12:25 AM (IST) Sep 19

karnataka news live:ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಬೆಂಗಳೂರಿನ ಯೋಗ ತರಬೇತುದಾರ ಬಂಧನ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ರಾಜರಾಜೇಶ್ವರಿನಗರದ ಯೋಗ ತರಬೇತುದಾರ ನಿರಂಜನ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಯೋಗ ಸ್ಪರ್ಧೆ ಹಾಗೂ ಉದ್ಯೋಗದ ಆಮಿಷವೊಡ್ಡಿ ಥೈಲ್ಯಾಂಡ್ ಹಾಗೂ ಬೆಂಗಳೂರಿನಲ್ಲಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

Read Full Story
12:02 AM (IST) Sep 19

karnataka news live:ರಾಯಚೂರು ಓಪೆಕ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕ್ಯಾನ್ಸರ್ ರೋಗಿ ದಾರುಣ ಸಾವು

ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ 35 ವರ್ಷದ ಕ್ಯಾನ್ಸರ್ ರೋಗಿ ಶ್ರೀನಿವಾಸ್ ಮೃತಪಟ್ಟಿದ್ದಾರೆ. ಸ್ಕ್ಯಾನಿಂಗ್‌ಗೆ ಕರೆದೊಯ್ಯುವಾಗ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದ್ದೇ ಸಾವಿಗೆ ಕಾರಣವೆಂದು ಆರೋಪಿಸಲಾಗಿದೆ.

Read Full Story
11:22 PM (IST) Sep 18

karnataka news live:ವಿಜಯಪುರದ ಸಿಂದಗಿಯಲ್ಲಿ ಒಂದೇ ದಿನ ಐದು ಬಾರಿ ಕಂಪಿಸಿದ ಭೂಮಿ, ಜನರಲ್ಲಿ ಆತಂಕ!

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಒಂದೇ ದಿನ ಐದು ಬಾರಿ ಭೂಕಂಪನ ಸಂಭವಿಸಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ್ದರಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. 

Read Full Story
10:59 PM (IST) Sep 18

karnataka news live:ಭಾರತದ ಮುಂದೆ ನಡುಬಗ್ಗಿಸಿದ ಅಮೆರಿಕ; ಪ್ರಧಾನಿ ಮೋದಿ ಭೇಟಿಗಾಗಿ ಕಾಯುತ್ತಿದ್ದಾರೆ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ಸುಂಕ ವಿಧಿಸಿದ ನಂತರ ತಮ್ಮ ನಿಲುವನ್ನು ಬದಲಾಯಿಸಿದ್ದು, ಪ್ರಧಾನಿ ಮೋದಿ ಜೊತೆಗಿನ ತಮ್ಮ ಸ್ನೇಹವನ್ನು ಶ್ಲಾಘಿಸಿದ್ದಾರೆ. ರಷ್ಯಾದಿಂದ ಭಾರತದ ತೈಲ ಖರೀದಿಯ ಬಗ್ಗೆ ಅಸಮಾಧಾನವಿದ್ದರೂ, ಮುಂಬರುವ ದಿನಗಳಲ್ಲಿ ಮೋದಿಯವರ ಬೇಟಿಗೆ ಎದುರು ನೋಡುತ್ತಿದ್ದಾರೆ.

Read Full Story
10:30 PM (IST) Sep 18

karnataka news live:ನೇಲ್ ಪಾಲಿಶ್ ಎಷ್ಟು ದಿನಕ್ಕೆ ತೆಗೆಯಬೇಕು? ತೆಗೆಯದಿದ್ರೆ ಏನಾಗುತ್ತೆ?

ಪ್ರತಿಯೊಬ್ಬ ಮಹಿಳೆಯೂ ನೇಲ್ ಪಾಲಿಶ್ ಹಚ್ಚಲು ಇಷ್ಟಪಡುತ್ತಾರೆ, ಆದರೆ ನಾವು ಅದನ್ನು ತೆಗೆಯಲು ಮರೆಯುತ್ತೇವೆ. ದೀರ್ಘಕಾಲ ಹಾಗೆಯೇ ಬಿಟ್ಟರೆ, ಅದು ಉಗುರುಗಳ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಹಾನಿ ಮಾಡುತ್ತದೆ. ನೇಲ್ ಪಾಲಿಶ್ ತೆಗೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ

Read Full Story
10:05 PM (IST) Sep 18

karnataka news live:ಪ್ರತಿದಿನ ಕೆಂಪು ಮಾಂಸ ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯ - ಹೊಸ ಸಂಶೋಧನೆ ವರದಿ ಎಚ್ಚರಿಕೆ

ಕೆಂಪು ಮಾಂಸವು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದರೂ, ಅದರ ಅತಿಯಾದ ಸೇವನೆ, ವಿಶೇಷವಾಗಿ ಸಂಸ್ಕರಿಸಿದ ಮಾಂಸವು ಆರೋಗ್ಯಕ್ಕೆ ಹಾನಿಕಾರಕ. ಇತ್ತೀಚಿನ ಸಂಶೋಧನೆಗಳು ಇದು ಹೃದಯ ಕಾಯಿಲೆ, ಟೈಪ್ 2 ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಅಪಾಯಗಳನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿವೆ.
Read Full Story
10:04 PM (IST) Sep 18

karnataka news live:ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಹತ್ಯೆಯಲ್ಲಿ ಇಸ್ರೇಲ್‌ ಕೈವಾಡ ಆರೋಪ, ಪ್ರಧಾನಿ ನೆತನ್ಯಾಹು ಕೆಂಡಾಮಂಡಲ

ಅಮೆರಿಕದ ಕಾರ್ಯಕರ್ತ ಚಾರ್ಲಿ ಕಿರ್ಕ್ ಹತ್ಯೆಯಲ್ಲಿ ಇಸ್ರೇಲ್ ಪಾತ್ರವಿದೆ ಎಂಬ ಆರೋಪವನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು "ದೈತ್ಯಾಕಾರದ ದೊಡ್ಡ ಸುಳ್ಳು" ಎಂದು ಹೇಳಿದ ಅವರು, ಕಿರ್ಕ್ ಇಸ್ರೇಲ್‌ನ ಸಮರ್ಪಿತ ಬೆಂಬಲಿಗ ಎಂದು ಶ್ಲಾಘಿಸಿದರು.

Read Full Story
09:38 PM (IST) Sep 18

karnataka news live:ಟಾಟಾ ಕಂಪೆನಿಯ ಅದೃಷ್ಟ ಬದಲಿಸಿದ ಐಫೋನ್, ಲಾಭದಲ್ಲಿ ಭಾರೀ ಏರಿಕೆ! ಚೀನಾಗೆ ಟಕ್ಕರ್

ಆಪಲ್‌ನ ಐಫೋನ್ ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಿದ ನಂತರ, ಟಾಟಾ ಎಲೆಕ್ಟ್ರಾನಿಕ್ಸ್ ಪ್ರಮುಖ ಪಾಲುದಾರನಾಗಿ ಹೊರಹೊಮ್ಮಿದೆ. ಈ ಬೆಳವಣಿಗೆಯಿಂದ ಕಂಪನಿಯ ಆದಾಯ ಮತ್ತು ಲಾಭದಲ್ಲಿ ಭಾರೀ ಏರಿಕೆಯಾಗಿದ್ದು, ಸ್ಥಾವರಗಳ ಖರೀದಿಯು ಅದರ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

Read Full Story
09:34 PM (IST) Sep 18

karnataka news live:ಗದಗ - ಹರ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ, ಕಾರ್-ಬಸ್ ಡಿಕ್ಕಿಯಲ್ಲಿ ಮೂವರು ಸಾವು

ಗದಗ ಜಿಲ್ಲೆಯ ಹರ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಗೋವಾ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
Read Full Story
09:14 PM (IST) Sep 18

karnataka news live:ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೇಂಜ್ ಅಲರ್ಟ್, ಭಾರಿ ಮಳೆ ಮುನ್ಸೂಚನೆ

ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೇಂಜ್ ಅಲರ್ಟ್, ಭಾರಿ ಮಳೆ ಮುನ್ಸೂಚನೆ, ಇಂದು ಸಂಜೆ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದೆ. ಇದೀಗ ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಮುನ್ಸೂಚನೆ ನೀಡಿದೆ.

Read Full Story
08:37 PM (IST) Sep 18

karnataka news live:ಕಲಬುರಗಿ - ಕನ್ನಡ ತೆಗೆದು ಉರ್ದು ನಾಮಫಲಕ ಹಾಕಿದ್ದನ್ನ ಖಂಡಿಸಿ ಅಧಿಕಾರಿಗಳ ಮುಖಕ್ಕೆ ಮಸಿ ಬಳಿದ ಕರವೇ

ಕನ್ನಡ ಭಾಷೆಗೆ ಅವಮಾನ ಮಾಡಿರುವುದನ್ನ ಖಂಡಿಸಿ ಕರವೇ ಕಾರ್ಯಕರ್ತರು ಅಧಿಕಾರಿಗಳ ಮುಖಕ್ಕೆ ಮಸಿ ಬಳಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Read Full Story
08:05 PM (IST) Sep 18

karnataka news live:24, 22 ಅಥವಾ 18 ಕ್ಯಾರೆಟ್ ಚಿನ್ನ - ಯಾವುದು ಖರೀದಿಗೆ ಉತ್ತಮ, ಯಾವುದು ಹೆಚ್ಚು ಕಲಬೆರಕೆ?

ಈ ಲೇಖನವು 24, 22, ಮತ್ತು 18 ಕ್ಯಾರೆಟ್ ಚಿನ್ನದ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರಿಸುತ್ತದೆ. ಚಿನ್ನದ ಶುದ್ಧತೆ, ಬಾಳಿಕೆ, ಮತ್ತು ಬಳಕೆಯ ಆಧಾರದ ಮೇಲೆ ಹೂಡಿಕೆಗೆ ಯಾವುದು ಉತ್ತಮ ಮತ್ತು ಆಭರಣಗಳಿಗೆ ಯಾವುದು ಸೂಕ್ತ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.
Read Full Story
07:39 PM (IST) Sep 18

karnataka news live:ಅ. 1 ರಿಂದ ಬೆಂಗಳೂರಿನ ಟ್ರಾಫಿಕ್ ಡಬಲ್, ಎಲ್ಲಾ ಕಂಪನಿಗಳ ಹೈಬ್ರಿಡ್, ವರ್ಕ್ ಫ್ರಮ್ ಹೋಮ್ ಅಂತ್ಯ

ಅ. 1 ರಿಂದ ಬೆಂಗಳೂರಿನ ಟ್ರಾಫಿಕ್ ಡಬಲ್, ಎಲ್ಲಾ ಕಂಪನಿಗಳ ಹೈಬ್ರಿಡ್, ವರ್ಕ್ ಫ್ರಮ್ ಹೋಮ್ ಅಂತ್ಯವಾಗುತ್ತಿದೆ. ರಸ್ತೆಯಲ್ಲೇ ಹೆಚ್ಚಿನ ಸಮಯ ಕಳೆಯಬೇಕಿದೆ. ಕಾರಣ ಬೆಂಗಳೂರಿನ ಎಲ್ಲಾ ಕಂಪನಿಗಳು ಅಕ್ಟೋಬರ್ 1 ರಿಂದ ಕಚೇರಿಯಿಂದ ಕೆಲಸ ಕಡ್ಡಾಯ ಮಾಡಿದೆ.

Read Full Story
07:28 PM (IST) Sep 18

karnataka news live:ಬಿರಿಯಾನಿಯಲ್ಲಿ ಚಿಕನ್ ಪೀಸ್ ಸಿಗದ್ದಕ್ಕೆ ಟ್ರಾಫಿಕ್ ಹೋಂ ಗಾರ್ಡ್‌ಗಳಿಬ್ಬರು ಮಾರಮಾರಿ!

ಚಿಕನ್ ಬಿರಿಯಾನಿಯಲ್ಲಿ ಚಿಕನ್ ಸಿಗದಿದ್ದಕ್ಕೆ ಹೊಡೆದಾಟ. ಕೊಚ್ಚಿಯ ಪಲ್ಲೂರುತಿ ಟ್ರಾಫಿಕ್ ಸ್ಟೇಷನ್‌ನಲ್ಲಿ ಈ ಘಟನೆ ನಡೆದಿದೆ. ಬೀಳ್ಕೊಡುಗೆ ಸಮಾರಂಭದ ವೇಳೆ ಟ್ರಾಫಿಕ್ ಹೋಂ ಗಾರ್ಡ್‌ಗಳ ನಡುವೆ ಜಗಳವಾಗಿದೆ.

Read Full Story
07:04 PM (IST) Sep 18

karnataka news live:ಕನ್ನಡ ಹೊರತಾಗಿ ಬೇರೆ ಭಾಷೆಯಲ್ಲಿ ಶ್ರುತಿ ನಟಿಸಿದ ಚಿತ್ರಗಳು - ಇಲ್ಲಿದೆ ಪಟ್ಟಿ!

films in other languages by actress Shruthi ಸ್ಯಾಂಡಲ್‌ವುಡ್ ನಟಿ ಶ್ರುತಿ ತಮ್ಮ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 'ಶ್ರುತಿ' ಚಿತ್ರದಿಂದ ಖ್ಯಾತಿ ಪಡೆದ ಅವರು, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂನ ತಲಾ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ.

Read Full Story
07:04 PM (IST) Sep 18

karnataka news live:ಸೌದಿ-ಪಾಕ್ ರಕ್ಷಣಾ ಒಪ್ಪಂದದ ತೆರೆಮರೆಯ ರಹಸ್ಯವೇನು? ಭಾರತದಲ್ಲಿ ಸೌದಿ ಮಾಡಿರೋ ಹೂಡಿಕೆ ಏನಾಗಲಿದೆ?

ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವಿನ ಹೊಸ ರಕ್ಷಣಾ ಒಪ್ಪಂದವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಒಪ್ಪಂದ ಇಸ್ರೇಲ್‌ಗೆ ಎಚ್ಚರಿಕೆ ಎಂದು ವಿಶ್ಲೇಷಿಸಲಾಗುತ್ತಿದೆಯಾದರೂ, ಇದೇ ವೇಳೆ ಭಾರತದಲ್ಲಿ ಸೌದಿ ಅರೇಬಿಯಾ ಬೃಹತ್ ಹೂಡಿಕೆ ಘೋಷಿಸಿರುವುದು ಹೊಸ ಸವಾಲುಗಳನ್ನು ಒಡ್ಡಿದೆ.

Read Full Story
07:01 PM (IST) Sep 18

karnataka news live:ಬೈಕ್ ಓವರ್‌ಟೇಕ್ ಗಲಾಟೆ - ಚಾಕು ಚುಚ್ಚಿಸಿಕೊಂಡ ಯುವಕ ನರಳುತ್ತಿದ್ದರೂ, ಗ್ಲಾಸ್ ಹಾಕಿ ಶೋಕಿ ಮಾಡಿದ ಶೇಖ್!

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬೈಕ್ ಓವರ್‌ಟೇಕ್ ಮಾಡುವ ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಯುವಕರ ನಡುವೆ ಜಗಳ ನಡೆದು, ಓರ್ವ ಯುವಕ ಮತ್ತೊಬ್ಬನಿಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
Read Full Story
06:44 PM (IST) Sep 18

karnataka news live:ಕಾಂಗ್ರೆಸ್ಸೇ ನಿಜವಾದ ಮತ ಚೋರಿ - ರಾಹುಲ್‌ ಗಾಂಧಿ ಮಾಲೂರು ಬಗ್ಗೆ ಮಾತನಾಡಲಿ ಎಂದ ಪ್ರಲ್ಹಾದ ಜೋಶಿ

ʼವೋಟ್‌ ಚೋರಿʼ ಎಂದು ಆರೋಪಿಸುವ ರಾಹುಲ್‌ ಗಾಂಧಿ, ಕರ್ನಾಟಕದ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕತ್ವವನ್ನು ಹೈಕೋರ್ಟ್‌ ಅನರ್ಹಗೊಳಿಸಿದ್ದರ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ. ಇವಿಎಂ ದೋಷಾರೋಪ ಮಾಡುವ ಕಾಂಗ್ರೆಸ್ಸೇ ನಿಜವಾದ ʼಮತ ಚೋರಿʼ ಪಕ್ಷ ಎಂದಿದ್ದಾರೆ.

Read Full Story
06:25 PM (IST) Sep 18

karnataka news live:ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಬರ್ತ್‌ಡೇ ಸಂಭ್ರಮದಲ್ಲಿ ಪಾಲ್ಗೊಂಡ 'ದೊಡ್ಮನೆ ದೊಡ್ಮಗ.!

ಶಿವಣ್ಣ ಹಾಗೂ ಗೀತಾ ದಂಪತಿ ಇಂದು ನಟ, ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಖುಷಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಸಾಕಷ್ಟು ವೈರಲ್ ಆಗುತ್ತಿದೆ. ಶಿವಣ್ಣ-ಗೀತಾ ದಂಪತಿ ಇಂದು ನಟ ವಿಷ್ಣುವರ್ಧನ್ ಬರ್ತ್‌ಡೇ ಸೆಲೆಬ್ರೇಶನ್‌ನಲ್ಲಿ..

Read Full Story
06:22 PM (IST) Sep 18

karnataka news live:ಬೆಂಗಳೂರು ಖಾಸಗಿ ಕಾಲೇಜಿನ ಜೂನಿಯರ್ಸ್ vs ಸೀನಿಯರ್ಸ್ ಫೈಟ್ - ನಿಮ್ಮ ಮಕ್ಕಳಿದ್ದಾರಾ ಒಮ್ಮೆ ನೋಡಿ!

ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಓಣಂ ಹಬ್ಬದ ನಂತರ ಕೇರಳ ಮೂಲದ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳ ನಡುವೆ ಬೀದಿ ಕಾಳಗ ನಡೆದಿದೆ. ಇದರಲ್ಲಿ ನಿಮ್ಮ ಮಕ್ಕಳೂ ಇದ್ದಾರಾ ಒಮ್ಮೆ ನೋಡಿ..

Read Full Story