- Home
- Entertainment
- TV Talk
- BBK 12: ಧ್ರುವಂತ್ ಹೆದರಬೇಕು- ಸೀಕ್ರೆಟ್ ರೂಮಲ್ಲಿ ಸಣ್ಣ ಪ್ರಶ್ನೆಗೆ ರಣಚಂಡಿಯಾದ ರಕ್ಷಿತಾ ಶೆಟ್ಟಿ
BBK 12: ಧ್ರುವಂತ್ ಹೆದರಬೇಕು- ಸೀಕ್ರೆಟ್ ರೂಮಲ್ಲಿ ಸಣ್ಣ ಪ್ರಶ್ನೆಗೆ ರಣಚಂಡಿಯಾದ ರಕ್ಷಿತಾ ಶೆಟ್ಟಿ
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಧ್ರುವಂತ್, ರಕ್ಷಿತಾ ಶೆಟ್ಟಿ ಅವರು ದೊಡ್ಮನೆಯಲ್ಲಿಲ್ಲ, ಬದಲಾಗಿ ಸೀಕ್ರೇಟ್ ರೂಮ್ ಪ್ರವೇಶ ಮಾಡಿದ್ದಾರೆ. ಮನೆಯೊಳಗಡೆ ಏನು ನಡೆಯುತ್ತಿದೆ ಎಂದು ಅವರು ರೂಮ್‌ನಲ್ಲಿ ನೋಡುತ್ತಿದ್ದಾರೆ.

ಧ್ರುವಂತ್, ರಕ್ಷಿತಾ ಫೈಟ್
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ, ಧ್ರುವಂತ್ ಜಗಳ ಆಡಿಕೊಂಡಿದ್ದರು. ರಕ್ಷಿತಾ ಫೇಕ್, ಅವಳಿಗೆ ಕನ್ನಡ ಬರುತ್ತದೆ, ನಮ್ಮ ಕಡೆ ಯಾರೂ ಈ ರೀತಿ ಮಾತಾಡೋದಿಲ್ಲ ಎಂದು ಧ್ರುವಂತ್ ಹೇಳಿದ್ದರು.
ಈಗ ಸೀಕ್ರೇಟ್ ರೂಮ್‌ನಲ್ಲಿ ಕೂಡ ಇವರು ಜಗಳ ಆಡಲುನ ಆರಂಭಿಸಿದ್ದಾರೆ. ಸದ್ಯ ವಾಹಿನಿಯು ಪ್ರೋಮೋ ರಿಲೀಸ್ ಮಾಡಿದೆ.
ನಾನೇ ಬೆಸ್ಟ್ ಅನಿಸುತ್ತದೆ
ಧ್ರುವಂತ್ ಅವರು, “ನೀವೊಬ್ಬರೇ ಸೀಕ್ರೇಟ್ ರೂಮ್‌ನಲ್ಲಿ ಇದ್ದು, ನಾನು ಅಲ್ಲಿ ಇದ್ದಿದ್ದರೆ ನಿಮಗೆ ಯಾರು ಬೆಸ್ಟ್ ಅನಿಸುತ್ತಿತ್ತು?” ಎಂದು ಹೇಳಿದ್ದಾರೆ.
ಆಗ ರಕ್ಷಿತಾ ಶೆಟ್ಟಿ ಅವರು, “ನಾನೇ ಬೆಸ್ಟ್ ಅನಿಸುತ್ತದೆ” ಎಂದಿದ್ದಾರೆ.
ಧ್ರುವಂತ್ ಅವರು, “ನಾನು ಅಲ್ಲಿರೋದು ಕೇಳುತ್ತಿದ್ದೇನೆ, ಇಲ್ಲಿರೋದಲ್ಲ, ಎಲ್ಲದಕ್ಕೂ ನೀನು” ಎಂದಿದ್ದಾರೆ.
ಯಾಕೆ ಕನ್ಸಿಡರ್ ಮಾಡೋದಿಲ್ಲ?
ರಕ್ಷಿತಾ ಶೆಟ್ಟಿ ಅವರು, “ನಾನು ಅಲ್ಲಿ ಇಲ್ಲ ಅಂತ ಯಾಕೆ ಕನ್ಸಿಡರ್ ಮಾಡೋದಿಲ್ಲ?” ಎಂದು ಹೇಳಿದ್ದಾರೆ.
ಧ್ರುವಂತ್ ಅವರು “ಈಗ ಎಲ್ಲಿದ್ದೀಯಾ? ನಮ್ಮನ್ನು ಬಿಟ್ಟು ಪ್ರೊಸೆಸ್ ನಡೆಯುತ್ತಿದೆ. ತಲೆಯಲ್ಲಿ ಕಾಲೇಜಿನಲ್ಲಿ ಓದಿರೋದು ಯಾವುದು ಇಲ್ಲವಾ?
ಗೇಮ್ ಶುರುವಾಗಿಲ್ಲ
ರಕ್ಷಿತಾ ಅವರು, “ಗೇಮ್ ಶುರುವಾಗಿಲ್ಲ. ಯಾರು ಬೆಸ್ಟ್ ಅಂತ ನನ್ನ ಹತ್ರ ಯಾಕೆ ಕೇಳ್ತೀರಾ?” ಎಂದು ಹೇಳಿದ್ದಾರೆ.
ಧ್ರುವಂತ್ ಅವರು, “ನಿನ್ನ ಹತ್ರ ಜೆನೆರಲ್ ಪ್ರಶ್ನೆ ಕೇಳಿದೆ. ಆಟ ಶುರುವಾಗಿ ಫೈನಲ್ ತೀರ್ಪು ಕೇಳಿದ್ದಿಲ್ಲ” ಎಂದಿದ್ದಾರೆ.
ಒಳ್ಳೇ ತಮಾಷೆ
ಧ್ರುವಂತ್ ಸಹಜವಾಗಿ ಪ್ರಶ್ನೆ ಮಾಡಿದ್ದು, ರಕ್ಷಿತಾ ಅವರು ಉರಿದುರಿದು ಮಾತನಾಡಿದ್ದಾರೆ. ಈ ಬಗ್ಗೆ ವೀಕ್ಷಕರೊಬ್ಬರು, “ಧ್ರುವಂತ್ ಮತ್ತು ರಕ್ಷಿತಾ...! ಅವನು ಮೃದುವಾಗಿ ಒಂದು ಸರಳ ಪ್ರಶ್ನೆ ಕೇಳಿದ್ದು. ಇವಳು ಉಲ್ಟಾ ಏನೇನೋ ಹೇಳ್ತಾ ಇದ್ದಾಳೆ. ಒಳ್ಳೇ ತಮಾಷೆ. ಉಳಿದವರಿಗಿಂತ, ಇವರಿಬ್ಬರ ಮಾತು ಹಾವಭಾವ ಹೆಚ್ಚು ಚೆನ್ನಾಗಿದೆ. ಸೃಜನಶೀಲರ ಕೈಯಲ್ಲಿ ತಾಳ ಮೇಳಗಳ ಸಹಿತ ಬೇರೆ ಬೇರೆ ರೂಪದಲ್ಲಿ ಈ ವೀಡಿಯೊ ವೈರಲ್ ಆಗುವ ಸಾಧ್ಯತೆ ಇದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

