Siroda beach Maharashtra tragedy :ದಸರಾ ರಜೆ ಕಳೆಯಲು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರಕ್ಕೆ ತೆರಳಿದ್ದ ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿದ್ದಾರೆ.  ನಾಲ್ವರು ಕಣ್ಮರೆಯಾಗಿದ್ದು, ಒಬ್ಬ ಮಹಿಳೆಯನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರ ಶೋಧಕಾರ್ಯ ಮುಂದುವರೆದಿದೆ.

ಬೆಳಗಾವಿ (ಅ.3): ದಸರಾ ರಜೆ ಕಳೆಯಲು ಕಡಲತೀರಕ್ಕೆ ಪ್ರವಾಸ ಹೋಗಿದ್ದ ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿ ನಾಲ್ವರು ಕಣ್ಮರೆಯಾದ ಘೋರ ದುರಂತ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರದಲ್ಲಿ ನಡೆದಿದೆ.

ಇಸ್ರಾರ್ ಕಿತ್ತೂರ (17) ಇಬಾದ್ ಕಿತ್ತೂರ (13) ಅಳ್ನಾವರ ಮೂಲದ ನಮೀರಾ ಅಕ್ತರ್ (16) ಮೃತ ದುರ್ದೈವಿಗಳು, ಲೋಂಡಾದ ಪ್ರಹಾನಾ ಕಿತ್ತೂರ (34) ಎಂಬ ಮಹಿಳೆ ರಕ್ಷಣೆ ಮಾಡಲಾಗಿದ್ದು, ಮಹಾರಾಷ್ಟ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಇರ್ಫಾನ್ ಕಿತ್ತೂರ (36) ಇಕ್ವಾನ್ ಕಿತ್ತೂರ (15 ಮಹಾರಾಷ್ಟ್ರ ಮೂಲದ ಪರಯಾನ್ ಮನಿಯರ್ (20) ಜಾಕಿರ್ ಮನಿಯರ್ (13) ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಅಗ್ನಿಶಾಮಕ, ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ.

ಇದನ್ನೂ ಓದಿ: Hiriyur road accident: ಚಿತ್ರದುರ್ಗ ಬಳಿ ಕಾರು ಪಲ್ಟಿ, ಯಾದಗಿರಿ ಮೂಲದ ಮಗು ಸೇರಿ ಮೂವರು ದಾರುಣ ಸಾವು!

ದಸರಾ ರಜೆ ಕಳೆಯಲು ಹೋಗಿದ್ದ ಕುಟುಂಬ:

ದಸರಾ ಹಬ್ಬದ ರಜೆಯ ಹಿನ್ನೆಲೆ 8 ಜನರನ್ನು ಒಳಗೊಂಡ ಈ ಕುಟುಂಬ ಸೀರೋಡಾ ಸಮುದ್ರ ತೀರಕ್ಕೆ ಪ್ರವಾಸಕ್ಕೆ ಬಂದಿತ್ತು. ಸಮುದ್ರದಲ್ಲಿ ಈಜಾಡುತ್ತಿದ್ದರು. ಹಠಾತ್ ಬಲಿಷ್ಠ ಅಲೆಗಳು ಎಲ್ಲರನ್ನೂ ಕೊಚ್ಚಿಕೊಂಡು ಹೋಗಿದೆ. ಈ ಪೈಕಿ. ಒಬ್ಬ ಮಹಿಳೆಯಾದ ಪ್ರಹಾನಾ ಕಿತ್ತೂರ (34 ವರ್ಷ) ಅವರನ್ನು ಸ್ಥಳೀಯರು ತಕ್ಷಣ ರಕ್ಷಣೆಗೆ ದಾವಿಸಿ ರಕ್ಷಣೆ ಮಾಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಸಾವಿನ ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಆರೋಪಿಗಳು ಖುಲಾಸೆ, ತೀರ್ಪಿನ ವಿಷಯ ತಿಳಿದು ತಾಯಿ ಕಣ್ಣೀರು!

ಮುಂದುವರಿದ ಶೋಧಕಾರ್ಯ:

ಸಿಂಧುದುರ್ಗ ಜಿಲ್ಲೆಯ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಮತ್ತು ಸ್ಥಳೀಯ ಮೀನುಗಾರರ ಸಹಾಯ ಪಡೆಯಲಾಗುತ್ತಿದೆ. ಡ್ರೋನ್‌ಗಳು, ಡೈವರ್‌ಗಳು, ಮತ್ತು ಬೋಟ್‌ಗಳನ್ನು ಬಳಸಿ ಶೋಧವನ್ನು ವಿಸ್ತರಿಸಲಾಗಿದೆ. ಈ ದುರಂತದಿಂದ ಸದಸ್ಯರನ್ನು ಕಳೆದುಕೊಂಡ ಕುಟುಂಬದ ಅಕ್ರಂದನ ಮುಗಿಲುಮುಟ್ಟಿದೆ.