09:49 PM (IST) Dec 15

Karnataka News Live15 December 2025 ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!

ಬೆಂಗಳೂರಿನ ಹೋಟೆಲ್‌ನ ಬಾಲ್ಕನಿಯಿಂದ ಬಿದ್ದು 21 ವರ್ಷದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅತಿಯಾದ ಗಲಾಟೆಯ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಳ್ಳುವ ವೇಳೆ ಈ ಘಟನೆ ನಡೆದಿದೆ.

Read Full Story
08:49 PM (IST) Dec 15

Karnataka News Live15 December 2025 ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಆಗಮಿಸಿ, ಸುತ್ತೂರಿನ ಶಿವರಾತ್ರಿ ಶಿವಯೋಗಿಶ್ವರರ 1066ನೇ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಬಿಗಿ ಬಂದೋಬಸ್ತ್‌ಗೆ ಸೂಚನೆ ನೀಡಿದೆ.

Read Full Story
08:37 PM (IST) Dec 15

Karnataka News Live15 December 2025 ತಂತ್ರಜ್ಞಾನದ ನೆರವಿನಿಂದ ಜೈಲುಗಳಲ್ಲಿ ಸುಧಾರಣೆ ತರಲು ಅಲೋಕ್ ಕುಮಾರ್ ನೇತೃತ್ವ

ಕರ್ನಾಟಕದ ಜೈಲುಗಳು ಅತಿಯಾದ ಜನಸಂದಣಿ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿವೆ. ಹೊಸ ಡಿಜಿಪಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ, ತಂತ್ರಜ್ಞಾನದ ಬಳಕೆ ಮತ್ತು ಸಮಗ್ರ ಸುಧಾರಣೆಗಳ ಮೂಲಕ ಈ ವ್ಯವಸ್ಥೆಯನ್ನು ಬದಲಾಯಿಸುವ ಸಾಧ್ಯತೆಗಳನ್ನು ಈ ಲೇಖನ ಪರಿಶೀಲಿಸುತ್ತದೆ.
Read Full Story
07:29 PM (IST) Dec 15

Karnataka News Live15 December 2025 ಅನುದಾನಿತ ಶಾಲೆಯಲ್ಲಿ 9ನೇ ಕ್ಲಾಸ್ ಹುಡ್ಗೀರ ಎಣ್ಣೆ ಪಾರ್ಟಿ; ವೈರಲ್ ವಿಡಿಯೋ ಆಧರಿಸಿ 6 ವಿದ್ಯಾರ್ಥಿನಿಯರು ಅಮಾನತು!

ಅನುದಾನಿತ ಶಾಲೆಯೊಂದರಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯರು ತರಗತಿಯಲ್ಲೇ ಮದ್ಯಪಾನ ಮಾಡಿದ್ದಾರೆ. ಈ ದೃಶ್ಯದ ವಿಡಿಯೋ ವೈರಲ್ ಆದ ನಂತರ, ಶಾಲಾ ಆಡಳಿತ ಮಂಡಳಿ ಆರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿ ತನಿಖೆ ಆರಂಭಿಸಿದೆ.

Read Full Story
07:29 PM (IST) Dec 15

Karnataka News Live15 December 2025 ವಿಂಡ್ ಫ್ಯಾನ್‌ಗಳಿಂದ ಪಕ್ಷಿಗಳ ವಾಸಸ್ಥಾನಕ್ಕೆ ಕುತ್ತು, ಮರೆಯಾದ ಹಕ್ಕಿಗಳ ಕಲರವ!

ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚುತ್ತಿರುವ ವಿಂಡ್ ಫ್ಯಾನ್‌ಗಳ ಶಬ್ದದಿಂದಾಗಿ ಅಂಕಸಮುದ್ರದಂತಹ ಪಕ್ಷಿಧಾಮಗಳಿಗೆ ಬರುವ ವಲಸೆ ಪಕ್ಷಿಗಳು ದೂರ ಸರಿಯುತ್ತಿವೆ. ರೈತರು ಹಣದಾಸೆಗೆ ಜಮೀನು ಲೀಸ್ ನೀಡುತ್ತಿದ್ದು, ಇದರಿಂದ ಪಕ್ಷಿಗಳ ವಾಸಸ್ಥಾನಕ್ಕೆ ಕುತ್ತು ಬಂದಿದೆ.

Read Full Story
07:18 PM (IST) Dec 15

Karnataka News Live15 December 2025 ಪ್ರಧಾನಿಗೆ ಜೋರ್ಡಾನ್‌ನಲ್ಲಿ ಭವ್ಯ ಸ್ವಾಗತ - ಐಎಂಇಸಿ ಕಾರಿಡಾರ್ ಕುರಿತು ಚರ್ಚೆ ನಿರೀಕ್ಷೆ

7 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರು ಜೋರ್ಡಾನ್‌ಗೆ ಭೇಟಿ ನೀಡಿದ್ದು,ಈ ಭೇಟಿಯು ಭಾರತ-ಜೋರ್ಡಾನ್ ಸಂಬಂಧವನ್ನು ಬಲಪಡಿಸುವುದಲ್ಲದೆ, ಸ್ಥಗಿತಗೊಂಡಿದ್ದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಯೋಜನೆಗೆ ಮರುಚಾಲನೆ ಸಿಗುವ ನಿರೀಕ್ಷೆಯಿದೆ.

Read Full Story
06:57 PM (IST) Dec 15

Karnataka News Live15 December 2025 ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ - ಮಹಿಳೆಯರಿಗೆ ಪದವಿ ಆಮಿಷ; ಸರ್ಕಾರದ ₹40 ಲಕ್ಷ ದುರ್ಬಳಕೆ!

'ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಸಿಂಗಾಪುರ, ದುಬೈ ಇವೆಂಟ್‌ಗಳಿಗಾಗಿ ಕನ್ನಡ ಅಭಿಮಾನಿ ಮಹಿಳೆಯರಿಂದ ಲಕ್ಷಾಂತರ ಹಣ ವಸೂಲಿ ಮಾಡಿ ವಂಚನೆ ಮಾಡಲಾಗಿದೆ. ಆರೋಪಿ ಶಿವಕುಮಾರ್ ನಗರ ನವಿಲೆ ವಿರುದ್ಧ ದೂರು ನೀಡಿರುವ ಮೀನಾಕ್ಷಿ ಮತ್ತು ರಂಜಿತಾ, ಸಿಎಂ ಫಂಡ್‌ನ 15 ಲಕ್ಷ ರೂ. ದುರುಪಯೋಗದ ಆರೋಪ ಮಾಡಿದ್ದಾರೆ.

Read Full Story
06:44 PM (IST) Dec 15

Karnataka News Live15 December 2025 ವಿಭೂತಿಗಳಲ್ಲೇ ಐಕ್ಯರಾದ ಭಾರತದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ! ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯು ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಶಿಷ್ಟವಾಗಿ ನೆರವೇರಿತು. ದಾವಣಗೆರೆಯನ್ನು ವಾಣಿಜ್ಯ ಹಾಗೂ ಶೈಕ್ಷಣಿಕ ನಗರಿಯಾಗಿದೆ.

Read Full Story
06:26 PM (IST) Dec 15

Karnataka News Live15 December 2025 ಬಿಲ್ ಪಾವತಿಸದ ಸರ್ಕಾರ; ತಾಲೂಕು ಆಫೀಸಿನ ಟೇಬಲ್, ಕುರ್ಚಿ, ಕಂಪ್ಯೂಟರ್ ಜಪ್ತಿ ಮಾಡಿದ ಕೋರ್ಟ್!

ಸರ್ಕಾರದಿಂದ ಹಾರ್ಡ್‌ವೇರ್ ವ್ಯಾಪಾರಿಗೆ ಪಾವತಿಸಬೇಕಿದ್ದ ₹6 ಲಕ್ಷ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ನ್ಯಾಯಾಲಯವು ತಾಲ್ಲೂಕು ಪಂಚಾಯತಿ ಕಚೇರಿಯ ಪೀಠೋಪಕರಣ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಲು ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ, ಅಧಿಕಾರಿಗಳು ಕುರ್ಚಿ, ಕಂಪ್ಯೂಟರ್‌ ವಶಕ್ಕೆ ಪಡೆದಿದ್ದಾರೆ.

Read Full Story
06:18 PM (IST) Dec 15

Karnataka News Live15 December 2025 Amruthadhaare - ಜೊತೆಯಲ್ಲಿ ಗೌತಮ್​-ಭೂಮಿ! ಮಕ್ಕಳು ಶಾಕ್​ - ಅಪ್ಪ-ಅಮ್ಮನ್ನೇ ಹೇಗೆ ಆಡಿಸ್ತಿದ್ದಾರೆ ನೋಡಿ!

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಅಜ್ಜಿ ಸಾಯುವ ನಾಟಕವಾಡಿದ್ದಾರೆ. ಅಜ್ಜಿಯ ಕೊನೆಯಾಸೆ ಈಡೇರಿಸಲು ಹೊರಟ ಈ ಜೋಡಿಗೆ, ಅವರ ಮಕ್ಕಳಾದ ಆಕಾಶ್ ಮತ್ತು ಮಿಂಚು ಕೂಡ ಆಟವಾಡಿಸಲು ಸಜ್ಜಾಗಿದ್ದಾರೆ.

Read Full Story
06:01 PM (IST) Dec 15

Karnataka News Live15 December 2025 ಜರ್ಮನಿಗೆ ತೆರಳಿದ ರಾಹುಲ್ ಗಾಂಧಿ - 6 ತಿಂಗಳಲ್ಲಿ ವಿರೋಧ ಪಕ್ಷದ ನಾಯಕನ 5ನೇ ವಿದೇಶಿ ಪ್ರವಾಸ

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ 5 ದಿನಗಳ ಜರ್ಮನಿ ಪ್ರವಾಸದಲ್ಲಿದ್ದಾರೆ. ಕಳೆದ ಆರು ತಿಂಗಳಲ್ಲಿ ಇದು ಅವರ ಐದನೇ ವಿದೇಶಿ ಪ್ರವಾಸವಾಗಿದ್ದು, ಸಂಸತ್ ಅಧಿವೇಶನದ ನಡುವೆ ಈ ಪ್ರವಾಸ ಕೈಗೊಂಡಿರುವುದು ಟೀಕೆಗೆ ಕಾರಣವಾಗಿದೆ. 

Read Full Story
05:45 PM (IST) Dec 15

Karnataka News Live15 December 2025 ಎದುರುಮನೆ ಹುಡುಗಿಯೊಂದಿಗೆ ಓಡಿಹೋದ ಮಗ; ತಾಯಿಗೆ ಮನಬಂದಂತೆ ಥಳಿಸಿದ ಲೋಕಲ್ ಪೊಲೀಸ್!

ಅಂತರ್ಜಾತಿ ವಿವಾಹವಾದ ಮಗನ ಸುಳಿವು ಕೇಳುವ ನೆಪದಲ್ಲಿ, ಧಾರವಾಡದ ಕುಂದಗೋಳ ಪೊಲೀಸರು ಆತನ ತಾಯಿ ಲಕ್ಷ್ಮವ್ವ ಮೇಲೆ ಠಾಣೆಯಲ್ಲಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಜೊತೆಗೆ ಹಣ, ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿಸಲಾಗಿದ್ದು, ಸಂತ್ರಸ್ತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read Full Story
05:35 PM (IST) Dec 15

Karnataka News Live15 December 2025 Brahmagantu - ಚಾಲೆಂಜ್​ ಸೋತು ಮನೆಬಿಟ್ಟ ದೀಪಾ- ಖುಷಿ ಬದ್ಲು ಅಡಕತ್ತರಿಯಲ್ಲಿ ಒದ್ದಾಡಿದ ಸೌಂದರ್ಯ! ಏನಾಯ್ತು?

ಬೆಸ್ಟ್ ಸೊಸೆ ಚಾಲೆಂಜ್‌ನಲ್ಲಿ ಸೋತ ದೀಪಾ, ಕೊಟ್ಟ ಮಾತಿನಂತೆ ಮನೆಯಿಂದ ಹೊರನಡೆಯಲು ಸಿದ್ಧಳಾಗುತ್ತಾಳೆ. ಆದರೆ, ಕೊನೆಯ ಕ್ಷಣದಲ್ಲಿ ಗೌರಿ ಅಜ್ಜಿ ಅವಳನ್ನು ತಡೆದು, ದೀಪಾ ಮನೆಯಲ್ಲೇ ಉಳಿಯುವಂತೆ ಮಾಡುತ್ತಾರೆ. ಈ ಅನಿರೀಕ್ಷಿತ ತಿರುವು ಸೌಂದರ್ಯಳ ಕನಸನ್ನು ಭಗ್ನಗೊಳಿಸುತ್ತದೆ.
Read Full Story
05:09 PM (IST) Dec 15

Karnataka News Live15 December 2025 ಕುಟುಂಬವೇ ಹೆಮ್ಮೆಪಡುವಂತೆ ಮಾಡಿದ Kiccha Sudeep ಮಗಳು ಸಾನ್ವಿ! ಇದಪ್ಪಾ..ಸಾಧನೆ ಅಂದ್ರೆ..!

Kiccha Sudeep Daughter Sanvi Song: ಇದೇ ತಿಂಗಳ‌ 25ರಂದು ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಮಾರ್ಕ್ ಸಿನಿಮಾ ತೆರೆಗೆ ಬರ್ತಿದೆ. ಪ್ರಚಾರ ಕಾರ್ಯ ಕೂಡ ಭರದಿಂದ ಸಾಗಿದೆ. ಇದರ ಭಾಗವಾಗಿ ಮಾರ್ಕ್ ಸಿನಿಮಾದ ಸ್ಪೆಷಲ್ ಹಾಡು ಬಿಡುಗಡೆ ಮಾಡಲಾಗಿದೆ.

Read Full Story
04:49 PM (IST) Dec 15

Karnataka News Live15 December 2025 Karna - ಹಿಂದೆ ಯಮರಾಯ ನಿಂತಿರೋದು ಗೊತ್ತಿಲ್ದೇ ಹಾಯಾಗಿದ್ದಾನೆ ಪಾಪಿ ಸಂಜಯ್​! ಮುಂದಿದೆ ಮಾರಿಹಬ್ಬ

ಸಂಜಯ್‌ನ ಮೋಸದಿಂದ ಜೈಲು ಸೇರಿದ್ದ ನಿಧಿಯನ್ನು ಕರ್ಣ ರಕ್ಷಿಸಿದ್ದಾನೆ. ಆಘಾತದಲ್ಲಿರುವ ನಿಧಿಗೆ ಸಮಾಧಾನ ಹೇಳಿ, ಇದಕ್ಕೆ ಕಾರಣನಾದ ಸಂಜಯ್‌ಗೆ ತಕ್ಕ ಪಾಠ ಕಲಿಸಲು ಕರ್ಣ ಜಿಮ್‌ಗೆ ತೆರಳಿದ್ದಾನೆ, ಅಲ್ಲಿ ಅವನಿಗೆ ಯಮರೂಪಿಯಾಗಿ ದರ್ಶನ ನೀಡಿದ್ದಾನೆ.
Read Full Story
04:10 PM (IST) Dec 15

Karnataka News Live15 December 2025 BBK 12 - ಧ್ರುವಂತ್‌ ಹೆದರಬೇಕು- ಸೀಕ್ರೆಟ್‌ ರೂಮಲ್ಲಿ ಸಣ್ಣ ಪ್ರಶ್ನೆಗೆ ರಣಚಂಡಿಯಾದ ರಕ್ಷಿತಾ ಶೆಟ್ಟಿ

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಧ್ರುವಂತ್‌, ರಕ್ಷಿತಾ ಶೆಟ್ಟಿ ಅವರು ದೊಡ್ಮನೆಯಲ್ಲಿಲ್ಲ, ಬದಲಾಗಿ ಸೀಕ್ರೇಟ್‌ ರೂಮ್‌ ಪ್ರವೇಶ ಮಾಡಿದ್ದಾರೆ. ಮನೆಯೊಳಗಡೆ ಏನು ನಡೆಯುತ್ತಿದೆ ಎಂದು ಅವರು ರೂಮ್‌ನಲ್ಲಿ ನೋಡುತ್ತಿದ್ದಾರೆ.

Read Full Story
04:06 PM (IST) Dec 15

Karnataka News Live15 December 2025 ದಿಢೀರ್​ ಲೈವ್​ಗೆ ಬಂದ ಉಪೇಂದ್ರ, ಫ್ಯಾನ್ಸ್​ಗೆ ಕೊಟ್ಟರೊಂದು ಗುಡ್​​ನ್ಯೂಸ್​ - ಇಂಥ ಛಾನ್ಸ್ ಮತ್ತೆ ಸಿಗಲ್ಲ ನೋಡಿ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ '45' ಚಿತ್ರದ ಟ್ರೈಲರ್ ಬಿಡುಗಡೆಗೆ ಸಜ್ಜಾಗಿದೆ. ನಟ ಉಪೇಂದ್ರ ಅವರು ಶಿವರಾಜ್​ಕುಮಾರ್ ಮತ್ತು ರಾಜ್ ಬಿ. ಶೆಟ್ಟಿ ಅವರೊಡನೆ ತಾವೂ ಭಾಗವಹಿಸುವ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.

Read Full Story
04:05 PM (IST) Dec 15

Karnataka News Live15 December 2025 ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?

ಸಚ್ಖಂಡ್ ಎಕ್ಸ್‌ಪ್ರೆಸ್, ನಾಂದೇಡ್ ಮತ್ತು ಅಮೃತಸರ ನಡುವೆ ಸಂಚರಿಸುವ ಒಂದು ವಿಶಿಷ್ಟ ರೈಲು. ಇದರಲ್ಲಿ ಸಿಖ್ ಧರ್ಮದ ಲಂಗರ್ ಸಂಪ್ರದಾಯದಂತೆ, ಗುರುದ್ವಾರಗಳ ಸ್ವಯಂಸೇವಕರು ಎಲ್ಲ ಪ್ರಯಾಣಿಕರಿಗೂ ಉಚಿತವಾಗಿ ಬಿಸಿ ಊಟವನ್ನು ವಿತರಿಸುತ್ತಾರೆ. ಈ ಸೇವೆ ಸುಮಾರು ಮೂರು ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ.
Read Full Story
03:43 PM (IST) Dec 15

Karnataka News Live15 December 2025 ಬೆಂಗಳೂರು ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ಅಗ್ನಿ ಅವಘಡ - ನಡುರಸ್ತೆಯಲ್ಲೇ ಭಸ್ಮವಾದ ಕಾರು

ಬೆಂಗಳೂರಿನ ವಿಜಯನಗರ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಗೆ ತಾಂತ್ರಿಕ ದೋಷ ಕಾರಣವಿರಬಹುದೆಂದು ಶಂಕಿಸಲಾಗಿದೆ.
Read Full Story
03:32 PM (IST) Dec 15

Karnataka News Live15 December 2025 BBK 12 - ಕರ್ಮ ರಿಟರ್ನ್ಸ್..‌ ಬಂದು ಹೊಡೆಯತ್ತೆ - ದೊಡ್ಮನೆಯಲ್ಲಿ ಶಾಪ ಹಾಕಿದ ಚೈತ್ರಾ ಕುಂದಾಪುರ

Bigg Boss Kannada Season 12 Episode Update: ಬಿಗ್‌ ಬಾಸ್‌ ಮನೆಯಲ್ಲಿ ಹೊಸ ಟಾಸ್ಕ್‌ ನೀಡಲಾಗಿದೆ. ಈ ಟಾಸ್ಕ್‌ ಸೋತವರು ಮನೆಯಿಂದ ಹೊರಗಡೆ ಹೋಗಲು ನಾಮಿನೇಟ್‌ ಆಗುತ್ತಾರೆ. ಈಗ ಈ ಟಾಸ್ಕ್‌ ವಿಚಾರವಾಗಿ ದೊಡ್ಡ ಜಗಳವೇ ಆಗಿದೆ. ಸದ್ಯ ಪ್ರೋಮೋ ರಿಲೀಸ್‌ ಆಗಿದೆ. 

Read Full Story