- Home
- Entertainment
- TV Talk
- Bigg Boss Kannada: ಕರ್ಮ ರಿಟರ್ನ್ಸ್.. ಬಂದು ಹೊಡೆಯತ್ತೆ: ದೊಡ್ಮನೆಯಲ್ಲಿ ಶಾಪ ಹಾಕಿದ ಚೈತ್ರಾ ಕುಂದಾಪುರ
Bigg Boss Kannada: ಕರ್ಮ ರಿಟರ್ನ್ಸ್.. ಬಂದು ಹೊಡೆಯತ್ತೆ: ದೊಡ್ಮನೆಯಲ್ಲಿ ಶಾಪ ಹಾಕಿದ ಚೈತ್ರಾ ಕುಂದಾಪುರ
Bigg Boss Kannada Season 12 Episode Update: ಬಿಗ್ ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್ ಸೋತವರು ಮನೆಯಿಂದ ಹೊರಗಡೆ ಹೋಗಲು ನಾಮಿನೇಟ್ ಆಗುತ್ತಾರೆ. ಈಗ ಈ ಟಾಸ್ಕ್ ವಿಚಾರವಾಗಿ ದೊಡ್ಡ ಜಗಳವೇ ಆಗಿದೆ. ಸದ್ಯ ಪ್ರೋಮೋ ರಿಲೀಸ್ ಆಗಿದೆ.

ಸೀಕ್ರೇಟ್ ರೂಮ್‌ನಲ್ಲಿ ಧ್ರುವಂತ್, ರಕ್ಷಿತಾ ಶೆಟ್ಟಿ
ಸೀಕ್ರೇಟ್ ರೂಮ್‌ನಲ್ಲಿ ಧ್ರುವಂತ್, ರಕ್ಷಿತಾ ಶೆಟ್ಟಿ ಇದ್ದಾರೆ. ಅವರು ಅಲ್ಲೇ ಕೂತು ದೊಡ್ಮನೆಯೊಳಗಡೆ ಆಗೋದನ್ನು ನೋಡುತ್ತಿದ್ದಾರೆ. ಈ ವಿಚಾರ ಮನೆಯಲ್ಲಿದ್ದವರಿಗೆ ಗೊತ್ತೇ ಆಗ್ತಿಲ್ಲ. ಧ್ರುವಂತ್, ರಕ್ಷಿತಾ ಅವರು ಮತ್ತೆ ಬಿಗ್ ಬಾಸ್ ಮನೆಗೆ ಬರೋದಿಲ್ಲ ಎಂದು ಅವರು ಅಂದುಕೊಂಡಿದ್ದಾರೆ.
ಚೈತ್ರಾ ಕುಂದಾಪುರ, ಅಶ್ವಿನಿ ಗೌಡ ಜಗಳ
ಆಟದ ವೇಳೆ ಚೈತ್ರಾ ಕುಂದಾಪುರ, ಅಶ್ವಿನಿ ಗೌಡ ಜಗಳ ಆಡಿಕೊಂಡಿದ್ದಾರೆ. ಕ್ಯಾಪ್ಟನ್ ರಾಶಿಕಾ ಶೆಟ್ಟಿ ಅವರು ಚೈತ್ರಾ ವಿರುದ್ಧವಾಗಿ ತೀರ್ಪು ಕೊಟ್ಟರು. ಇದು ಫೈಯರ್ ಬ್ರ್ಯಾಂಡ್‌ಗೆ ಬೇಸರ ತಂದಿದೆ.
ಚೈತ್ರಾ ಕುಂದಾಪುರ ಜಗಳ
ಬೇಕಾದವರನ್ನು ಸೇವ್ ಮಾಡ್ತಾರೆ, ಯಾವ ನೈತಿಕತೆ ಇಟ್ಟುಕೊಂಡು ಉಸ್ತುವಾರಿ ವಹಿಸಿಕೊಳ್ತಾರೆ? ಕರ್ಮ ರಿಟರ್ನ್ಸ್ ಅಂತಿದ್ರೆ ನಿನಗೆ ಉಸ್ತುವಾರಿ ಹೊಡೆಯತ್ತೆ ಎಂದು ಚೈತ್ರಾ ಕುಂದಾಪುರ ಅವರು ರಾಶಿಕಾ ಶೆಟ್ಟಿಗೆ ಹೇಳಿದ್ದಾರೆ.
ಬರೀ ನಾಟಕ ಎಂದ ಧ್ರುವಂತ್
ಈ ಗಲಾಟೆ, ಜಗಳವನ್ನು ಧ್ರುವಂತ್, ರಕ್ಷಿತಾ ಅವರು ಸೀಕ್ರೆಟ್ ರೂಮ್‌ನಿಂದ ನೋಡುತ್ತಿದ್ದರು. ಆಗ ಧ್ರುವಂತ್ ಅವರು “ಬರೀ ನಾಟಕ” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಲ್ಲಿ ನಡೆಯುತ್ತಿರುವ ಜಗಳದ ಮಜಾ ತಗೊಳ್ಳುತ್ತಿದ್ದಾರೆ ಎನ್ನಬಹುದು.
ಯಾರು ನಾಮಿನೇಟ್ ಆಗ್ತಾರೆ?
ಈ ವಾರ ಯಾರು ನಾಮಿನೇಟ್ ಆಗ್ತಾರೆ? ರಕ್ಷಿತಾ, ಧ್ರುವಂತ್ ಅವರು ಏನು ಮಾತನಾಡಿಕೊಳ್ಳಲಿದ್ದಾರೆ? ರಕ್ಷಿತಾ, ಧ್ರುವಂತ್ ಇಲ್ಲದ ಬಿಗ್ ಬಾಸ್ ಮನೆ ಹೇಗಿರಲಿದೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಎಪಿಸೋಡ್ ಕುತೂಹಲದಿಂದ ಇರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

