Natural Spices for a Healthy Heart Diet: ಸರಿಯಾದ ಆಹಾರ ಮತ್ತು ವ್ಯಾಯಾಮ ಇಲ್ಲದಿದ್ದಾಗ ಹೃದ್ರೋಗ ಉಂಟಾಗುತ್ತದೆ. ಅಡುಗೆಮನೆಯಲ್ಲಿ ಬಳಸುವ ಈ ಮಸಾಲೆ ಪದಾರ್ಥಗಳಿಂದ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.
Karnataka News Live: ಹೃದಯ ಕಾಯಿಲೆ ತಪ್ಪಿಸಲು ನಿಮ್ಮ ಆಹಾರದಲ್ಲಿರಲಿ ಈ 4 ಮಸಾಲೆ ಪದಾರ್ಥಗಳು!

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಯಾರೂ ಮಾತಾಡಬಾರದು ಎಂದು ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ ಫರ್ಮಾನು ಹೊರಡಿಸಿತ್ತು. ಈಗ ಮತ್ತೆ ಸಿಎಂ ಬದಲಾವಣೆ ಕೂಗು ಎದ್ದಿದೆ. ಕೆಲವು ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಮುಖಂಡರು 'ಡಿಕೆಶಿ ಸಿಎಂ ಆಗುವುದು ನಿಶ್ಚಿತ' ಎಂದು ಹೇಳಿದ್ದಾರೆ. ಆದರೆ ಈ ಸಾಧ್ಯತೆಯನ್ನು ಖುದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ. ಇಂಥ ಹೇಳಿಕೆಯನ್ನು ಯಾರೂ ನೀಡಬಾರದು ಎಂದಿರುವ ಡಿಕೆಶಿ, ಈ ಹೇಳಿಕೆ ನೀಡಿದವರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.
Karnataka News Live ಹೃದಯ ಕಾಯಿಲೆ ತಪ್ಪಿಸಲು ನಿಮ್ಮ ಆಹಾರದಲ್ಲಿರಲಿ ಈ 4 ಮಸಾಲೆ ಪದಾರ್ಥಗಳು!
Karnataka News Live ತುಮಕೂರು - ತಾಂತ್ರಿಕದೋಷದಿಂದ ಕಾಂತಾರ ಸಿನಿಮಾ ಶೋ ರದ್ದು, ರೊಚ್ಚಿಗೆದ್ದ ಪ್ರೇಕ್ಷಕರು!
Tumakuru INOX technical glitch: ತುಮಕೂರಿನ ಎಸ್ ಮಾಲ್ ಐನಾಕ್ಸ್‌ನಲ್ಲಿ 'ಕಾಂತಾರ' ಪ್ರದರ್ಶನದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಪ್ರದರ್ಶನ ರದ್ದುಗೊಳಿಸಲು ಮುಂದಾದಾಗ ಪ್ರೇಕ್ಷಕರು ರೊಚ್ಚಿಗೆದ್ದರು. ಪ್ರೇಕ್ಷಕರ ಒತ್ತಾಯಕ್ಕೆ ಮಣಿದ ಸಿಬ್ಬಂದಿ, ಒಂದೂವರೆ ಗಂಟೆ ಬಳಿಕ ಸಿನಿಮಾ ಪ್ರದರ್ಶಿಸಿದರು.
Karnataka News Live Bengaluru Rains - ಸಂಜೆ ಸುರಿದ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮಿನಿಫಾಲ್ಸ್!
Karnataka News Live BBK 12 - ಜಾನ್ವಿ ರೀತಿಯಲ್ಲಿರೋ ಆಂಟಿಗಳಂದ್ರೆ ನನಗಿಷ್ಟ ಎಂದ ಅಭಿಷೇಕ್ ಫ್ಲರ್ಟ್
Karnataka News Live ಶಿವಮೊಗ್ಗ - ಜಾತಿ ಗಣತಿ ಹೆಸರಲ್ಲಿ ಒಂಟಿ ಮಹಿಳೆ ಮೇಲೆ ದರೋಡೆ ಯತ್ನ - ಖತರ್ನಾಕ್ ದಂಪತಿ ಅರೆಸ್ಟ್
Caste survey crime: ಶಿವಮೊಗ್ಗದ ಆಜಾದ್ ನಗರದಲ್ಲಿ, ಜಾತಿ ಸಮೀಕ್ಷೆಯ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ಬಂದ ದಂಪತಿಗಳು ದರೋಡೆಗೆ ಯತ್ನಿಸಿದ್ದಾರೆ. ಸ್ಥಳೀಯರಿಂದ ಹಿಡಿದು ಪೊಲೀಸರಿಗೆ ಒಪ್ಪಿಸಲ್ಪಟ್ಟ ಆರೋಪಿಗಳು, ಸಂತ್ರಸ್ತೆಯ ಸಂಬಂಧಿಕರೇ ಆಗಿದ್ದು, ಅವರ ಬ್ಯಾಗ್‌ನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ.
Karnataka News Live ಮಹಾರಾಷ್ಟ್ರದ ಸೀರೋಡಾ ಸಮುದ್ರದಲ್ಲಿ ಘನಘೋರ ದುರಂತ - ದಸರಾ ರಜೆ ಕಳೆಯಲು ಹೋಗಿದ್ದ ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿ, ನಾಲ್ವರು ಕಣ್ಮರೆ!
Siroda beach Maharashtra tragedy :ದಸರಾ ರಜೆ ಕಳೆಯಲು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರಕ್ಕೆ ತೆರಳಿದ್ದ ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿದ್ದಾರೆ. ನಾಲ್ವರು ಕಣ್ಮರೆಯಾಗಿದ್ದು, ಒಬ್ಬ ಮಹಿಳೆಯನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರ ಶೋಧಕಾರ್ಯ ಮುಂದುವರೆದಿದೆ.
Karnataka News Live Karna Serial ಮದ್ವೆ ವಿಡಿಯೋ ಶೇರ್ ಮಾಡಿ ಬಿಗ್ ಅಪ್ಡೇಟ್ ಕೊಟ್ಟ ನಮ್ರತಾ ಗೌಡ- ಫ್ಯಾನ್ಸ್ ಬೇಸರ
Karnataka News Live ಮನೆ-ಮನೆ ಜಾತಿ ಗಣತಿಗೆ ಹೋದ ಸರ್ಕಾರಿ ಶಾಲೆಯ ಟೀಚರ್ ದಾರಿ ಮಧ್ಯದಲ್ಲಿಯೇ ಸಾವು!
ಬಾಗಲಕೋಟೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯವನ್ನು ಮುಗಿಸಿ ಮಗನೊಂದಿಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದ ಶಿಕ್ಷಕಿ ದಾನಮ್ಮ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಘಟನೆ ಸರ್ಕಾರಿ ನೌಕರರಲ್ಲಿ ಆತಂಕ ಸೃಷ್ಟಿಸಿದೆ.
Karnataka News Live ಕಾಂತಾರ ಚಾಪ್ಟರ್-1 ಬಗ್ಗೆಯೂ ತುಟಿಬಿಚ್ಚಿದ ಕರವೇ ನಾರಾಯಣಗೌಡ; ಪ್ರತಿಕ್ರಿಯೆ ನೀಡಿದ ರಿಷಬ್ ಶೆಟ್ಟಿ!
ಕಾಂತಾರ ಚಾಪ್ಟರ್-1 ಸಿನಿಮಾ ವಿಶ್ವದ 30 ದೇಶಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಈ ಬಗ್ಗೆ ದೇಶ-ವಿದೇಶಗಳಿಂದ ಮೆಚ್ಚುಗೆ ಮಹಾಪೂರ ಬರುತ್ತಿವೆ. ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ನಟ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
Karnataka News Live Hiriyur road accident - ಚಿತ್ರದುರ್ಗ ಬಳಿ ಕಾರು ಪಲ್ಟಿ, ಯಾದಗಿರಿ ಮೂಲದ ಮಗು ಸೇರಿ ಮೂವರು ದಾರುಣ ಸಾವು!
Hiriyur road accident: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾದಗಿರಿ ಮೂಲದವರೆಂದು ಗುರುತಿಸಲಾದ ಮೃತರ ದುರ್ಘಟನೆಗೆ ಚಾಲಕನ ನಿಯಂತ್ರಣ ತಪ್ಪಿದ್ದೇ ಕಾರಣ ಎಂದು ಹೇಳಲಾಗಿದೆ. ಕಳವಳ ಮೂಡಿಸಿದೆ.
Karnataka News Live ಕಾಂತಾರ-1 ಸಿನಿಮಾ ನೋಡೋಕೆ ಇಡೀ ಥಿಯೇಟರ್ ಟಿಕೆಟ್ ಖರೀದಿಸಿದ ಪ್ರತಾಪ್ ಸಿಂಹ; ಕಾರ್ಯಕರ್ತರಿಗೆ ಆಹ್ವಾನ!
ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ, ತಮ್ಮ ಪಕ್ಷದ ಕಾರ್ಯಕರ್ತರಿಗಾಗಿ ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ 'ಕಾಂತಾರ ಚಾಪ್ಟರ್-1' ಚಿತ್ರದ ಸಂಪೂರ್ಣ ಸ್ಕ್ರೀನ್ ಅನ್ನು ಬುಕ್ ಮಾಡಿದ್ದಾರೆ. ತಮ್ಮ ವೈಯಕ್ತಿಕ ₹69,000 ಹಣ ಖರ್ಚು ಮಾಡಿದ್ದಾರೆ.
Karnataka News Live Madikeri Dasara 2025 - ಮಡಿಕೇರಿ ದಸರಾಕ್ಕೆ ಕಪ್ಪುಚುಕ್ಕೆ ಇಟ್ಟ ಪೊಲೀಸರ ಮೇಲಿನ ಹಲ್ಲೆ, ವ್ಯಕ್ತಿ ಬಂಧನ
Madikeri Dasara 2025: ಮಡಿಕೇರಿ ದಸರಾ ಮಂಟಪ ಪ್ರಶಸ್ತಿ ವಿಚಾರವಾಗಿ ಗಲಾಟೆ ನಡೆದಿದೆ. ತೀರ್ಪಿನ ಬಗ್ಗೆ ಅಸಮಾಧಾನಗೊಂಡ ಕರವಲೆ ಭಗವತಿ ದೇವಾಲಯ ಸಮಿತಿ ವೇದಿಕೆ ಏರಿ ದಾಂಧಲೆ ನಡೆಸಿದೆ. ಈ ವೇಳೆ ಗಲಾಟೆ ನಿಯಂತ್ರಿಸಲು ಹೋದ ಡಿವೈಎಸ್ಪಿ ಸೂರಜ್ ಅವರ ಮೇಲೆ ಹಲ್ಲೆ. ವೈಭವದ ದಸರಾಕ್ಕೆ ಕಪ್ಪುಚುಕ್ಕಿ ಇಟ್ಟಿದೆ.
Karnataka News Live ಯಾದಗಿರಿ - ಇ-ಖಾತಾ ಮಾಡಿಕೊಡಲು ₹8000 ಲಂಚ, ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್
Lokayukta raid Yadgir city council corruption: ಯಾದಗಿರಿ ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ, ಇ-ಖಾತಾ ಮಾಡಿಕೊಡಲು ₹8,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅರ್ಜಿದಾರರಿಂದ ₹5,000 ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
Karnataka News Live ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಆರೋಪಿಗಳು ಖುಲಾಸೆ, ತೀರ್ಪಿನ ವಿಷಯ ತಿಳಿದು ತಾಯಿ ಕಣ್ಣೀರು!
Karnataka News Live ಮಲೆ ಮಹದೇಶ್ವರ ಕಾಡಲ್ಲಿ ಮತ್ತೊಂದು ಹುಲಿ ಬಲಿ, ಹತ್ಯೆಗೆ ಕಾರಣ ನಿಗೂಢ!
Karnataka News Live ಕಾಂತಾರ ಚಾಪ್ಟರ್-1 ಸಿನಿಮಾ ವೀಕ್ಷಕರಿಗೆ ಸರ್ಕಾರದಿಂದಲೇ ಕ್ಯಾಶ್‌ಬ್ಯಾಕ್; ಟಿಕೆಟ್ ದಾಖಲೆ ಜೋಪಾನವಾಗಿಟ್ಟಿಕೊಳ್ಳಿ!
ಮಲ್ಟಿಪ್ಲೆಕ್ಸ್‌ಗಳಲ್ಲಿ ₹200 ಟಿಕೆಟ್ ದರ ನಿಗದಿಪಡಿಸುವ ಸರ್ಕಾರದ ಆದೇಶ ಕುರಿತು ಹೈಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಅಂತಿಮ ತೀರ್ಪು ಸರ್ಕಾರದ ಪರ ಬಂದರೆ, ಮಲ್ಟಿಪ್ಲೆಕ್ಸ್‌ಹಳು ಗ್ರಾಹಕರಿಂದ ಪಡೆದ ಹೆಚ್ಚುವರಿ ಹಣ ವಾಪಸ್ ಕೊಡಲಿವೆ. ಟಿಕೆಟ್‌ಗಳನ್ನು ಭದ್ರವಾಗಿರಿಸಿಕೊಳ್ಳಲು ಸರ್ಕಾರ ಸೂಚಿಸಿದೆ.
Karnataka News Live ಚಿಕ್ಕೋಡಿ - ಕಾಂಗ್ರೆಸ್ ಸರ್ಕಾರ ಬದುಕಿದ್ದರೆ ರೈತರಿಗೆ ಪರಿಹಾರ ಕೊಟ್ಟು ಸಾಬೀತುಪಡಿಸಲಿ -ಸಿಟಿ ರವಿ ಸವಾಲು
Karnataka News Live ಕೈವಾರ ತಾತಯ್ಯನಿಗೆ ಹೋಗಿ ಬರುತ್ತಿದ್ದ ಅಕ್ಕ-ತಂಗಿ ಸ್ಕೂಟರ್‌ನಿಂದ ಬಿದ್ದು ದಾರುಣ ಸಾವು!
ಹೊಸಕೋಟೆ-ಚಿಂತಾಮಣಿ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ-ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿಯ ನಿರ್ಲಕ್ಷ್ಯದಿಂದ ಬಿದ್ದಿದ್ದ ಜಲ್ಲಿಕಲ್ಲುಗಳ ಮೇಲೆ ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ, ಹಿಂಬದಿಯಿಂದ ಬಂದ ಕ್ಯಾಂಟರ್ ಅವರ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ.
Karnataka News Live ಚಿಕ್ಕಬಳ್ಳಾಪುರದಲ್ಲಿ ಲಾರಿಗೆ ಡಿಕ್ಕಿ ಹೊಡೆದ ಕಾರು, ಮಂತ್ರಾಲಯ ರಾಘವೇಂದ್ರಸ್ವಾಮಿ ಭಕ್ತೆ ಸ್ಥಳದಲ್ಲೇ ಸಾವು!
ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿವೆ. ಮಂತ್ರಾಲಯದಿಂದ ಹಿಂದಿರುಗುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ತುಮಕೂರಿನ ಮಹಿಳೆಯೊಬ್ಬರು ಮೃತಪಟ್ಟರೆ, ಮತ್ತೊಂದೆಡೆ ಬೈಕ್‌ಗಳ ಡಿಕ್ಕಿಯಿಂದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.