11:33 PM (IST) Aug 20

Karnataka News Live ಸೆಲ್ಫ್ ಮೇಡ್ ಶೆಹಜಾದ ಯಶ್ - ‘ಟಾಕ್ಸಿಕ್’ ನೋಡೋ ಮುನ್ನ ಈ ವಿಷಯ ತಿಳಿದುಕೊಳ್ಳಿ!

ಯಶ್ ಅವರನ್ನು ಯಾಕೆ ನಿರ್ದೇಶನಕ್ಕೆ ಆರಿಸಿಕೊಂಡರು ಅನ್ನುವುದಷ್ಟೇ ಆ ಹೊತ್ತಿನ ಕುತೂಹಲ. ಸಿನಿಮಾ ತಡವಾಗುತ್ತಿದ್ದಂತೆ ಊಹಾಪೋಹಗಳು ಕೇಳಿಬಂದವು. ಯಶ್ ಇಡೀ ಸಿನಿಮಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

Read Full Story
11:18 PM (IST) Aug 20

Karnataka News Live Mobile - ಕೊಂಡುಕೊಳ್ಳೋ ಮುನ್ನ ಈ 5 ವಿಷಯ ಗೊತ್ತಿರಲಿ! ಇಲ್ಲವಾದ್ರೆ ದೊಡ್ಡ ನಷ್ಟ ಖಚಿತ? ಶಾಕ್ ಕೊಡಲಿದೆ ಈ ಮಾಹಿತಿ

ನವೀಕರಿಸಿದ (Refurbished) ಫೋನ್‌ಗಳು ಕಡಿಮೆ ಬೆಲೆಯಲ್ಲಿ ಉತ್ತಮ ಆಯ್ಕೆಯಾಗಿದ್ದು, ಇವು ಸಾಮಾನ್ಯ ಸೆಕೆಂಡ್ ಹ್ಯಾಂಡ್ ಫೋನ್‌ಗಳಿಗಿಂತ ಭಿನ್ನವಾಗಿವೆ. ಇವುಗಳನ್ನು ಖರೀದಿಸುವಾಗ ವಿಶ್ವಾಸಾರ್ಹ ಮಾರಾಟಗಾರ, ಫೋನ್‌ನ ಸ್ಥಿತಿ, ಬ್ಯಾಟರಿ ಆರೋಗ್ಯ ಮತ್ತು ವಾರಂಟಿಯಂತಹ ಪ್ರಮುಖ ಅಂಶಗಳನ್ನು ಪರಿಶೀಲಿಸುವುದು ಅತ್ಯಗತ್ಯ.
Read Full Story
10:50 PM (IST) Aug 20

Karnataka News Live ಹಸು ಕಟ್ಟುವ ವಿಚಾರಕ್ಕೆ ಅಪ್ಪನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ದುಷ್ಟರು.. ಹೆದರಿದ ಅಪ್ರಾಪ್ತ ಪುತ್ರ, ದುರಂತ ಅಂತ್ಯ

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿಂಗಾರಿಪುರದಲ್ಲಿ ಹಸು ಕಟ್ಟುವ ವಿಚಾರದ ಗಲಾಟೆಗೆ ಹೆದರಿ ನಾಗೇಂದ್ರ ಎಂಬ ಅಪ್ರಾಪ್ತ ಬಾಲಕ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..

Read Full Story
10:46 PM (IST) Aug 20

Karnataka News Live ‘ಟಾಕ್ಸಿಕ್’ ಸ್ವಾಗತಕ್ಕೆ ಹೇಗಿದೆ ಸಿದ್ಧತೆ? ಯಶ್ ಕಟೌಟ್‌ಗಳು ಹೇಳುತ್ತಿವೆ ರಾಕಿಂಗ್ ಸ್ಟಾರ್ ಕ್ರೇಜ್‌ನ ಕಥೆ!

Yash Cutouts: ‘ಟಾಕ್ಸಿಕ್’ ಸ್ವಾಗತಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲೂ ಚಿತ್ರತಂಡ ಹಾಗೂ ಅಭಿಮಾನಿಗಳಿಂದ ಭರ್ಜರಿ ತಯಾರಿ ನಡೆಯುತ್ತಿದೆ.

Read Full Story
10:04 PM (IST) Aug 20

Karnataka News Live Cricket - ಟೀಮ್ ಇಂಡಿಯಾದಲ್ಲಿ ಏಕಾಏಕಿ ದೊಡ್ಡ ಬದಲಾವಣೆ! ಸ್ಟಾರ್‌ ಪ್ಲೇಯರ್‌ ಔಟ್? 2ನೇ ಟೆಸ್ಟ್‌ಗೆ ಭಾರತದ ಸರ್ಪ್ರೈಸ್ 'ಪ್ಲೇಯಿಂಗ್ 11

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಗೆದ್ದರೂ, ಭಾರತ ತಂಡವು ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಆಡುವ XI ನಲ್ಲಿ ಬದಲಾವಣೆ ಮಾಡಲು ಯೋಜಿಸುತ್ತಿದೆ. ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಆಲ್‌ರೌಂಡರ್ ಸರಾನ್ಶ್ ಜೈನ್ ಚೊಚ್ಚಲ ಪ್ರವೇಶ ಮಾಡುವ ಸಾಧ್ಯತೆಯಿದ್ದು, ಧ್ರುವ್ ಜುರೆಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
Read Full Story
09:43 PM (IST) Aug 20

Karnataka News Live ಶ್ರೀರಂಗನಾಥನಿಗೆ ಬಂಗಾರದ ಕಳಸ ನೀಡಿದ TVS ಉದ್ಯಮಿ.. ಅಷ್ಟಲಕ್ಷ್ಮಿ ಕತೆಯುಳ್ಳ ಗಿಫ್ಟ್ ಸಮರ್ಪಣೆ

ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇಗುಲಕ್ಕೆ ಟಿವಿಎಸ್ ಕಂಪನಿ ಎಂಡಿ ವೇಣು ಶ್ರೀನಿವಾಸನ್ ಅವರು 66 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ತೂಕದ ಚಿನ್ನದ ಅಷ್ಟಲಕ್ಷ್ಮಿ ಕಳಶವನ್ನು ಕಾಣಿಕೆಯಾಗಿ ನೀಡಿದ್ದಾರೆ. ಪಂಚರಂಗ ಕ್ಷೇತ್ರಗಳಲ್ಲಿ ಮೊದಲನೆಯದಾದ 'ಆದಿ ರಂಗ' ಖ್ಯಾತಿಯ ಈ ಪುರಾತನ ದೇಗುಲಕ್ಕೆ ಉದ್ಯಮಿ ನೀಡಿದ ಕೊಡುಗೆಯು ಭಕ್ತರ ಶ್ಲಾಘನೆಗೆ ಪಾತ್ರವಾಗಿದೆ.

Read Full Story
09:27 PM (IST) Aug 20

Karnataka News Live ಸುದೀಪ್‌ ಹಾಡಿದ ಶಾರುಖ್‌ ಹಾಡು ಕೇಳಿದ್ರಾ? ಮದುವೆ ಸಮಾರಂಭದಲ್ಲಿ ಕಿಚ್ಚನ ಮ್ಯೂಸಿಕಲ್‌ ಟ್ರೀಟ್‌

Kichcha Sudeep Viral Video: ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಂದ್ರೆ ಬರೀ ಅಭಿನಯ ಮಾತ್ರವಲ್ಲ, ಅವರ ಸ್ಟೈಲ್‌, ಸ್ಟೇಜ್‌ ಪ್ರೆಸೆನ್ಸ್‌ ಹಾಗೂ ಸಂಗೀತದ ಮೇಲಿನ ಆಸಕ್ತಿಗೂ ಪ್ರತ್ಯೇಕ ಅಭಿಮಾನಿ ಬಳಗವಿದೆ.

Read Full Story
08:51 PM (IST) Aug 20

Karnataka News Live ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಂದಿನ ಸಿನಿಮಾಗೆ ಹೊಸ ಟ್ವಿಸ್ಟ್ - ‘ತತ್ಸಮ ತದ್ಭವ’ ನಿರ್ದೇಶಕನ ಜೊತೆ ಮಾತುಕತೆ!

Dhruva Sarja New Movie: ‘ತತ್ಸಮ ತದ್ಭವ’ ಸಿನಿಮಾ ಮೂಲಕ ನಿರ್ದೇಶಕರಾಗಿ ಗಮನ ಸೆಳೆದ ವಿಷಾಲ್‌ ಆತ್ರೇಯ ಹಾಗೂ ಧ್ರುವ ಸರ್ಜಾ ಹೊಸ ಸಿನಿಮಾಗಾಗಿ ಕೈಜೋಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Read Full Story
08:30 PM (IST) Aug 20

Karnataka News Live ಫ್ರೀ ಆದಾಗ ತಿಳಿಸು, ಜೊತೆಯಲ್ಲಿ ಕಳೆಯೋಣ ಎಂದು ಕಿಸ್‌ ಕೊಟ್ಟ - ವಿದ್ಯಾರ್ಥಿನಿ ಜೊತೆ ಮನೆ ಮಾಲೀಕ ಪೋಲಿ ಆಟ

ಬೆಂಗಳೂರಲ್ಲಿ ಯಾರನ್ನ ನಂಬಬೇಕು? ನಂಬಬಾರದು ಎಂಬುದೇ ಗೊತ್ತಾಗಲ್ಲ. 20 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಮನೆ ಮಾಲೀಕನ ಕೆಟ್ಟ ಕಣ್ಣು ಬಿದ್ದು ಏನೆಲ್ಲ ಆಗೋಯ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story
08:14 PM (IST) Aug 20

Karnataka News Live ಸ್ಟಾರ್‌ ನಟಿಯಾಗಿದ್ದರೂ ಹಣ-ಖ್ಯಾತಿಗಿಂತ ಇದಕ್ಕೆ ಹೆಚ್ಚು ಬೆಲೆ ಕೊಡ್ತಾರಂತೆ ಶ್ರೀಲೀಲಾ - ಕಾರಣವೇನು?

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತಮ್ಮ ನೃತ್ಯ ಮತ್ತು ಅಭಿನಯದ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ಶ್ರೀಲೀಲಾ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Read Full Story
07:54 PM (IST) Aug 20

Karnataka News Live ಅಯ್ಯೋ! ಇಷ್ಟೊಂದು ಸುಲಭವಾಗಿ ಇಲಿಗಳನ್ನು ಮನೆಯಿಂದ ಓಡಿಸಬಹುದಾ? ಇಷ್ಟು ದಿನ ಇಷ್ಟೆಲ್ಲಾ ಕಷ್ಟಪಟ್ಟಿದ್ದೇಕೆ!

ಮಳೆಗಾಲದಲ್ಲಿ ಮನೆಗೆ ಇಲಿಗಳ ಕಾಟ ಹೆಚ್ಚಾಗುತ್ತಿದೆಯೇ? ಪುದೀನಾ, ಬೆಳ್ಳುಳ್ಳಿ, ಲವಂಗ ಸೇರಿದಂತೆ ಕೆಲವು ನೈಸರ್ಗಿಕ ಮನೆಮದ್ದುಗಳ ಬಗ್ಗೆ ತಿಳಿಯಿರಿ. ಜೊತೆಗೆ ಇಲಿಗಳ ಕಾಟ ತಪ್ಪಿಸಲು ಸುರಕ್ಷಿತ ಕ್ರಮಗಳನ್ನೂ ನೋಡಿ.

Read Full Story
07:34 PM (IST) Aug 20

Karnataka News Live ಸಮಾಜ ಸೇವೆ ಹೆಸರಲ್ಲಿ ಮಹಿಳೆಗೆ ಲೈಂ*ಕ ಕಿರುಕುಳ ಆರೋಪ; ಪ್ರಜಾ ಪ್ರಬುದ್ಧ ವೇದಿಕೆ ಸಂಸ್ಥಾಪಕ ಅರೆಸ್ಟ್

ಜಮೀನು ವಿವಾದ ಬಗೆಹರಿಸಿಕೊಡುವುದಾಗಿ ನಂಬಿಸಿ ಮಹಿಳೆಯಿಂದ ಹಣ, ಬಂಗಾರ ಪಡೆದು ಲೈಂ*ಕ ಕಿರುಕುಳ ನೀಡಿದ್ದ ಹೋರಾಟಗಾರ ಶ್ರೀನಾಥ್‌ನನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.

Read Full Story
07:04 PM (IST) Aug 20

Karnataka News Live ಒಂದು ರೂಪಾಯಿ ಖರ್ಚಿಲ್ಲದೆ ಬಾತ್‌ರೂಮ್‌ ವಾಸನೆ, ಜಿರಳೆ ಕಾಟ ತಪ್ಪಿಸಬಹುದು? ಈ ಟಿಪ್ಸ್‌ ತಿಳಿಯಿರಿ!

ಮನೆಯ ಡ್ರೈನೇಜ್ ದುರ್ವಾಸನೆ ಮತ್ತು ಕಿಚನ್‌ನ ಜಿರಳೆ ಸಮಸ್ಯೆಗೆ ಎಕ್ಸ್‌ಪೈರ್ ಆದ ಮಾತ್ರೆ ಬಳಸುವ ವೈರಲ್ ಟಿಪ್ಸ್‌ ಬಗ್ಗೆ ಎಚ್ಚರ. ಡ್ರೈನೇಜ್ ಸ್ವಚ್ಛತೆ, ಕಿಚನ್ ಹೈಜೀನ್ ಹಾಗೂ ಸುರಕ್ಷಿತ ಪೆಸ್ಟ್ ಕಂಟ್ರೋಲ್ ವಿಧಾನಗಳ ಬಗ್ಗೆ ತಿಳಿಯಿರಿ.

Read Full Story
06:57 PM (IST) Aug 20

Karnataka News Live KEA - 141 ಓಎಂಆರ್‌ ನಾಪತ್ತೆಗೆ ಹೊಣೆ ಯಾರು? ಕೆಇಎನಾ ಅಥವಾ ವಿದ್ಯಾರ್ಥಿಗಳಾ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್

ವಿಜಯಪುರದ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ, ಪ್ರಶ್ನೆಪತ್ರಿಕೆ ಮತ್ತು ಓಎಂಆರ್ ಶೀಟ್ ಸರಣಿ ಸಂಖ್ಯೆ ತಾಳೆಯಾಗದ ಕಾರಣ ಗೊಂದಲ ಸೃಷ್ಟಿಯಾಗಿತ್ತು. ಕೆಇಎಯ ಹೊಸ ನಿಯಮದ ಬಗ್ಗೆ ಮಾಹಿತಿ ಕೊರತೆಯಿಂದ ಆತಂಕಗೊಂಡ 141 ಅಭ್ಯರ್ಥಿಗಳು ತಮ್ಮ ಓಎಂಆರ್ ಶೀಟ್‌ಗಳೊಂದಿಗೆ ಪರೀಕ್ಷಾ ಕೇಂದ್ರದಿಂದ ಹೊರನಡೆದಿದ್ದು, ಈ ಘಟನೆಗೆ ಯಾರು ಹೊಣೆ ಎಂಬುದನ್ನು ಈ ವರದಿ ವಿಶ್ಲೇಷಿಸುತ್ತದೆ.
Read Full Story
06:33 PM (IST) Aug 20

Karnataka News Live ಅಪ್ಪ-ಅಮ್ಮನ ನಡುವೆ ಹಾಯಾಗಿ ನಿದ್ರಿಸಿದ ವಿಜಯ್ ದೇವರಕೊಂಡ - ಫೋಟೋ ತೆಗೆದಿದ್ದು ಮಾತ್ರ ಸ್ಪೆಷಲ್ ವ್ಯಕ್ತಿ!

ವಿಜಯ್ ದೇವರಕೊಂಡ ಅಪ್ಪ-ಅಮ್ಮನ ನಡುವೆ ನೆಮ್ಮದಿಯಾಗಿ ನಿದ್ರಿಸುತ್ತಿರುವ ಕ್ಯೂಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಸ್ಪೆಷಲ್ ವ್ಯಕ್ತಿ ಕ್ಲಿಕ್ ಮಾಡಿದ್ದಾರೆ.

Read Full Story
06:20 PM (IST) Aug 20

Karnataka News Live ರನ್‌ಟೈಮ್‌ ಉದ್ದವಾದ್ರೆ ಏನಂತೆ? - ‘ಪುಷ್ಪ 2’, ‘ಅನಿಮಲ್’ ಬಳಿಕ ‘ಟಾಕ್ಸಿಕ್’ ಮೇಲೆ ಭಾರೀ ನಿರೀಕ್ಷೆ

ಯಶ್‌ ಅಭಿನಯದ ‘ಟಾಕ್ಸಿಕ್’ ಸಿನಿಮಾ 3 ಗಂಟೆಗೂ ಹೆಚ್ಚು ರನ್‌ಟೈಮ್‌ನೊಂದಿಗೆ ಬರಲಿದೆ ಎಂಬ ಚರ್ಚೆ ಶುರುವಾಗಿದೆ. ‘ಪುಷ್ಪ 2’, ‘ಅನಿಮಲ್’, ‘ಧುರಂಧರ್’ ಬಳಿಕ ಲಾಂಗ್ ರನ್‌ಟೈಮ್‌ ಸಿನಿಮಾಗಳ ಟ್ರೆಂಡ್‌ ಬಗ್ಗೆ ಇಲ್ಲಿದೆ ಮಾಹಿತಿ.

Read Full Story
06:13 PM (IST) Aug 20

Karnataka News Live ಸತ್ತವನು ಬದುಕಿ ಬಂದ! 11 ವರ್ಷಗಳ ನಂತರ ಸಿಕ್ಕಿಬಿದ್ದಿದ್ದು ಹೇಗೆ? 'ದೃಶ್ಯಂ' ಮೀರುಸುವಂತಿದೆ ಕೋಲಾರದ ಈ ಕತೆ

ಸಾಲ ತೀರಿಸಲು ಸ್ಮಶಾನದ ಹೆಣವನ್ನು ಸುಟ್ಟು ತನ್ನದೇ ಸಾವಿನ ನಾಟಕವಾಡಿದ್ದ ಕೋಲಾರದ ಅರುಣ್ ರೆಡ್ಡಿ, 11 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆಧಾರ್ ಕಾರ್ಡ್ ಸುಳಿವು ಮತ್ತು ಪೊಲೀಸರ ಚಾಣಾಕ್ಷತನದಿಂದಾಗಿ 'ದೃಶ್ಯಂ' ಶೈಲಿಯ ನಾಟಕ ಬಯಲಾಗಿದ್ದು, ಆರೋಪಿ ಈಗ ಜೈಲು ಪಾಲಾಗಿದ್ದಾನೆ.

Read Full Story
06:00 PM (IST) Aug 20

Karnataka News Live ಕೊಡಗಿನಲ್ಲಿ ಆನೆ ಹಾವಳಿ ತೀವ್ರ - ವಿರಾಜಪೇಟೆ ಭಾಗದಲ್ಲಿ ಬಂದ್‌ಗೆ ರೈತ-ಕಾರ್ಮಿಕ ಸಂಘಟನೆಗಳ ಕರೆ

ಕೊಡಗಿನಲ್ಲಿ ಮಾನವ-ಆನೆ ಸಂಘರ್ಷ ತೀವ್ರಗೊಂಡಿದ್ದು, ಆನೆ ದಾಳಿ ನಿಯಂತ್ರಣಕ್ಕೆ ವೈಜ್ಞಾನಿಕ ಯೋಜನೆ ಆಗ್ರಹಿಸಿ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಸೇರಿದಂತೆ ಹಲವೆಡೆ ಬಂದ್‌ಗೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.

Read Full Story
05:43 PM (IST) Aug 20

Karnataka News Live ‘ಸರ್ಕಲ್‌ಗೆ ಎರಡು ಸೈಡ್‌’ ಎಂದಿದ್ದಕ್ಕೆ ಭಾರೀ ಟ್ರೋಲ್ - ‘ನಾನು ಕ್ಯಾರೇ ಎನ್ನಲ್ಲ’ ಎಂದ ವಿನಯ್‌ ಗೌಡ!

ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ‘ಸರ್ಕಲ್‌ಗೆ ಎಷ್ಟು ಸೈಡ್ಸ್‌?’ ಎಂಬ ಪ್ರಶ್ನೆಗೆ ವಿನಯ್‌ ಗೌಡ ನೀಡಿದ್ದ ಉತ್ತರ ವೈರಲ್ ಆಗಿತ್ತು. ಟ್ರೋಲ್‌ಗಳ ಬೆನ್ನಲ್ಲೇ ಜೋರ್ಡನ್ ಕರ್ವ್ ಸಿದ್ಧಾಂತ ಉಲ್ಲೇಖಿಸಿ ನಟ ಸ್ಪಷ್ಟನೆ ನೀಡಿದ್ದಾರೆ.

Read Full Story
05:35 PM (IST) Aug 20

Karnataka News Live Viral - ಸತ್ತ ಸಂಬಂಧಿ ಕನಸಿನಲ್ಲಿ ಬಂದು ಮಾತನಾಡಿದ್ರೆ ಏನರ್ಥ? ಅದೃಷ್ಟದ ಸಂಕೇತನಾ ಅಥವಾ ಅಪಾಯದ ಎಚ್ಚರಿಕೆಯಾ?

ಕನಸಿನಲ್ಲಿ ಸತ್ತವರು ಕಾಣಿಸಿಕೊಂಡರೆ ಭಯಪಡುವುದು ಸಾಮಾನ್ಯ, ಆದರೆ ಇದು ಯಾವಾಗಲೂ ಅಶುಭ ಸಂಕೇತವಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕನಸುಗಳು ಜೀವನದಲ್ಲಿ ಬರಲಿರುವ ಬದಲಾವಣೆಗಳನ್ನು ಸೂಚಿಸುತ್ತವೆ. ಸತ್ತವರು ನಗುತ್ತಾ, ಅಳುತ್ತಾ ಅಥವಾ ಮಾತನಾಡುತ್ತಾ ಕಾಣಿಸಿಕೊಳ್ಳುವುದರ ಹಿಂದೆ ಬೇರೆ ಬೇರೆ ಅರ್ಥಗಳಿವೆ.

Read Full Story