- Home
- Entertainment
- TV Talk
- Karna Serial: ಹಿಂದೆ ಯಮರಾಯ ನಿಂತಿರೋದು ಗೊತ್ತಿಲ್ದೇ ಹಾಯಾಗಿದ್ದಾನೆ ಪಾಪಿ ಸಂಜಯ್! ಮುಂದಿದೆ ಮಾರಿಹಬ್ಬ
Karna Serial: ಹಿಂದೆ ಯಮರಾಯ ನಿಂತಿರೋದು ಗೊತ್ತಿಲ್ದೇ ಹಾಯಾಗಿದ್ದಾನೆ ಪಾಪಿ ಸಂಜಯ್! ಮುಂದಿದೆ ಮಾರಿಹಬ್ಬ
ಸಂಜಯ್‌ನ ಮೋಸದಿಂದ ಜೈಲು ಸೇರಿದ್ದ ನಿಧಿಯನ್ನು ಕರ್ಣ ರಕ್ಷಿಸಿದ್ದಾನೆ. ಆಘಾತದಲ್ಲಿರುವ ನಿಧಿಗೆ ಸಮಾಧಾನ ಹೇಳಿ, ಇದಕ್ಕೆ ಕಾರಣನಾದ ಸಂಜಯ್‌ಗೆ ತಕ್ಕ ಪಾಠ ಕಲಿಸಲು ಕರ್ಣ ಜಿಮ್‌ಗೆ ತೆರಳಿದ್ದಾನೆ, ಅಲ್ಲಿ ಅವನಿಗೆ ಯಮರೂಪಿಯಾಗಿ ದರ್ಶನ ನೀಡಿದ್ದಾನೆ.

ಮೋಸದ ಸುಳಿಯಲ್ಲಿ ನಿಧಿ
ಕರ್ಣ ಸೀರಿಯಲ್ (Karna Serial)ನಲ್ಲಿ ರೆಡ್ಲೈಟ್ ಏರಿಯಾದಲ್ಲಿ ನಿಧಿಯನ್ನು ಸಿಲುಕಿಸಿ ಆಕೆಯನ್ನು ಜೈಲಿಗೆ ಹಾಕಿಸುವಲ್ಲಿ ವಿಲನ್ ಸಂಜಯ್ ಯಶಸ್ವಿಯಾಗಿದ್ದ. ಕುರುಡಿಯ ರೂಪದಲ್ಲಿ ಬಂದ ಯುವತಿಯೊಬ್ಬಳು ನಿಧಿಗೆ ಡ್ರಾಪ್ ಕೇಳುವ ನೆಪದಲ್ಲಿ ಆ ಏರಿಯಾಕ್ಕೆ ಕರೆದುಕೊಂಡು ಹೋಗಿದ್ದಳು.
ಪೊಲೀಸರಿಂದ ಅರೆಸ್ಟ್
ಆಕೆಗೆ ಸಹಾಯ ಮಾಡಲು ಹೋದ ನಿಧಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು. ಆಕೆ ಹೆಣ್ಣುಮಕ್ಕಳನ್ನು ಸಪ್ಲೈ ಮಾಡುವವಳು ಎಂದು ಆರೋಪಿಸಿ ಜೈಲಿಗೆ ಕಳುಹಿಸಲಾಗಿತ್ತು.
ಶಾಕ್ನಲ್ಲಿ ನಿಧಿ
ಇದೀಗ ಕರ್ಣ ಬಂದು ನಿಧಿಯನ್ನು ಕಾಪಾಡಿದ್ದಾನೆ. ಜೈಲಿನಿಂದ ಬಿಡುಗಡೆಗೊಳಿಸಿದ್ದಾನೆ. ಆದರೆ ಆ ಶಾಕ್ನಿಂದ ಇನ್ನೂ ನಿಧಿ ಹೊರಕ್ಕೆ ಬಂದಿಲ್ಲ.
ಕರ್ಣನಿಂದ ಸಮಾಧಾನ
ಕರ್ಣನೇ ಆಕೆಗೆ ಸಮಾಧಾನ ಮಾಡಿ ತಿಂಡಿ ತಿನಿಸಿದ್ದಾನೆ. ಕೊನೆಗೆ ಇದಕ್ಕೆಲ್ಲಾ ಕಾರಣ ಆಗಿರೋ ಸಂಜಯ್ನಿಗೆ ಗತಿ ಕಾಣಿಸಬೇಕೆಂಬ ಪಣ ತೊಟ್ಟಿದ್ದಾನೆ ಕರ್ಣ.
ಸಂಜಯ್‌ಗೆ ಬುದ್ಧಿ
ಇದೇ ಕಾರಣಕ್ಕೆ ಕುಸ್ತಿಪಟುಗಳು ಹಾಕಿಕೊಳ್ಳುವ Boxing Gloves ಖರೀದಿ ಮಾಡಿ ಸಂಜಯ್‌ಗೆ ಬುದ್ಧಿ ಕಲಿಸಲು ಮುಂದಾಗಿದ್ದಾನೆ.
ಜಿಮ್ ವರ್ಕ್
ಸಂಜಯ್ ಇದರ ಪರಿವೇ ಇಲ್ಲದೇ ಇಯರ್ಫೋನ್ನಲ್ಲಿ ಹಾಡು ಹಾಕಿಕೊಂಡು ಜಿಮ್ವರ್ಕ್ ಮಾಡುತ್ತಿದ್ದಾನೆ. ಆಗ ಕರ್ಣ ಅಲ್ಲಿ ಇರುವ ಖುರ್ಚಿಯ ಮೇಲೆ ನಿಧಿಯನ್ನು ಕುಳ್ಳರಿಸಿದ್ದಾನೆ. ಕಾಲ ಮೇಲೆ ಕಾಲು ಹಾಕಿ ಹಾಗೆಯೇ ಅಲುಗಾಡದೇ ಕುಳಿತುಕೊಳ್ಳುವಂತೆ ಹೇಳಿದ್ದಾನೆ.
ಯಮರೂಪಿ
ಸಂಜಯ್‌ಗೆ ಯಮರೂಪಿಯಾಗಿ ಬಂದು ನಿಂತಿದ್ದಾನೆ. ಅವನು ಬಂದಿದ್ದನ್ನು ಬಳಿಕ ಸಂಜಯ್ ನೋಡಿದ್ದಾನೆ. ಆದರೆ ನಿಧಿಯನ್ನು ಆತ ಗಮನಿಸಲಿಲ್ಲ. ಮುಂದೆ ಆಗುವ ಅನಾಹುತಗಳ ಅರಿವೂ ಇಲ್ಲ. ಇನ್ನು ಅವನ ಕಥೆ ಮುಗಿದಂತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

