- Home
- Life
- Health
- Stomach Ulcer: ಟೈಮ್‌ಗೆ ಸರಿಯಾಗಿ ಊಟ ಮಾಡದಿದ್ದರೆ ಅಲ್ಸರ್ ಬರುತ್ತಾ? ಸೀಕ್ರೆಟ್ ಮಾಹಿತಿ ಇಲ್ಲಿದೆ!
Stomach Ulcer: ಟೈಮ್‌ಗೆ ಸರಿಯಾಗಿ ಊಟ ಮಾಡದಿದ್ದರೆ ಅಲ್ಸರ್ ಬರುತ್ತಾ? ಸೀಕ್ರೆಟ್ ಮಾಹಿತಿ ಇಲ್ಲಿದೆ!
ಇಂದಿನ ಬ್ಯುಸಿ ಲೈಫ್‌ನಲ್ಲಿ ಟೈಮ್‌ಗೆ ಸರಿಯಾಗಿ ಊಟ ಮಾಡದಿರುವುದು, ಫಾಸ್ಟ್ ಫುಡ್‌ಗೆ ಅಡಿಕ್ಟ್ ಆಗುವುದು ಕಾಮನ್ ಆಗಿದೆ. ಇದರಿಂದ ಅಲ್ಸರ್ ಬರುವ ಸಾಧ್ಯತೆ ಇದೆ. ಅಲ್ಸರ್‌ನ ಪ್ರಮುಖ ಲಕ್ಷಣಗಳು ಇಲ್ಲಿವೆ.

ಹೊಟ್ಟೆಯಲ್ಲಿ ವಿಪರೀತ ಉರಿ
ಹೊಟ್ಟೆಯ ಮೇಲ್ಭಾಗದಲ್ಲಿ ವಿಪರೀತ ಉರಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಊಟದ ನಂತರ ಅಥವಾ ರಾತ್ರಿ ವೇಳೆ ಈ ಸಮಸ್ಯೆ ಹೆಚ್ಚಾಗುತ್ತದೆ. ಊಟ ಮಾಡಿದ ತಕ್ಷಣ ಸ್ವಲ್ಪ ರಿಲೀಫ್ ಸಿಗಬಹುದು.
ಹೊಟ್ಟೆ ಉಬ್ಬರ ಮತ್ತು ವಾಂತಿ
ತುಂಬಾ ಖಾರ ಅಥವಾ ಎಣ್ಣೆಯಂಶ ಇರುವ ಆಹಾರ ತಿಂದಾಗ ಹೊಟ್ಟೆ ಭಾರವಾಗುತ್ತದೆ. ಹೊಟ್ಟೆ ಉಬ್ಬರ ಮತ್ತು ವಾಂತಿ ಬರುವಂತಹ ಅನುಭವ ಕೂಡ ಆಗುತ್ತದೆ.
ಹಸಿವಾಗದಿರುವುದು
ಸರಿಯಾಗಿ ಹಸಿವಾಗುವುದಿಲ್ಲ. ಸ್ವಲ್ಪ ಊಟ ಮಾಡಿದರೂ ಹೊಟ್ಟೆ ತುಂಬಿದಂತೆ ಅನಿಸುತ್ತದೆ. ಇದರಿಂದ ದಿನ ಕಳೆದಂತೆ ದೇಹದ ತೂಕ ಕೂಡ ಕಡಿಮೆಯಾಗುತ್ತದೆ.
ಎದೆ ಉರಿ ಮತ್ತು ಅಸಿಡಿಟಿ
ಆಗಾಗ ಅಸಿಡಿಟಿ ಸಮಸ್ಯೆ ಕಾಡುತ್ತದೆ. ಹುಳಿ ತೇಗು ಬರುವುದು ಮತ್ತು ಬಾಯಿಯಲ್ಲಿ ಹುಳಿ ರುಚಿ ಇರುವುದು ಇದರ ಪ್ರಮುಖ ಲಕ್ಷಣವಾಗಿದೆ.
ಗಂಭೀರ ಲಕ್ಷಣಗಳು
ರಕ್ತ ವಾಂತಿ, ಕಪ್ಪು ಬಣ್ಣದ ಮಲ ವಿಸರ್ಜನೆ, ತೂಕ ಇಳಿಕೆ ಮತ್ತು ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಇದು ರಕ್ತಸ್ರಾವದ ಅಲ್ಸರ್ ಲಕ್ಷಣವಾಗಿರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

