ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗೆ ಇರುವ 1.20 ಲಕ್ಷ ರೂ. ವಾರ್ಷಿಕ ಆದಾಯ ಮಿತಿಯನ್ನು ಬದಲಾಯಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಈ ನಿಯಮದಿಂದ ಕೂಲಿ ಕಾರ್ಮಿಕರೂ ಅನರ್ಹರಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
- Home
- News
- State
- State News Live: ಬಿಪಿಎಲ್ ಕಾರ್ಡ್ ಆದಾಯ ಮಿತಿ 1.80 ಲಕ್ಷಕ್ಕೆ ಏರಿಕೆ? ಸಚಿವ ಮುನಿಯಪ್ಪ ಕೊಟ್ಟ ಬಿಗ್ ಅಪ್ಡೇಟ್ ಏನು?
State News Live: ಬಿಪಿಎಲ್ ಕಾರ್ಡ್ ಆದಾಯ ಮಿತಿ 1.80 ಲಕ್ಷಕ್ಕೆ ಏರಿಕೆ? ಸಚಿವ ಮುನಿಯಪ್ಪ ಕೊಟ್ಟ ಬಿಗ್ ಅಪ್ಡೇಟ್ ಏನು?

ಬೆಂಗಳೂರು (ಡಿ.19): ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರಸರಣ, ಪ್ರಕಟಣೆ ಅಥವಾ ಪ್ರಚಾರ, ದ್ವೇಷ ಹರಡಿಸುವಿಕೆಗೆ ಕಡಿವಾಣ ಹಾಕಲು ಮತ್ತು ಅಂಥ ಅಪರಾಧಗಳನ್ನು ಎಸಗುವ ವ್ಯಕ್ತಿ, ವ್ಯಕ್ತಿಗಳು, ಸಂಘಟನೆಯವರನ್ನು ಶಿಕ್ಷೆಗೆ ಒಳಪಡಿಸುವ ಉದ್ದೇಶದಿಂದ ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ-2025’ ಅಂಗೀಕಾರ ಮಾಡಲಾಗಿದೆ. ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್ ಮಾಡಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 19th December: ಬಿಪಿಎಲ್ ಕಾರ್ಡ್ ಆದಾಯ ಮಿತಿ 1.80 ಲಕ್ಷಕ್ಕೆ ಏರಿಕೆ? ಸಚಿವ ಮುನಿಯಪ್ಪ ಕೊಟ್ಟ ಬಿಗ್ ಅಪ್ಡೇಟ್ ಏನು?
Karnataka News Live 19th December: ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿ ಕೆನ್ನೆಗೆ ಬಾರಿಸಿದ ಸೆಂಟ್ ಜೋಸೆಫ್ ಶಾಲೆ ಪ್ರಿನ್ಸಿಪಾಲ್!
ಚಿಕ್ಕಮಗಳೂರಿನ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದ 7ನೇ ತರಗತಿ ವಿದ್ಯಾರ್ಥಿಗೆ ಪ್ರಿನ್ಸಿಪಾಲ್ ಹಲ್ಲೆ ನಡೆಸಿ, ಶಬರಿಮಲೆ ಯಾತ್ರೆಗೆ ರಜೆ ನಿರಾಕರಿಸಿದ್ದಾರೆ. ಈ ಘಟನೆಯು ಹಿಂದೂ ಸಂಘಟನೆಗಳ ತೀವ್ರ ಪ್ರತಿಭಟನೆ ಮಾಡಿದ್ದಾರೆ.
Karnataka News Live 19th December: ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆಗೆ ಕರವೇ ಕೆಂಡ; ನಾರಾಯಣ ಗೌಡರ ಹೋರಾಟಕ್ಕೆ ಮಣಿದು ಹೊಸ ಅಧಿಸೂಚನೆ ಹೊರಡಿಸಿದ ಇಲಾಖೆ!
ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಭಾಷಾ ತಾರತಮ್ಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಿದೆ. ಕರವೇ ಒತ್ತಡಕ್ಕೆ ಮಣಿದು ಬೆಂಗಳೂರು ವಿಭಾಗದ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ರೈಲ್ವೆ ಇಲಾಖೆ ಒಪ್ಪಿದೆ.
Karnataka News Live 19th December: ನಿರುದ್ಯೋಗದ ಭೀತಿ,ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಕಂಪ್ಯೂಟರ್ ಸೈನ್ಸ್ ಸೀಟ್‌ಗಳಿಗೆ ಇನ್ನು ಮಿತಿ!
ಕರ್ನಾಟಕದಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಸೀಟುಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ನಿರುದ್ಯೋಗ ಸಮಸ್ಯೆಯನ್ನು ತಡೆಯಲು, ರಾಜ್ಯ ಸರ್ಕಾರವು ಸೀಟುಗಳ ಸಂಖ್ಯೆಯನ್ನು ಮಿತಿಗೊಳಿಸಲು ಯೋಜಿಸುತ್ತಿದೆ.
Karnataka News Live 19th December: ಬೆಂಗಳೂರು ವಿವಿ ಫಲಿತಾಂಶ - ಫೇಲಾಗಿದ್ದ 400 ವಿದ್ಯಾರ್ಥಿಗಳೂ ಪಾಸ್!
400 Failed Students Pass in Bangalore University ಬೆಂಗಳೂರು ವಿವಿ ಎಂ.ಕಾಂ. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಫಲಿತಾಂಶ ಯುಯುಸಿಎಂಎಸ್ ತಂತ್ರಾಂಶದ ತಾಂತ್ರಿಕ ದೋಷದಿಂದ ಲೋಪವಾಗಿತ್ತು. ಈ ತಪ್ಪನ್ನು ಸರಿಪಡಿಸಿ, ಪರಿಷ್ಕೃತ ಫಲಿತಾಂಶ ಪ್ರಕಟಿಸಲಾಗಿದೆ ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.
Karnataka News Live 19th December: 4 ಲಕ್ಷ ಬೆಲೆ ಬಾಳುವ ಸೆ*ಕ್ಸ್ ಡಾಲ್ಸ್ ಮಾರಾಟ - ಕರ್ನಾಟಕ ನಂ.1 - ಅಂಥದ್ದೇನಿದೆ? ಮಾಲೀಕರೇ ಹೇಳಿದ್ದಾರೆ ನೋಡಿ!
ಒಂಟಿತನ ನೀಗಿಸಿಕೊಳ್ಳಲು ಪುರುಷರು ದುಬಾರಿ ಸೆ*ಕ್ಸ್ ಡಾಲ್ಸ್ ಮೊರೆ ಹೋಗುತ್ತಿದ್ದು, ಭಾರತದಲ್ಲಿ ಇದರ ಮಾರುಕಟ್ಟೆ ಬೆಳೆಯುತ್ತಿದೆ. ಅದರಲ್ಲೂ ಕರ್ನಾಟಕದ ಪುರುಷರು ನಾಲ್ಕು ಲಕ್ಷ ರೂಪಾಯಿವರೆಗಿನ, ಥೇಟ್ ಹೆಣ್ಣನ್ನೇ ಹೋಲುವ ಗೊಂಬೆ ಖರೀದಿಯಲ್ಲಿ ಮುಂದಿದ್ದಾರೆ ಎಂದು ತಯಾರಕರೊಬ್ಬರು ಬಹಿರಂಗಪಡಿಸಿದ್ದಾರೆ.
Karnataka News Live 19th December: ಸಿಎಂ ಗದ್ದುಗೆಗಾಗಿ ಡಿಕೆಶಿ ರಹಸ್ಯ ಪೂಜೆ, ಆಂದ್ಲೆ ಜಗದೀಶ್ವರಿ ಸನ್ನಿಧಿಯಲ್ಲಿ 'ಹಿಂಗಾರ ಪ್ರಸಾದ'ಕ್ಕೆ ಮೊರೆ! ಗೋಕರ್ಣ ಆತ್ಮಲಿಂಗಕ್ಕೆ ಪಂಚಾಮೃತ ಅಭಿಷೇಕ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗೋಕರ್ಣ ಹಾಗೂ ಅಂಕೋಲಾದ ಆಂದ್ಲೆ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿ ಹುದ್ದೆಯ ಕನಸು ಹಾಗೂ ರಾಜಕೀಯ ಸಮಸ್ಯೆಗಳ ಪರಿಹಾರಕ್ಕಾಗಿ ಆಂದ್ಲೆ ಜಗದೀಶ್ವರಿ ಸನ್ನಿಧಿಯಲ್ಲಿ 'ಹಿಂಗಾರ ಪ್ರಸಾದ'ದ ಮೂಲಕ ಭವಿಷ್ಯದ ಅಪ್ಪಣೆ ಕೇಳಿದ್ದಾರೆ.
Karnataka News Live 19th December: ಸೆಟ್‌ನಲ್ಲಿ ವಾಟರ್ ಬ್ಯಾಗ್ ಒಡೀತು, ಜ್ಯೋತಿಷಿ ಹೇಳಿದಂತೆ ಖ್ಯಾತ ಹಾಸ್ಯನಟಿಗೆ ಮಗು ಜನನ; 3ನೇಯದಕ್ಕೆ ಪ್ಲ್ಯಾನ್
Bharti Singh Welcome Second Baby Boy: ಕಪಿಲ್ ಶರ್ಮಾ ಶೋ ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋ, ಅವಾರ್ಡ್ ಫಂಕ್ಷನ್‌ಗಳಿಗೆ ನಿರೂಪಣೆ ಮಾಡಿದ್ದ ನಟಿ, ನಿರೂಪಕಿ ಭಾರತಿ ಸಿಂಗ್ ಅವರು ಎರಡನೇ ಬಾರಿಗೆ ತಾಯಿಯಾಗಿದ್ದಾರೆ. ಇವರ ಮನೆಯಲ್ಲಿ ಖುಷಿ ಮನೆ ಮಾಡಿದೆ.
Karnataka News Live 19th December: ಬೈರತಿ ಬಸವರಾಜ್‌ಗೆ ಬಂಧನದ ಭೀತಿ; ಬಿಕ್ಲುಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್!
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್‌ಗೆ ಹಿನ್ನಡೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಸೂಚನೆ ನೀಡಲಾಗಿದೆ.
Karnataka News Live 19th December: ಹೊಸಪೇಟೆ - ಮಗನ ಜೊತೆಗೆ ಜಗಳವಾಡ್ತಿದ್ದ ಯುವಕರು ಗುಂಪು, ಬಿಡಿಸಲು ಹೋದ ತಂದೆಯನ್ನೇ ಕೊಲೆಗೈದ ಗ್ಯಾಂಗ್!
Karnataka News Live 19th December: BBK 12 - ಬೇರೆಯವರಿಗೆ ಕೇಡು ಬಯಸಿದ ರಕ್ಷಿತಾ ಶೆಟ್ಟಿಗೆ ಮುಖಭಂಗ; ಮುಖಮುಚ್ಚಿ ಕೂತ ಗಿಲ್ಲಿ ವಂಶದ ಕುಡಿ
Bigg Boss Kannada 12 Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ವ್ಯಕ್ತಿತ್ವ ಹೇಗೆ ಎಂದು ವೀಕ್ಷಕರಿಗೆ ಗೊತ್ತಾಗುತ್ತಲಿದೆ. ಬೇರೆಯವರಿಗೆ ಕೆಟ್ಟದ್ದು ಬಯಸಿದ್ದರೆ ಕೆಟ್ಟದ್ದೇ ಆಗುವುದು ಎನ್ನೋದು ಮತ್ತೆ ಸಾಬೀತಾಗಿದೆ. ಹಾಗಾದರೆ ಏನಾಯ್ತು?
Karnataka News Live 19th December: 'ಅಕ್ಕಾ ಅಕ್ಕಾ ಎಲ್ಲಿದೆ ರೊಕ್ಕಾ?' ಗೃಹಲಕ್ಷ್ಮಿ ಹಣ ವಿಳಂಬ,ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬೆಳಗಾವಿ ಬಿಜೆಪಿ ಪ್ರತಿಭಟನೆ
ರಾಜ್ಯ ಸರ್ಕಾರದ 'ಗೃಹಲಕ್ಷ್ಮೀ' ಯೋಜನೆಯ ಎರಡು ತಿಂಗಳ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಬಿಜೆಪಿ ಮಹಿಳಾ ಘಟಕ ಬೃಹತ್ ಪ್ರತಿಭಟನೆ ನಡೆಸಿತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಭಟನಿರತರು, ಹಣ ಬಿಡುಗಡೆಯಾಗದಿದ್ದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದರು.
Karnataka News Live 19th December: ಆಟವಾಡುತ್ತಿದ್ದ ಮಗುವನ್ನು ಫುಟ್ಬಾಲ್‌ನಂತೆ ಒದ್ದ ಜಿಮ್ ಟ್ರೈನರ್; ಮಾರುದ್ದ ಹಾರಿಬಿದ್ದ ಮಗು!
ಬೆಂಗಳೂರಿನ ತ್ಯಾಗರಾಜ ನಗರದಲ್ಲಿ, ಜಿಮ್ ಟ್ರೈನರ್ ರಂಜನ್ ಆಟವಾಡುತ್ತಿದ್ದ ಬಾಲಕನಿಗೆ ಅಮಾನವೀಯವಾಗಿ ಒದ್ದು ವಿಕೃತಿ ಮೆರೆದಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯ ಆರೋಪಿ ಈ ಹಿಂದೆಯೂ ಹಲವು ಮಕ್ಕಳ ಮೇಲೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
Karnataka News Live 19th December: ಕೋಲಾರ - ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
Karnataka News Live 19th December: ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ - ಶ್ರೀ ಶ್ರೀ ರವಿಶಂಕರ್ ಗುರೂಜಿ
ಜಿನೀವಾದ ವಿಶ್ವಸಂಸ್ಥೆಯಲ್ಲಿ ನಡೆದ ವಿಶ್ವ ಧ್ಯಾನ ದಿನದ ಕಾರ್ಯಕ್ರಮದಲ್ಲಿ, ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಧ್ಯಾನದ ಮಹತ್ವವನ್ನು ಒತ್ತಿ ಹೇಳಿದರು. ಜಾಗತಿಕ ಸಂಘರ್ಷಗಳ ಈ ಕಾಲದಲ್ಲಿ, ಧ್ಯಾನವು ವೈಯಕ್ತಿಕ ಶಾಂತಿಯ ಜೊತೆಗೆ ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು
Karnataka News Live 19th December: Lakshmi Nivasa Serial - ದುಡ್ಡೇ ದೊಡ್ಡಪ್ಪ, ತಂಗಿ ಜೀವನ ಬಲಿ ಕೊಟ್ಟ; ಇಂಥ ಅಣ್ಣ-ತಮ್ಮ ಸಾಯೋದು ಬೆಸ್ಟ್!
Lakshmi Nivasa Serial Episode: ಆಸ್ತಿಗೋಸ್ಕರ ಇಂದು ಸಮಾಜದಲ್ಲಿ ಅಣ್ಣ-ತಮ್ಮ, ಅಕ್ಕ-ತಂಗಿ ಎಂದು ಹೊಡೆದಾಟ ಮಾಡುವುದನ್ನು ನೋಡುತ್ತೇವೆ. ಅಣ್ಣ ನಮ್ಮನವಾದರೂ ಕೂಡ, ಅತ್ತಿಗೆ ನಮ್ಮವಳಾ ಎಂಬ ಗಾದೆ ಇದೆ. ಆದರೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಈ ಗಾದೆಯನ್ನು ಉಲ್ಟಾ ಮಾಡಬೇಕಿದೆ.
Karnataka News Live 19th December: ರಾಯಚೂರು - ಮಧ್ಯರಾತ್ರಿ ಬೀದಿಬದಿ ವ್ಯಾಪಾರಿಯ ಭೀಕರ ಹತ್ಯೆ! ಸಾಲವೋ?ಹಳೆಯ ದ್ವೇಷವೋ?
ರಾಯಚೂರಿನಲ್ಲಿ ಬೀದಿಬದಿ ಡ್ರೈ ಫ್ರೂಟ್ಸ್ ವ್ಯಾಪಾರಿ ಇಮಾಮ್ ಹುಸೇನ್‌ನನ್ನು ನಾಲ್ವರು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆರೋಪಿಗಳು ಪರಾರಿಯಾಗುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
Karnataka News Live 19th December: Bengaluru - ಮನೆ ಬಳಿ ಆಟವಾಡ್ತಿದ್ದ ಬಾಲಕನಿಗೆ ಅಮಾನುಷವಾಗಿ ಕಾಲಿನಿಂದ ಒದ್ದ ಪಾಪಿ!
Karnataka News Live 19th December: ಅಬ್ಬರವಿಲ್ಲ, ಹೈಪ್ ಇಲ್ಲ, ಮನಸ್ಸಿನಲ್ಲಿ ಕ್ರಾಂತಿ ಮಾಡಿ ಕಾಡುವ ಕನ್ನಡದ ಸೀರಿಯಲ್‌ಗಳಿವು!
ಕೆಲ ಧಾರಾವಾಹಿಗಳು TRP ಲೆಕ್ಕಾಚಾರಕ್ಕೂ ಮೀರಿದ ಕಥೆಗಳಾಗಿರುತ್ತವೆ. ಎಷ್ಟೋ ಸೂಕ್ಷ್ಮ ಕತೆಗಳು ಬಂದಿದ್ದು, ಅವೆಲ್ಲವೂ TRP ಲೆಕ್ಕಾಚಾರದಲ್ಲಿ ಗೆದ್ದಿಲ್ಲ, ಕಥೆ ನಿರೂಪಣೆ, ಸಂಭಾಷಣೆ, ಚಿತ್ರಕಥೆಯಲ್ಲಿ ಜನರ ಮನಸ್ಸಿನಲ್ಲಿ ಹಾಗೆ ಉಳಿದುಕೊಂಡಿವೆ. ಕಂಟೆಂಟ್ ವಿಚಾರದಲ್ಲಿ ಭೇಷ್ ಎನಿಸಿಕೊಂಡ ಸೀರಿಯಲ್‌ಗಳಿವು
Karnataka News Live 19th December: ಸದನದಲ್ಲಿ ಸಿದ್ದು vs ಬೆಲ್ಲದ್ ಒಳಮೀಸಲು ಹೆಚ್ಚಳ ಜಟಾಪಟಿ! ಯತ್ನಾಳ್‌ಗೆ ಸಿಎಂ ಸಂವಿಧಾನ ಪಾಠ
Arvind Bellad vs Siddaramaiah :ಪರಿಶಿಷ್ಟರ ಮೀಸಲಾತಿ ಹೆಚ್ಚಳವನ್ನು ತಾವು ವಿರೋಧಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಸ್ಪಷ್ಟಪಡಿಸಿದರು. ಬಿಜೆಪಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದರು ಎಂಬ ಅರವಿಂದ ಬೆಲ್ಲದ್ ಆರೋಪಕ್ಕೆ ತಿರುಗೇಟು ನೀಡಿದರು.