- Home
- Entertainment
- TV Talk
- Brahmagantu: ಚಾಲೆಂಜ್ ಸೋತು ಮನೆಬಿಟ್ಟ ದೀಪಾ- ಖುಷಿ ಬದ್ಲು ಅಡಕತ್ತರಿಯಲ್ಲಿ ಒದ್ದಾಡಿದ ಸೌಂದರ್ಯ! ಏನಾಯ್ತು?
Brahmagantu: ಚಾಲೆಂಜ್ ಸೋತು ಮನೆಬಿಟ್ಟ ದೀಪಾ- ಖುಷಿ ಬದ್ಲು ಅಡಕತ್ತರಿಯಲ್ಲಿ ಒದ್ದಾಡಿದ ಸೌಂದರ್ಯ! ಏನಾಯ್ತು?
ಬೆಸ್ಟ್ ಸೊಸೆ ಚಾಲೆಂಜ್‌ನಲ್ಲಿ ಸೋತ ದೀಪಾ, ಕೊಟ್ಟ ಮಾತಿನಂತೆ ಮನೆಯಿಂದ ಹೊರನಡೆಯಲು ಸಿದ್ಧಳಾಗುತ್ತಾಳೆ. ಆದರೆ, ಕೊನೆಯ ಕ್ಷಣದಲ್ಲಿ ಗೌರಿ ಅಜ್ಜಿ ಅವಳನ್ನು ತಡೆದು, ದೀಪಾ ಮನೆಯಲ್ಲೇ ಉಳಿಯುವಂತೆ ಮಾಡುತ್ತಾರೆ. ಈ ಅನಿರೀಕ್ಷಿತ ತಿರುವು ಸೌಂದರ್ಯಳ ಕನಸನ್ನು ಭಗ್ನಗೊಳಿಸುತ್ತದೆ.

ಬೆಸ್ಟ್ ಸೊಸೆ ಚಾಲೆಂಜ್
ಬ್ರಹ್ಮಗಂಟು ಸೀರಿಯಲ್ (Brahmagantu Serial)ನಲ್ಲಿ ಬೆಸ್ಟ್ ಸೊಸೆ ಯಾರು ಎಂದು ನೋಡುವ ಸಲುವಾಗಿ ಗೌರಿ ಅಜ್ಜಿ ದೀಪಾ ಮತ್ತು ಸೌಂದರ್ಯ ನಡುವೆ ಸ್ಪರ್ಧೆ ಏರ್ಪಡಿಸಿದ್ದಳು. ಮೂರು ಚಾಲೆಂಜ್‌ನಲ್ಲಿ ಎರಡು ಯಾರು ಗೆಲ್ಲುವರೋ ಅವರೇ ವಿನ್ ಎಂದು ಹೇಳಿದ್ದಳು.
ಸೋತ ದೀಪಾ
ತಾನು ಗೆದ್ದೇ ಗೆಲುವೆ ಎಂದಿದ್ದ ದೀಪಾ, ಗೆಲ್ಲದಿದ್ದರೆ ಮನೆಬಿಟ್ಟು ಹೋಗುವೆ ಎಂದಿದ್ದಳು. ಮೊದಲ ಚಾಲೆಂಜ್ ದೀಪಾ ಗೆದ್ದಳು. ಎರಡನೆಯ ಚಾಲೆಂಜ್ ಸಮಯದಲ್ಲಿ ದಿಶಾನೂ ಆಗಿರೋ ದೀಪಾ ರೂಪಾಳ ಕುತಂತ್ರದಿಂದ ಜೈಲು ಸೇರಬೇಕಾಯಿತು. ಆ ಚಾಲೆಂಜ್ಗೆ ಬರದೇ ಸೋತಳು.
ಪ್ರಾಮಿಸ್ ಪಾಲನೆ
ಕೊನೆಯ ಚಾಲೆಂಜ್‌ನಲ್ಲಿ ಗೌರಿ ಅಜ್ಜಿಗೆ ನೋವಾಗಬಾರದು ಎನ್ನುವ ಕಾರಣಕ್ಕೆ ಗೆಲುವು ಸಾಧಿಸುವ ಸಾಧ್ಯತೆ ಇದ್ದರೂ ಸೋತಳು. ಇದಕ್ಕಾಗಿ ದೀಪಾ ಈಗ ತಾನು ಮಾಡಿರೋ ಪ್ರಾಮಿಸ್ನಂತೆ ಮನೆಬಿಟ್ಟು ಹೋಗಬೇಕು.
ಮನೆಬಿಟ್ಟ ದೀಪಾ
ಅದೇ ರೀತಿ ಗಂಟುಮೂಟೆ ಕಟ್ಟಿ ದೀಪಾ ಮನೆಬಿಟ್ಟು ಹೊರಟು ನಿಂತಿದ್ದಾಳೆ. ಕಣ್ಣೀರಾಗಿದ್ದಾಳೆ. ಸೌಂದರ್ಯ ಬಿಟ್ಟು ಎಲ್ಲರೂ ಕಣ್ಣೀರಾಗಿದ್ದಾರೆ.
ಕಣ್ಣೀರಿಟ್ಟ ಚಿರು
ಅದೇ ವೇಳೆ ದೀಪಾಳನ್ನು ಮನೆಯಿಂದ ಆಚೆಗೆ ಹಾಕದಂತೆ ಗೌರಿ ಅಜ್ಜಿಯಲ್ಲಿ ಚಿರು ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಈ ಮನೆಗೆ ಅವರ ಅವಶ್ಯಕತೆ ಇದೆ ಎಂದೆಲ್ಲಾ ಹೇಳಿದ್ದಾನೆ. ಕಣ್ಣೀರು ಹಾಕಿದ್ದಾನೆ.
ನಿನ್ನ ಅವಶ್ಯಕತೆ ಇದೆ
ಇನ್ನೇನು ದೀಪಾ ಹೋಗಬೇಕು ಎನ್ನುವಷ್ಟರಲ್ಲಿ ಅಜ್ಜಿ ಅವಳನ್ನು ತಡೆದು ನಿಲ್ಲಿಸಿದ್ದಾಳೆ. ನಿನ್ನನ್ನು ಚಿರು ಹೆಂಡತಿ ಎಂದು ಒಪ್ಪಿಕೊಂಡಿದ್ದಾನೋ, ಬಿಟ್ಟಿದ್ದಾನೋ ಗೊತ್ತಿಲ್ಲ. ಆದರೆ ನೀನು ಈ ಮನೆಗೆ ಬೇಕು, ನಿನ್ನ ಅವಶ್ಯಕತೆ ಇದೆ. ಇಲ್ಲಿ ಯಾರೂ ನಿನ್ನನ್ನು ಮನೆಬಿಟ್ಟು ಹೋಗು ಅನ್ನಲಿಲ್ಲ ಎಂದಿದ್ದಾಳೆ.
ಅಡಕತ್ತರಿಯಲ್ಲಿ ಸೌಂದರ್ಯ
ಕೊನೆಗೆ ಸೌಂದರ್ಯಳನ್ನು ಉದ್ದೇಶಿಸಿ, ನೀನು ಹಿರಿ ಸೊಸೆ. ಕಿರಿ ಸೊಸೆ ಮನೆಬಿಟ್ಟು ಹೋಗದಂತೆ ನೀನೂ ತಡೆಯಬಹುದಲ್ವಾ ಎಂದಾಗ ಸೌಂದರ್ಯಳಿಗೆ ಶಾಕ್ ಆಗಿದೆ. ಅಡಕತ್ತರಿಯಲ್ಲಿ ಸಿಲುಕಿದ ಅನುಭವ.
ನನಸಾಗದ ಕನಸು
ದೀಪಾ ಮನೆಬಿಟ್ಟು ಹೋಗ್ತಾಳೆ ಎಂದು ಕನಸು ಕಾಣ್ತಿದ್ದ ಸೌಂದರ್ಯ, ನಾನೇನು ಮನೆಬಿಟ್ಟು ಹೋಗು ಅನ್ನಲಿಲ್ವಲ್ಲಾ ಎಂದಿದ್ದಾಳೆ. ಅಲ್ಲಿಗೆ ದೀಪಾ ಮನೆಬಿಟ್ಟು ಹೋಗಲ್ಲ ಎನ್ನುವುದು ಕನ್ಫರ್ಮ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

