ಕರ್ಣ ಸೀರಿಯಲ್‌ನಲ್ಲಿ ನಿತ್ಯಾ ಪಾತ್ರಕ್ಕೆ ವೀಕ್ಷಕರಿಂದ ದ್ವೇಷ ವ್ಯಕ್ತವಾಗುತ್ತಿರುವ ಬಗ್ಗೆ ನಟಿ ನಮ್ರತಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯಾಳ ಮದುವೆಯ ಸಂಚಿಕೆಯಲ್ಲಿ ಆಕೆ ಗರ್ಭಿಣಿ ಎನ್ನುವ ಸತ್ಯ ಕರ್ಣನಿಗೆ ತಿಳಿಯುವುದರೊಂದಿಗೆ ಕಥೆಯು ರೋಚಕ ತಿರುವು ಪಡೆಯಲಿದೆ.
ಇದೀಗ ಕರ್ಣ ಸೀರಿಯಲ್ ( Karna Serial ) ಯಾರೂ ಊಹಿಸದ ಟ್ವಿಸ್ಟ್ ಮೇಲೆ ಟ್ವಿಸ್ಟ್ ನಡೆಯುತ್ತಿದೆ. ಈ ಸೀರಿಯಲ್‌ನಲ್ಲಿ ಮೊದಲಿನಿಂದಲೂ ನಿತ್ಯಾಗೆ ಕರ್ಣನನ್ನು ಕಂಡರೆ ಆಗೋದಿಲ್ಲ. ಆಮೇಲೆ ಕರ್ಣನ ಗುಣ ಕಂಡು ಮೆಚ್ಚಿಕೊಂಡರೂ ಕರ್ಣನಿಂದ ತನ್ನ ತಂಗಿ ಅಪಾಯ ಆಗಿತ್ತು ಅಂತ ಭಾವಿಸಿ ಮತ್ತೆ ದ್ವೇಷ ಸಾಧಿಸುತ್ತಿದ್ದಾಳೆ. ತೇಜಸ್ ಹಾಗೂ ನಿತ್ಯಾ ಮದುವೆ ಫಿಕ್ಸ್ ಆಗಿದ್ದು, ಎಲ್ಲ ತಯಾರಿಯೂ ನಡೆದಿದೆ. ಅತ್ತ ನಿಧಿ ತಾನು ಕರ್ಣನನ್ನು ಮದುವೆಯಾಗುವ ಕನಸು ಕಾಣುತ್ತಿದ್ದಾಲೆ. ಈಕೆ ಕರ್ಣನನ್ನು ಲವ್ ಮಾಡುತ್ತಿರುವ ವಿಷಯ ರಮೇಶ್, ನಯನತಾರಾ ಬಿಟ್ಟು ಉಳಿದವರಿಗೆ ಯಾರಿಗೂ ಗೊತ್ತಿಲ್ಲ. ಕರ್ಣನಿಂದ ಎಷ್ಟು ಒಳ್ಳೆಯದಾಗುವುದೋ ಅಷ್ಟೇ ಅವನಿಂದ, ಅವನ ಕುಟುಂಬದಿಂದ ಸಮಸ್ಯೆ ಆಗುತ್ತದೆ ಎಂದು ನಿತ್ಯಾ ನಂಬಿಕೊಂಡು ಕೂತಿದ್ದಾಳೆ. ಇದೇ ಭಯಕ್ಕೆ ನಿಧಿ ಕೂಡ ತನ್ನ ಅಕ್ಕನ ಬಳಿ ಪ್ರೀತಿ ವಿಷಯವನ್ನು ಹೇಳಿಲ್ಲ.
ಪಾತ್ರ ಮತ್ತು ನಟಿ ವಿರುದ್ಧ ಕಟು ಮಾತು
ಇದು ಸೀರಿಯಲ್ ವಿಷಯವಾದರೆ, ಅತಿ ಎನ್ನಿಸುವಷ್ಟು ಮುಗ್ಧನಾಗಿರುವ ಕರ್ಣನ ಮೇಲೆ ನಿತ್ಯಾ ಪದೇ ಪದೇ ಕಿಡಿ ಕಾರುವುದರಿಂದ ಸೀರಿಯಲ್ ವೀಕ್ಷಕರು ನಿತ್ಯಾಳನ್ನು ತೀರಾ ಕೆಟ್ಟ ಪದಗಳಿಂದ ಬೈಯುವುದು ಇದೆ. ನೆಗೆಟಿವ್ ರೋಲ್ ಮಾಡುವುದು ಅದೊಂದು ಪಾತ್ರ ಎನ್ನುವುದನ್ನು ತಿಳಿಯದೇ ನೇರವಾಗಿ ಆ ಪಾತ್ರಧಾರಿಗೆ ಪರ್ಸನಲ್ ಆಗಿ ಬೈಯುವುದು ಎಲ್ಲಾ ಸೀರಿಯಲ್ಗಳಲ್ಲಿಯೂ ನಡೆಯುತ್ತಲೇ ಇದೆ. ಅದೇ ರೀತಿ ನಿತ್ಯಾ ಮತ್ತು ನಿತ್ಯಾ ಪಾತ್ರಧಾರಿ ನಮ್ರತಾ ಗೌಡ (Namratha Gowda) ಅವರನ್ನು ನೆಟ್ಟಿಗರು ಉಗಿಯುತ್ತಲೇ ಇರುತ್ತಾರೆ.
ನಮ್ರತಾ ಗೌಡ ಹೇಳಿದ್ದೇನು?
ಇದೀಗ ಈ ಬಗ್ಗೆ ನೊಂದು Bigg Boss ಖ್ಯಾತಿಯ ನಮ್ರತಾ ಗೌಡ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ಕರ್ಣ ಸೀರಿಯಲ್ ಮದುವೆಯ ವಿಡಿಯೋ ಹಾಕಿದ್ದಾರೆ. ಅದರ ಜೊತೆ ಅವರು, ಸುಮಾರು 23 ವರ್ಷಗಳ ಸುದೀರ್ಘ ನಟನೆಯ ಅನುಭವದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳು…. ಕೊಂಚ break ನ ನಂತರ ಕೇಳಿದ ಪಾತ್ರವೇ ನಿತ್ಯ. ಕಥೆ ಮತ್ತು ಪಾತ್ರದ ಆಳ ಕೇಳಿದಾಗ ನನಗೆ ತುಂಬ ಹಿಡಿಸಿದವಳು ಈಕೆ. ಬಲಿಷ್ಠಳು ,ಸ್ವತಂತ್ರಳು , ಸದಾ ತನಗಿಂತ ಇತರರ ಅಗತ್ಯಗಳನ್ನು ಮೊದಲು ಯೋಚಿಸುವಳು. ಇಷ್ಟೆಲ್ಲಾ layers ಗಳನ್ನು ಒಳಗೊಂಡಿರುವ ಪಾತ್ರವನ್ನು ಒಲ್ಲೆ ಎನ್ನಲು ಮಾನಸಾಗಲಿಲ್ಲ. ಇತ್ತೀಚೆಗಿನ promo ಕಂಡು ನಿತ್ಯಾಳ ಮೇಲೆ ನೀವು ತೋರಿಸುತ್ತಿರುವ ದ್ವೇಷ ಕಂಡು ಬೇಸರವುಂಟಾಯಿತು. Its okay. ನಿತ್ಯ ನಾನು ಪೋಷಿಸಿದ ಪಾತ್ರ. ತುಂಬಾ ಪ್ರೀತಿಯಿಂದ ಒಪ್ಪಿದ ಪಾತ್ರ. ಅವಳೊಂದಿಗೆ ನಾನಿದ್ದೇನೆ. ಅವಳನ್ನು ನನ್ನನ್ನು ಪ್ರೀತಿಸುವ ಅಭಿಮಾನಿಗಳು ಸದಾ ನಮ್ಮೊಂದಿಗೆ ಇರುವರು ಎಂದು ಭಾವಿಸುವೆ ಎಂದು ಬರೆದಿದ್ದಾರೆ.
ಫ್ಯಾನ್ಸ್ ಬೇಸರ
ಹೀಗೆ ನಟಿ ನೋವಿನಿಂದ ಬರೆದಿರುವುದಕ್ಕೆ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅಕ್ಕಾ ಬೇಸರ ಪಟ್ಟುಕೊಳ್ಳಬೇಡಿ. ನಿತ್ಯಳ ಜೊತೆ ನಾವಿದ್ದೇವೆ. ಇಂದು ದ್ವೇಷಿಸುವ ಮನಗಳೇ ನಾಳೆ ಪ್ರೀತಿ ಮಾಡುತ್ತವೆ ಎಂದು ನಟಿಗೆ ಸಮಾಧಾನದ ಮಾತುಗಳನ್ನೂ ಆಡಿದ್ದಾರೆ. ಮುಂದೆ ಸೀರಿಯಲ್ ಯಾವ ರೀತಿ ಟ್ವಿಸ್ಟ್ ತೆಗೆದುಕೊಳ್ಳುತ್ತದೆಯೋ ನೋಡಬೇಕು. ಇದಕ್ಕೆ ಕಾರಣ, ಸಪ್ತಪದಿ ತುಳಿಯುವಾಗ ನಿತ್ಯಳ ತಲೆ ತಿರುಗುತ್ತದೆ. ಡಾಕ್ಟರ್ ಆಗಿರೋ ಕರ್ಣ ನಾಡಿಯನ್ನು ಹಿಡಿದಾಗ ಆಕೆ ಗರ್ಭಿಣಿ ಎನ್ನುವುದು ತಿಳಿಯುತ್ತದೆ. ಮುಂದೇನು, ಅದು ಯಾರ ಮಗು ಎನ್ನುವ ಸಕತ್ ರೋಚಕ ಟ್ವಿಸ್ಟ್ ಮುಂದೆ ಬರಲಿದೆ.
