10:48 PM (IST) Sep 18

Karnataka News Live ಇದು ಹಗಲು ದರೋಡೆ ಅಲ್ಲದೇ ಮತ್ತೇನು? ಬೆಂಗಳೂರಿನ ಆಸ್ತಿ ಮಾಲೀಕರಿಂದ ಸಾಫ್ಟ್‌ವೇರ್‌ ಚಾರ್ಜ್‌ ವಸೂಲಿ ಮಾಡ್ತಿರುವ GBA

ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಆಸ್ತಿ ತೆರಿಗೆದಾರರಿಗೆ ಯಾವುದೇ ಮುನ್ಸೂಚನೆ ನೀಡದೆ ₹200 'ಸಾಫ್ಟ್‌ವೇರ್ ಶುಲ್ಕ'ವನ್ನು ಹೊಸದಾಗಿ ವಿಧಿಸಿದೆ. ಸರ್ಕಾರದ ಈ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಇದೊಂದು ಹಗಲು ದರೋಡೆ ಎಂದು ಆರೋಪಿಸಿವೆ.

Read Full Story
10:06 PM (IST) Sep 18

Karnataka News Live ಕ್ಷೇತ್ರ ಪುನರ್‌ವಿಂಗಡಣೆ ಹಿಂದುತ್ವವಾದಿಗಳ ಜನಸಂಖ್ಯೆ ಹೆಚ್ಚಳದ ಅಜೆಂಡಾಕ್ಕೆ ಪೂರಕ - ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿಳಿಮಲೆ

ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆಯಿಂದ ಜನಸಂಖ್ಯೆ ನಿಯಂತ್ರಿಸಿದ ಅಭಿವೃದ್ಧಿಶೀಲ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದ್ದಾರೆ.

Read Full Story
09:44 PM (IST) Sep 18

Karnataka News Live ಬೆಂಗಳೂರು–ಬಳ್ಳಾರಿ ನಡುವೆ KSRTC ಹೊಸ 'ಮಲ್ಟಿ ಆಕ್ಸಲ್' ಬಸ್ ಆರಂಭ - ಪ್ರಯಾಣ ದರ, ಸಮಯದ ವಿವರ ಇಲ್ಲಿದೆ

ಕೆಎಸ್‌ಆರ್‌ಟಿಸಿ ಬೆಂಗಳೂರು ಮತ್ತು ಬಳ್ಳಾರಿ ನಡುವೆ ನೂತನ ಮಲ್ಟಿ ಆಕ್ಸಲ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಅಲ್ಲದೆ, ಆಗಸ್ಟ್ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ 4,862 ಪ್ರಯಾಣಿಕರಿಂದ 8.90 ಲಕ್ಷ ರೂ. ದಂಡವನ್ನು ಸಂಗ್ರಹಿಸಿದೆ.
Read Full Story
09:40 PM (IST) Sep 18

Karnataka News Live ಹೇ ಧನಂಜಯ ಬಾರೋ ಇಲ್ಲಿಗೆ; ಮಸೀದಿ ಎದುರು ಇನ್ಸ್‌ಪೆಕ್ಟರ್‌ಗೆ ಏಕವಚನದಲ್ಲೇ ತರಾಟೆ ತಗೆದುಕೊಂಡ ಪ್ರತಾಪ್ ಸಿಂಹ!

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಸೀದಿಯೊಂದರ ಮುಂದೆ ಭಾಷಣ ಮಾಡುವಾಗ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ವಿರುದ್ಧ ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಂದಿನ ಒಂದೂವರೆ ವರ್ಷದಲ್ಲಿ ತಾವು ಅಧಿಕಾರಕ್ಕೆ ಬಂದಾಗ ಲೆಕ್ಕ ಚುಕ್ತಾ ಮಾಡುವುದಾಗಿ ಅವರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

Read Full Story
09:11 PM (IST) Sep 18

Karnataka News Live TTP Attack; ಪ್ರಾರ್ಥನೆ ವೇಳೆ ಭೀಕರ ಉಗ್ರರ ದಾಳಿ; ಕನಿಷ್ಠ 27 ಸಾವು, ಗಡಿಯಲ್ಲಿ ಹೈ ಅಲರ್ಟ್ ಘೋಷಣೆ!

ಪಖ್ತುಂಖ್ವಾ ಪ್ರಾಂತ್ಯದ ಪೊಲೀಸ್ ಪ್ರಧಾನ ಕಚೇರಿಯ ಮಸೀದಿಯಲ್ಲಿ ಉಗ್ರರು ಭೀಕರ ಆತ್ಮಘಾತಿ ದಾಳಿ ನಡೆಸಿದ್ದಾರೆ. ಈ ರಕ್ತಸಿಕ್ತ ಘಟನೆಯಲ್ಲಿ 15 ಪೊಲೀಸರು ಸೇರಿದಂತೆ 27 ಜನರು ಸಾವನ್ನಪ್ಪಿದ್ದು, 78ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ಟಿಟಿಪಿ (TTP) ಉಗ್ರ ಸಂಘಟನೆ ವಹಿಸಿಕೊಂಡಿದೆ.

Read Full Story
09:03 PM (IST) Sep 18

Karnataka News Live 'ಪರದೆಯ ಮೇಲೆ ಮಹಿಳೆಯರನ್ನು ನೈಜ ವ್ಯಕ್ತಿಗಳಾಗಿ ತೋರಿಸಬೇಕು' - ಅದಿತಿ ಸಾಗರ್ ಮನದ ಮಾತೇನು?

ಕನ್ನಡ ನಟಿ ಹಾಗೂ ಗಾಯಕಿ ಅದಿತಿ ಸಾಗರ್ ‘ಹೆಗ್ಗಣ ಮುದ್ದು’ ಡ್ರಾಮಾ ಥ್ರಿಲ್ಲರ್ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ನಟನೆ, ಸಂಗೀತ, ಚಿತ್ರಕಲೆ, ವಿಭಿನ್ನ ಪಾತ್ರಗಳ ಆಸೆ ಹಾಗೂ ಸಿನಿಮಾಗಳಲ್ಲಿನ ಮಹಿಳಾ ಪಾತ್ರಗಳ ಬಗ್ಗೆ ಅದಿತಿ ಸಾಗರ್ ಮನದ ಮಾತು ಹಂಚಿಕೊಂಡಿದ್ದಾರೆ.

Read Full Story
08:51 PM (IST) Sep 18

Karnataka News Live ‘ನನ್ನ ಮಗ ಯಾವಾಗ ಬರುತ್ತಾನೆ?..’ ಕತಾರ್‌ನಲ್ಲಿ ಬಂಧನದಲ್ಲಿರುವ ಮಾಜಿ ನೌಕಾಪಡೆ ಅಧಿಕಾರಿ, ಭಾರತ ಸರ್ಕಾರಕ್ಕೆ ತಾಯಿಯ ಕಣ್ಣೀರಿನ ಪ್ರಾರ್ಥನೆ!

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ 8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳ ಪೈಕಿ 7 ಮಂದಿ ಭಾರತಕ್ಕೆ ಮರಳಿದ್ದಾರೆ. ಆದರೆ ಕಮಾಂಡರ್ ಪೂರ್ಣೇಂದು ತಿವಾರಿ ಮಾತ್ರ ಇನ್ನೂ ದೋಹಾದಲ್ಲೇ ಉಳಿದಿದ್ದು, ಅವರ 88 ವರ್ಷದ ತಾಯಿ ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ.

Read Full Story
08:03 PM (IST) Sep 18

Karnataka News Live Exclusive - 'ಎಲ್ಲಾ ಭಾಷೆಯನ್ನೂ ನನ್ನದೇ ಎನ್ನುತ್ತೇನೆ' - ಬಹುಭಾಷಾ ಬಗ್ಗೆ ರಶ್ಮಿಕಾ ಓಪನ್ ಟಾಕ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಬಹುಭಾಷಾ ಸಿನಿಮಾ ಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ, ಭಾಷೆ ತಮ್ಮ ವೃತ್ತಿಜೀವನಕ್ಕೆ ಎಂದಿಗೂ ಅಡ್ಡಿಯಾಗಿಲ್ಲ ಎಂದು ಹೇಳಿದ್ದಾರೆ.

Read Full Story
07:48 PM (IST) Sep 18

Karnataka News Live 80's Trend - 'ಕದಿಯೋದು ಇನ್ನೇನಿದೆ' ಎಂದು ಫೋಟೋ ಹಾಕ್ತೀರಾ? ಬ್ಯಾಂಕ್​ ಖಾತೆ ಹುಷಾರ್- ರಾಜ್ಯದ ಜನತೆಗೆ ಖಡಕ್​ ವಾರ್ನಿಂಗ್​

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ 80's ಟ್ರೆಂಡ್‌ನಂತಹ ಫೋಟೋ ಆ್ಯಪ್‌ಗಳ ಬಗ್ಗೆ ರಾಜ್ಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಟ್ರೆಂಡ್‌ಗಳ ಮೂಲಕ ಮೂರನೇ ವ್ಯಕ್ತಿಗೆ ನಿಮ್ಮ ಫೋಟೋ ಹಂಚಿಕೊಳ್ಳುವುದರಿಂದ ಡೀಪ್‌ಫೇಕ್ ಅಶ್ಲೀಲ ವಿಡಿಯೋಗಳು ಸೃಷ್ಟಿಯಾಗುವ ಅಪಾಯವಿದೆ. ಅಲ್ಲದೆ, ಅಪರಿಚಿತ ಎಪಿಕೆ (APK) ಫೈಲ್ ಲಿಂಕ್ ಕ್ಲಿಕ್ ಮಾಡುವುದರಿಂದ ಬ್ಯಾಂಕ್ ಖಾತೆಯಲ್ಲಿರುವ ಹಣವೂ ಕಳ್ಳತನವಾಗಬಹುದು.
Read Full Story
07:38 PM (IST) Sep 18

Karnataka News Live ಸ್ಯಾಂಡಲ್‌ವುಡ್‌ಗೆ ಹೊಸ ನಾಯಕಿ ಎಂಟ್ರಿ - ಮೋನಿಷಾ ವಿಜಯ್ ಮೇಲೆ ಹೆಚ್ಚಾಯ್ತು ನಿರೀಕ್ಷೆ

ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಕುಮಾರ್ ‘ಸಿಟಿಲೈಟ್ಸ್’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಆಕ್ಷನ್ ಸಿನಿಮಾದಲ್ಲಿ ಮೋನಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Read Full Story
07:31 PM (IST) Sep 18

Karnataka News Live Viral - ಚಿನ್ನದಂತ ಹೆಂಡ್ತಿಗೆ, ಚಿನ್ನ ಮಾರಿ ಐಪೋನ್‌ 18 ಪ್ರೋ ಖರೀದಿ ಮಾಡಿದ ಗಂಡ!

ಭಾರತದಲ್ಲಿ ಆಪಲ್ ಐಫೋನ್ 18 ಪ್ರೋ ಬಿಡುಗಡೆಯಾಗಿದ್ದು, ಜನರ ಹುಚ್ಚಾಟ ಮಿತಿಮೀರಿದೆ. ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಈ ಫೋನ್ ಕೊಡಿಸಲು ಚಿನ್ನವನ್ನೇ ಮಾರಿದ್ದಾರೆ. ಪಂಜಾಬ್‌ನ ಯುವಕನೊಬ್ಬ ನಿಶ್ಚಿತಾರ್ಥಕ್ಕಾಗಿ 3.5 ಲಕ್ಷ ರೂ. ಖರ್ಚು ಮಾಡಿದ್ದು, ಬೆಲೆ ಏರಿಕೆಯ ನಡುವೆಯೂ ಐಫೋನ್ ಕ್ರೇಜ್ ಕಡಿಮೆಯಾಗಿಲ್ಲ.
Read Full Story
07:25 PM (IST) Sep 18

Karnataka News Live ದರ್ಶನ್​ ಮನವಿ ಪುರಸ್ಕರಿಸಿದ ಹೈಕೋರ್ಟ್​ - ನಟನಿಗೆ ತಾತ್ಕಾಲಿಕ ಬಿಗ್​ ರಿಲೀಫ್​- ನ್ಯಾಯಾಲಯ​ ಹೇಳಿದ್ದೇನು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಸಾಕ್ಷಿಗಳ ಪಾಟಿ ಸವಾಲಿನ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ದರ್ಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ಸೂಕ್ತ ಭದ್ರತೆಯೊಂದಿಗೆ ಅವರನ್ನು ಕರೆತರಲು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
Read Full Story
06:35 PM (IST) Sep 18

Karnataka News Live 3,536 ಕೋಟಿ ರೂಪಾಯಿ ವೆಚ್ಚದಲ್ಲಿ ಯಶವಂತಪುರ-ಕೆಆರ್‌ ಪುರ ನಡುವೆ 28 ಕಿ.ಮೀ ಟೋಲ್‌ ಕಾರಿಡಾರ್‌

ಬೆಂಗಳೂರಿನ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಬೆಸೆಯುವ 28 ಕಿ.ಮೀ ಉದ್ದದ 'ಯಶವಂತಪುರ - ಕೆ.ಆರ್. ಪುರಂ ಎಲಿವೇಟೆಡ್ ಕಾರಿಡಾರ್' ಯೋಜನೆಗೆ ರೂಪುರೇಷೆ ಸಿದ್ಧವಾಗಿದೆ. ₹3,536 ಕೋಟಿ ವೆಚ್ಚದ ಈ ಯೋಜನೆಗೆ ಗರಿಷ್ಠ 32.5 ವರ್ಷಗಳ ಟೋಲ್ ಅವಧಿ ನಿಗದಿಪಡಿಸಲಾಗಿದೆ.

Read Full Story
06:02 PM (IST) Sep 18

Karnataka News Live ಸಿನಿಮಾ ನಟನೆ ನಿಲ್ಲಿಸಿದ್ಯಾಕೆ ಅನಂತ್ ನಾಗ್? ಕೊನೆಗೂ ಸತ್ಯ ಬಿಚ್ಚಿಟ್ಟ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ!

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ನಟನೆ ನಿಲ್ಲಿಸಿಲ್ಲ ಎಂದು ಹೇಳಿರುವ ಅವರು..

Read Full Story
05:59 PM (IST) Sep 18

Karnataka News Live 25 ಸಾವಿರ ದುಡಿಯುತ್ತಿದ್ದ ಟ್ರಕ್‌ ಚಾಲಕ ಈಗ ಸ್ಟಾರ್‌ ಯೂಟ್ಯೂಬರ್, ಆತನ ಗಳಿಕೆ ಶೇಕಡಾ 7100 ರಷ್ಟು ಹೆಚ್ಚಾಗಿದೆ

ಇಲ್ಲೊಂದು ಸ್ಫೂರ್ತಿದಾಯಕ ಸ್ಟೋರಿ ಇದೆ. ಎಂಥವರನ್ನೂ ಬಡಿದೆಬ್ಬಿಸಬಹುದಾದ ಕತೆ. ಟ್ರಕ್‌ ಚಾಲಕನಾಗಿದ್ದ ವ್ಯಕ್ತಿಯೊಬ್ಬ ಇವತ್ತು ಸ್ಟಾರ್‌ ಯೂಟ್ಯೂಬರ್‌ ಆಗಿದ್ದಾರೆ. ಆತನ ಆದಾಯ ಕೇಳಿದ್ರೆ ತಲೆ ತಿರುಗಿ ಬೀಳ್ತೀರಿ..

Read Full Story
05:19 PM (IST) Sep 18

Karnataka News Live ಶ್ರದ್ಧಾ ಶ್ರೀನಾಥ್ ಅವರ ಈ ಲುಕ್ ನೋಡಿದ್ರಾ? ಬ್ಲ್ಯಾಕ್ ಸೀರೆಯಲ್ಲಿ ನಟಿಯ ಅವತಾರವೇ ಬೇರೆ!

ಕನ್ನಡದ ಜನಪ್ರಿಯ ನಟಿ ಶ್ರದ್ಧಾ ಶ್ರೀನಾಥ್ ಅವರ ಲೇಟೆಸ್ಟ್ ಬ್ಲ್ಯಾಕ್ ಸೀರೆ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕಪ್ಪು ಸೀರೆಯಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

Read Full Story
05:18 PM (IST) Sep 18

Karnataka News Live ಲೇಟ್ ನೈಟ್ ಹೊಟ್ಟೆ ಬಿರಿಯುವಷ್ಟು ಊಟ ಮಾಡ್ತೀರಾ? ಹಾಗಿದ್ರೆ ನಿಮ್ಮನ್ನು ಆ ದೇವ್ರೇ ಕಾಪಾಡ್ಬೇಕು.. ಹುಷಾರ್!

ಆರೋಗ್ಯ ಕಾಪಾಡಿಕೊಳ್ಳಲು ಆಹಾರದ ಗುಣಮಟ್ಟದಷ್ಟೇ ಅದರ ಸಮಯಕ್ಕೂ ಗಮನ ನೀಡುವುದು ಮುಖ್ಯ. ತಡರಾತ್ರಿ ಊಟ ಮಾಡುವ ಅಭ್ಯಾಸವನ್ನು ಹೊಂದಿರುವವರು ತಮ್ಮ ದಿನಚರಿಯನ್ನು ಪರಿಶೀಲಿಸಿ, ಸಾಧ್ಯವಾದಷ್ಟು ನಿಯಮಿತ ಸಮಯದಲ್ಲಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.. ಇಲ್ಲದಿದ್ದರೆ ಅಪಾಯ ಎದುರಾಗಬಹುದು, ಎಚ್ಚರ!

Read Full Story
05:15 PM (IST) Sep 18

Karnataka News Live TMC - ಮಮತಾಗೆ ಬಿಗ್ ಶಾಕ್ - ಟಿಎಂಸಿ ಹೆಸರು, ಚಿಹ್ನೆ ಎರಡೂ ಫ್ರೀಜ್; ಹೀನಾಮಾನ ಸ್ಥಿತಿಗೆ ತಲುಪಿದ ದೀದಿ! ಮರುಕಳಿಸಿದ ಮಹಾರಾಷ್ಟ್ರ ನೆನಪು!

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ ಆಂತರಿಕ ಬಂಡಾಯದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಫ್ರೀಜ್ ಮಾಡಿದೆ. ಮಮತಾ ಬ್ಯಾನರ್ಜಿ ಬಣಕ್ಕೆ ದಶಕಗಳ ಕಾಲವಿದ್ದ 'ಜೋಡ ಹುಲ್ಲು-ಹೂವು' ಗುರುತು ಕೈತಪ್ಪಿರುವುದು ಮಮತಾಗೆ ದೊಡ್ಡ ಹಿನ್ನಡೆಯಾಗಿದೆ.

Read Full Story
05:12 PM (IST) Sep 18

Karnataka News Live ಡಬಲ್‌ ರಾಯಲ್ಟಿ ವಿವಾದ - ರಾಜ್ಯಾದ್ಯಂತ ಕಲ್ಲು ಗಣಿ, ಜೆಲ್ಲಿ ಕ್ರಷರ್, ಎಂ-ಸ್ಯಾಂಡ್ ಘಟಕ ಬಂದ್

ಸರ್ಕಾರವು ಒಂದೇ ಮೂಲಕ್ಕೆ ಎರಡೆರಡು ಬಾರಿ ರಾಯಲ್ಟಿ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಕಲ್ಲು ಗಣಿ, ಕ್ರಷರ್ ಮತ್ತು ಎಂ-ಸ್ಯಾಂಡ್ ಮಾಲೀಕರು ಅನಿರ್ದಿಷ್ಟಾವಧಿ ಬಂದ್ ಆರಂಭಿಸಿದ್ದಾರೆ.

Read Full Story
04:45 PM (IST) Sep 18

Karnataka News Live ದರ್ಗಾ ಶರೀಫ್ ಉರ್ಸ್ ಮತ್ತು ಮುಂಬರುವ ಹಬ್ಬಗಳ ಪ್ರಯುಕ್ತ ನೈಋತ್ಯ ರೈಲ್ವೆಯ ಈ ನಿಲ್ದಾಣಗಳಲ್ಲಿ ಮಹತ್ವದ ಬದಲಾವಣೆ!

ದರ್ಗಾ ಶರೀಫ್ ಉರ್ಸ್ ಮತ್ತು ಮುಂಬರುವ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ನಾಗಲಾವಿ ಮತ್ತು ರಾಣಿ ನಿಲ್ದಾಣಗಳಲ್ಲಿ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ. ಅಲ್ಲದೆ, ವಿಶಾಖಪಟ್ಟಣಂ-ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲಿನ ಸೇವೆಯನ್ನು ವಿಸ್ತರಿಸಲಾಗಿದೆ.
Read Full Story