- Home
- Entertainment
- TV Talk
- Amruthadhaare: ಜೊತೆಯಲ್ಲಿ ಗೌತಮ್-ಭೂಮಿ! ಮಕ್ಕಳು ಶಾಕ್: ಅಪ್ಪ-ಅಮ್ಮನ್ನೇ ಹೇಗೆ ಆಡಿಸ್ತಿದ್ದಾರೆ ನೋಡಿ!
Amruthadhaare: ಜೊತೆಯಲ್ಲಿ ಗೌತಮ್-ಭೂಮಿ! ಮಕ್ಕಳು ಶಾಕ್: ಅಪ್ಪ-ಅಮ್ಮನ್ನೇ ಹೇಗೆ ಆಡಿಸ್ತಿದ್ದಾರೆ ನೋಡಿ!
ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಅಜ್ಜಿ ಸಾಯುವ ನಾಟಕವಾಡಿದ್ದಾರೆ. ಅಜ್ಜಿಯ ಕೊನೆಯಾಸೆ ಈಡೇರಿಸಲು ಹೊರಟ ಈ ಜೋಡಿಗೆ, ಅವರ ಮಕ್ಕಳಾದ ಆಕಾಶ್ ಮತ್ತು ಮಿಂಚು ಕೂಡ ಆಟವಾಡಿಸಲು ಸಜ್ಜಾಗಿದ್ದಾರೆ.

ಸಂಕಷ್ಟದಲ್ಲಿ ಜೋಡಿ
ಅಮೃತಧಾರೆ (Amruthadhaare)ಯಲ್ಲಿ ಅಜ್ಜಿ ಮಾಡಿರೋ ಪ್ಲ್ಯಾನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಭೂಮಿಕಾ- ಗೌತಮ್. ಮನಸ್ಸಿನಲ್ಲಿ ಪ್ರೀತಿ ಇದ್ದರೂ ಹುಸಿಮುನಿಸು ಮಾಡಿಕೊಂಡಿರೋ ಈ ಜೋಡಿ ಈಗ ಒಂದಾಗಲೇ ಬೇಕಿದೆ.
ಎಲ್ಲರೂ ಫೇಲ್
ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಎಲ್ಲರೂ ಪ್ರಯತ್ನಿಸಿ ಫೇಲ್ ಆದರು. ಶಕುಂತಲಾ ಭಯದಿಂದ ಭೂಮಿಕಾ ಗೌತಮ್ ಜೊತೆ ಬರಲು ರೆಡಿನೇ ಇಲ್ಲ. ಗೌತಮ್ಗೆ ಶಕುಂತಲಾ ಏನು ಮಾಡಿಬಿಟ್ಟಿಯಾಳೋ ಎನ್ನುವ ಭಯ. ಈಗ ಆ ಭಯ ದೂರವಾಗಿದೆ.
ಅಜ್ಜಿ ಪ್ಲ್ಯಾನ್
ಜೈದೇವನಿಂದ ವೃದ್ಧಾಶ್ರಮಕ್ಕೆ ಸೇರಿರೋ ಅಜ್ಜಿ ಮತ್ತು ಆನಂದ್, ಭಾಗ್ಯ ಮಾಡಿರೋ ಪ್ಲ್ಯಾನ್ ಈಗ ವರ್ಕ್ಔಟ್ ಆಗುತ್ತಿದೆ. ಅಜ್ಜಿ, ಸಾಯುವ ಹಾಗೆ ನಾಟಕ ಮಾಡಿದ್ದಾಳೆ. ಭೂಮಿಕಾ ಮತ್ತು ಗೌತಮ್ಗೆ ಕರೆ ಮಾಡಿ ಅಜ್ಜಿಯ ಕೊನೆಯ ಆಸೆ ಈಡೇರಿಸಲು ಬನ್ನಿ ಎಂದು ಹೇಳುವಂತೆ ಆನಂದ್ಗೆ ಹೇಳಿದ್ದಾಳೆ. ಆ ಪ್ಲ್ಯಾನ್ನಂತೆ ಭಾಗ್ಯಮ್ಮ ಭೂಮಿಕಾ ಮನೆಗೆ ಬಂದು ಅಜ್ಜಿ ಈಗಲೋ ಆಗಲೋ ಎನ್ನುತ್ತಿದ್ದಾರೆ. ಬೇಗ ಗೌತಮ್ನನ್ನು ಕರೆದುಕೊಂಡು ಬಾ ಎಂದಿದ್ದಾಳೆ.
ಆಕಾಶ್-ಮಿಂಚು ಶಾಕ್
ಇದೀಗ ಗೌತಮ್ನನ್ನು ಭೂಮಿಕಾ ಮನೆಗೆ ಕರೆದಿದ್ದಾಳೆ. ಗೌತಮ್, ಭೂಮಿಕಾ ಮನೆಗೆ ಹೋಗುವುದನ್ನು ಆಕಾಶ್ ಮತ್ತು ಮಿಂಚು ನೋಡಿ ಶಾಕ್ ಆಗಿದ್ದಾರೆ.
ಮಕ್ಕಳಿಗೂ ಆಹ್ವಾನ
ಅವರಿಗೆ ಏನಾಗ್ತಿದೆ ಎನ್ನುವುದು ಗೊತ್ತಿಲ್ಲ. ಅಲ್ಲಿ ಅಜ್ಜಿ ಗೌತಮ್- ಭೂಮಿಕಾ ಮಾತ್ರವಲ್ಲದೇ ಮಕ್ಕಳನ್ನೂ ಕರೆದುಕೊಂಡು ಬನ್ನಿ ಎಂದಿದ್ದಾಳೆ. ಮಕ್ಕಳಿಗೆ ಈ ವಿಷ್ಯ ಹೇಗೆ ಹೇಳೋದು ಗೊತ್ತಾಗ್ತಿಲ್ಲ ಈ ಜೋಡಿದೆ.
ಆಟ ಆಡಿಸೋಣ
ಇದನ್ನು ಕೇಳಿಸಿಕೊಂಡ ಮಿಂಚು ಮತ್ತು ಆಕಾಶ್ ಒಹ್ ಇದ್ದಾ ವಿಷ್ಯ ಎನ್ನುತ್ತಾ, ಅವರು ಕರೆದ ತಕ್ಷಣ ನಾವು ಒಪ್ಪಿಕೊಳ್ಳೋದು ಬೇಡ, ಆಟ ಆಡಿಸೋಣ ಎಂದು ಪ್ಲ್ಯಾನ್ ಮಾಡಿದ್ದಾರೆ.
ವಿಲನ್ಗಳಿಗೆ ಬುದ್ಧಿ
ಒಟ್ಟಿನಲ್ಲಿ ಭೂಮಿಕಾ ಮತ್ತು ಗೌತಮ್ ಅಮ್ಮ, ಅಜ್ಜಿಯಿಂದ ಮಾತ್ರವಲ್ಲದೇ ಮಕ್ಕಳಿಂದಲೂ ಟ್ರ್ಯಾಪ್ಗೆ ಒಳಗಾಗ್ತಿದ್ದಾರೆ. ಒಟ್ಟಿನಲ್ಲಿ ಒಂದಾಗಿ ವಿಲನ್ಗಳಿಗೆ ಬುದ್ಧಿ ಕಲಿಸುವ ಕಾಲ ಬಂದಾಯ್ತು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

