06:44 AM (IST) Oct 04

Karnataka News Live 4 October 2026 ಮೈಸೂರು ದಸರಾ ಉದ್ಘಾಟನೆ - ಈ ಬಾರಿ ಹಲವು ಹೊಸ ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ ನಾಡಹಬ್ಬ

ಈ ಬಾರಿಯ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ವ ಜನಾಂಗದ ಶಾಂತಿಯ ಸಂದೇಶ ಸಾರಲು 500 ವಿವಿಧ ಧರ್ಮಗುರುಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ತ್ರಿವಿಧ ದಳಗಳ ಪಥಸಂಚಲನ, ಕ್ರೀಡಾಪಟುಗಳು ಹಾಗೂ ಚಲನಚಿತ್ರ ತಾರೆಯರು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

Read Full Story
06:35 AM (IST) Oct 04

Karnataka News Live 4 October 2026 Hassan - 23 ಕೋಟಿ ವೆಚ್ಚದ ಹೊಸ ಸೇತುವೆ ಆರಂಭದಲ್ಲೇ ಕಳಪೆ ಕಾಮಗಾರಿ; ಕಂಬಗಳಲ್ಲಿ ಬಿರುಕು

ರಾಮನಾಥಪುರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ 23 ಕೋಟಿ ವೆಚ್ಚದ ಹೊಸ ಸೇತುವೆ ಕಾಮಗಾರಿಯು ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸೇತುವೆಯ ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣವನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ.

Read Full Story
06:23 AM (IST) Oct 04

Karnataka News Live 4 October 2026 ಡಿ. 4 ರಿಂದ 13 ರವರೆಗೆ 200 ಕೋಟಿ ವೆಚ್ಚದಲ್ಲಿ ಬೆಂಗಳೂರು ಜಾತ್ರೆ; ಕೃಷ್ಣಬೈರೇಗೌಡ

ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ 'ಬೆಂಗಳೂರು ಜಾತ್ರೆ'ಯು ಡಿಸೆಂಬರ್ 4 ರಿಂದ 13 ರವರೆಗೆ ನಡೆಯಲಿದೆ. 20 ಕೋಟಿ ರೂ. ವೆಚ್ಚದಲ್ಲಿ 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಕಾರ್ಯಕ್ರಮಗಳ ಮಾಹಿತಿಗಾಗಿ ಪ್ರತ್ಯೇಕ ವೆಬ್‌ಸೈಟ್ ಬಿಡುಗಡೆ ಮಾಡಲಾಗುವುದು.
Read Full Story
06:17 AM (IST) Oct 04

Karnataka News Live 4 October 2026 Bengaluru - ಇ-ಕೆವೈಸಿ ಮಾಡಿಸಲು ₹500 ವಸೂಲಿ - ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದು

ಬೆಂಗಳೂರಿನ ಚಂದ್ರಪ್ಪನಗರದಲ್ಲಿ ಪಡಿತರ ಚೀಟಿದಾರರಿಂದ ಇ-ಕೆವೈಸಿ ಮಾಡಲು ₹500 ಪಡೆದ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಆಹಾರ ಇಲಾಖೆ ರದ್ದುಗೊಳಿಸಿದೆ. ನಿಯಮಗಳ ಉಲ್ಲಂಘನೆ ಹಾಗೂ ಹಣ ವಸೂಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Read Full Story
06:09 AM (IST) Oct 04

Karnataka News Live 4 October 2026 2 ವರ್ಷದಲ್ಲಿ KPSCಯ 13 ನೇಮಕಾತಿಯಲ್ಲಿ ಅಕ್ರಮ! ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಆಯೋಗದ ಕೆಲ ಸದಸ್ಯರು ಸರ್ಕಾರಿ ಹುದ್ದೆಗಳನ್ನು ಮಾರಾಟ ಮಾಡಿರುವ ಹೊಸ ಮಾದರಿಯನ್ನು ಇ.ಡಿ. ಬಯಲಿಗೆಳೆದಿದೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ವಿಚಾರಣೆ ವೇಳೆ, ಆಯ್ಕೆ ಪಟ್ಟಿಗೂ ಮುನ್ನವೇ ಅರ್ಹತಾ ಪಟ್ಟಿ ಪಡೆದು ಅಭ್ಯರ್ಥಿಗಳೊಂದಿಗೆ ಕೋಟ್ಯಂತರ ರೂಪಾಯಿ ಡೀಲ್ ನಡೆಸಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
Read Full Story
06:03 AM (IST) Oct 04

Karnataka News Live 4 October 2026 Bengaluru To Belagavi - ವಂದೇ ಭಾರತ ರೈಲು 2 ಗಂಟೆ ವಿಳಂಬ, ಪ್ರಯಾಣಿಕರ ಪರದಾಟ, ಆಕ್ರೋಶ

ಬೆಂಗಳೂರಿನಿಂದ ಬೆಳಗಾವಿಗೆ ತೆರಳಬೇಕಿದ್ದ ವಂದೇ ಭಾರತ್ ರೈಲು ಎರಡು ಗಂಟೆ ವಿಳಂಬವಾದ ಕಾರಣ ಹುಬ್ಬಳ್ಳಿ ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಯಾವುದೇ ಮುನ್ಸೂಚನೆ ನೀಡದ ಕಾರಣ, ಮೂಲಸೌಕರ್ಯಗಳಿಲ್ಲದ ಪ್ಲಾಟ್‌ಫಾರ್ಮ್‌ನಲ್ಲಿ ವೃದ್ಧರು ಸೇರಿದಂತೆ ಹಲವರು ಗಂಟೆಗಟ್ಟಲೆ ಕಾಯಬೇಕಾಯಿತು.
Read Full Story
05:55 AM (IST) Oct 04

Karnataka News Live 4 October 2026 Pak - ಪಾಕಿಸ್ತಾನದ ಉಗ್ರರ ಜೊತೆ ನಂಟು - ಬೀದರ್ ಜಿಲ್ಲೆಯ ಭಾಲ್ಕಿಯ ಹಿಂದು ಯುವಕ ಅರೆಸ್ಟ್

ಪಾಕಿಸ್ತಾನದ ಉಗ್ರ ಶಹಜಾದ್ ಭಟ್ಟಿ ಗ್ಯಾಂಗ್ ಹಾಗೂ ಶಸ್ತ್ರಾಸ್ತ್ರ ಕಳ್ಳಸಾಗಣೆದಾರರೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಬೀದರ್‌ನ ಭಾಲ್ಕಿ ತಾಲೂಕಿನ ವಿಶಾಲಕುಮಾರ ಮೇತ್ರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮೊಬೈಲ್ ಪರಿಶೀಲಿಸಿದಾಗ ದೇಶ ವಿರೋಧಿ ಚಟುವಟಿಕೆಗಳು ಮತ್ತು ಅಕ್ರಮ ಶಸ್ತ್ರಾಸ್ತ್ರ ಖರೀದಿಯ ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ.
Read Full Story
05:40 AM (IST) Oct 04

Karnataka News Live 4 October 2026 ನನಗೆ ಹೆಣ್ಣು ಹುಡುಕಿಕೊಡಿ ಸಿಎಂ ಸಾರ್‌ - ಅರ್ಜಿ ಕೊಟ್ಟ ಯುವರೈತ, ಇದು 6ನೇ ಗ್ಯಾರಂಟಿ ಮಾಡಿ

ಪ್ರಜಾಸೇವಾ ಆಂದೋಲನದಲ್ಲಿ ಯುವಕನೊಬ್ಬ ರೈತರಿಗೆ ಹೆಣ್ಣು ಕೊಡಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾನೆ. ರೈತ ಯುವಕರಿಗೆ ವಧು ಸಿಗುತ್ತಿಲ್ಲ, ಇದನ್ನು 6ನೇ ಗ್ಯಾರಂಟಿಯಾಗಿ ಘೋಷಿಸಿ ಎಂದು ಆತ ಕೇಳಿಕೊಂಡಿದ್ದಾನೆ. ಈ ವಿಚಿತ್ರ ಬೇಡಿಕೆ ಕೇಳಿ ಸಭಾಂಗಣದಲ್ಲಿ ನಗು ಹೊಮ್ಮಿತು.

Read Full Story