ಗದಗ ಜಿಲ್ಲೆಯ ಹರ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಗೋವಾ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಗದಗ (ಸೆ.18): ಕಾರು ಒಂದು ನಿಯಂತ್ರಣ ತಪ್ಪಿ ಡಿವೈಡರ್ ಆಚೆಗೆ ಚಲಿಸುತ್ತಿದ್ದ ಗೋವಾ ಸಾರಿಗೆ ಬಸ್‌ಗೆ ಡಿಕ್ಕಿಯಾಗಿ ಮೂವರು ದುರ್ಮರಣಕ್ಕೀಡಾದ ಘಟನೆ ಗದಗ ಜಿಲ್ಲೆಯ ಹರ್ಲಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ವೇಳೆ ಕಾರಿನಲ್ಲಿದ್ದ ಅರ್ಜುನ್ ನೆಲ್ಲೂರು (29), ರವಿ ನೆಲ್ಲೂರು (40) ಮತ್ತು ಈರಣ್ಣ ಉಪ್ಪಾರ (32) ಮೃತಪಟ್ಟಿದ್ದಾರೆ. ಕೊಪ್ಪಳದಿಂದ ಗದಗ ಕಡೆಗೆ ಪ್ರಯಾಣಿಸುತ್ತಿದ್ದ ಕಾರು. ಮಾರ್ಗಮಧ್ಯೆ ನಿಯಂತ್ರಣ ತಪ್ಪಿ ಡಿವೈಡರ್ ಆಚೆಗೆ ಚಲಿಸುತ್ತಿದ್ದ ಪಣಜಿಯಿಂದ ಹೊಸಪೇಟೆ ಕಡೆಗೆ ತೆರಳುತ್ತಿದ್ದ ಗೋವಾ ಸಾರಿಗೆ ಬಸ್‌ಗೆ ಡಿಕ್ಕಿಯಾಗಿದೆ. ಗೋವಾ ಸಾರಿಗೆ ಬಸ್‌ಗೆ ಡಿಕ್ಕಿಯಾಗಿದೆ.
ಇದನ್ನೂ ಓದಿ: ಕಲಬುರಗಿ: ಕನ್ನಡ ತೆಗೆದು ಉರ್ದು ನಾಮಫಲಕ ಹಾಕಿದ್ದನ್ನ ಖಂಡಿಸಿ ಅಧಿಕಾರಿಗಳ ಮುಖಕ್ಕೆ ಮಸಿ ಬಳಿದ ಕರವೇ
ಅರ್ಜುನ್ ಮತ್ತು ಈರಣ್ಣ ಇಬ್ಬರು ಪೊಲೀಸ್ ಇಲಾಖೆಯ ವೈರ್‌ಲೆಸ್ ವಿಭಾಗದ ಸಿಬ್ಬಂದಿಯಾಗಿದ್ದರು. ಅರ್ಜುನ್ ಮತ್ತು ರವಿ, ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹುನಗುಂದ ಗ್ರಾಮದ ನಿವಾಸಿಗಳು. ಈರಣ್ಣ ಉಪ್ಪಾರ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ನಿವಾಸಿಯಾಗಿದ್ದ. ಈ ಪ್ರಕರಣ ಗದಗ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
