರುತ್ತಿದ್ದ ಚಿರಂಜೀವಿ ಮತ್ತು ತೃಪ್ತಿ ಮನೆ ಬಿಟ್ಟು ಓಡಿಹೋಗುವ ಪ್ಲಾನ್​ ಮಾಡಿದ್ರು. ಅಂದುಕೋಂಡಂತೆ ಆವತ್ತೊಂದು ದಿನ ಇಬ್ಬರೂ ಹೇಳದೇ ಕೇಳದೇ ಎಸ್ಕೇಪ್​ ಆಗಿದ್ರು. ಆದ್ರೆ ಇವತ್ತು ಅದೇ ಚಿರಂಜೀವಿ ತೃಪ್ತಿಯನ್ನ ಕೊಂದು ಮುಗಿಸಿದ್ದಾನೆ.. ಗಂಡ ಮಕ್ಕಳು ಬೇಡ ಅಂತ ಓಡಿ ಹೋದವಳು ವಾಪಸ್​​ ತನ್ನೂರಿಗೆ ಬಂದಿದ್ದೇಗೆ? ಚಿರಂಜೀವಿ ಅವಳನ್ನ ಕೊಂದಿದ್ದೇಕೆ? ಆವತ್ತು ಆ ಮನೆಯಲ್ಲಿ ನಡೆದಿದ್ದೇನು?  ಇಲ್ಲಿದೆ ಡೀಟೈಲ್ಸ್

First Published Dec 10, 2024, 2:57 PM IST | Last Updated Dec 10, 2024, 2:57 PM IST

ಬೆಂಗಳೂರು: ಅವಳು ಎರಡು ಮಕ್ಕಳ ತಾಯಿ. ಗಂಡ ಕಷ್ಟ ಪಟ್ಟು ದುಡಿಯುತ್ತಿದ್ರೆ ಈಕೆ ಮಾತ್ರ ಮನೆಯಲ್ಲೇ ಇದ್ದು ಮಕ್ಕಳನ್ನ ನೋಡಿಕೊಳ್ತಿದ್ದು. ಆದ್ರೆ ಆವತ್ತು ಮಟ ಮಟ ಮಧ್ಯಾಹ್ನ ಮನೆಯ ಪಕ್ಕದಲ್ಲೇ ಇದ್ದ ಕೃಷಿ ಹೊಂಡದಲ್ಲಿ ಅವಳ ಡೆಡ್​ ಬಾಡಿ ಸಿಕ್ಕಿತ್ತು.

ಇನ್ನು ತನಿಖೆ ನಡೆಸಿದ ಪೊಲೀಸರಿಗೆ ಇದೊಂದು ಮರ್ಡರ್​ ಅನ್ನೋದು ಗೊತ್ತಾಗಿತ್ತು. ಹಾಗಾದ್ರೆ ಆ ಗೃಹಿಣಿಯನ್ನ ಕೊಂದಿದ್ಯಾರು? ಯಾಕಾಗಿ ಕೊಂದ್ರು. ಇಡೀ ಮಲೆನಾಡನ್ನೇ ಬೆಚ್ಚಿ ಬೀಳಿಸಿದ್ದ ಮಹಿಳೆಯ ಡೆಡ್ಲಿ ಮರ್ಡರ್​​ ಕಥೆಯೇ ಇವತ್ತಿನ ಎಫ್​.ಐ.ಆರ್